ETV Bharat / sitara

Daughters Day: ಎಂದಿಗೂ ತನ್ನ ಮಗಳಿಗೆ ಉತ್ತಮ ಸ್ನೇಹಿತೆಯಾಗಿರುವೆ ಎಂದ ಶಿಲ್ಪಾ ಶೆಟ್ಟಿ - ರಾಜ್​ ಕುಂದ್ರಾ

ನಾವು ಅಮ್ಮ-ಮಗಳಾಗಿದ್ದರೂ ಕೂಡ ಹೃದಯದಿಂದ ನಾನು ನಿನಗೆ ಎಂದಿಗೂ ಉತ್ತಮ ಸ್ನೇಹಿತೆಯಾಗಿರುವೆ ಎಂದು ಪುತ್ರಿ ಸಮೀಷಾಗೆ ನಟಿ ಶಿಲ್ಪಾ ಶೆಟ್ಟಿ ಭರವಸೆ ನೀಡಿದ್ದಾರೆ.

ಶಿಲ್ಪಾ ಶೆಟ್ಟಿ.
ಶಿಲ್ಪಾ ಶೆಟ್ಟಿ.
author img

By

Published : Sep 26, 2021, 7:41 PM IST

ಮುಂಬೈ: ಗಣೇಶ ಚತುರ್ಥಿ ಹಬ್ಬದಂದು ತಮ್ಮ ಮುದ್ದು ಮಗಳೊಂದಿನ ಫೋಟೋ ಶೇರ್​ ಮಾಡಿದ್ದ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ, ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾದ ಇಂದು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೃದಯಸ್ಪರ್ಶಿ ಪೋಸ್ಟ್​ ಮಾಡಿದ್ದಾರೆ.

"ನನಗೆ ಮತ್ತು ನನ್ನವಳಿಗೆ ಹೆಣ್ಣು ಮಕ್ಕಳ ದಿನದ ಶುಭಾಶಯಗಳು. ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು, ಸಮೀಷಾ. ನಾವು ಅಮ್ಮ-ಮಗಳಾಗಿದ್ದರೂ ಕೂಡ ಹೃದಯದಿಂದ ನಾನು ನಿನಗೆ ಎಂದಿಗೂ ಉತ್ತಮ ಸ್ನೇಹಿತೆಯಾಗಿರುವೆ ಎಂದು ಭರವಸೆ ನೀಡುವೆ. ಐ ಲವ್​ ಯೂ ಮೈ ಬೇಬಿ" ಎಂದು ಶಿಲ್ಪಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪತಿ ಜೈಲಿನಲ್ಲಿ.. ಮಕ್ಕಳೊಂದಿಗೆ ಗಣೇಶ ಹಬ್ಬದ ಆಚರಣೆಯಲ್ಲಿ ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ- ರಾಜ್​ ಕುಂದ್ರಾ ದಂಪತಿಗೆ 2012ರಲ್ಲಿ ಗಂಡು ಮಗು ವಿಯಾನ್ ಜನಿಸಿದ್ದು, 2020ರಲ್ಲಿ ಸಮೀಷಾ ಹುಟ್ಟಿದ್ದಳು. ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ರಾಜ್​ ಕುಂದ್ರಾ ಜೈಲು ಪಾಲಾದ ಕಾರಣ ಈ ಬಾರಿಯ ಗಣೇಶ ಹಬ್ಬವನ್ನು ಪತಿಯ ಅನುಪಸ್ಥಿತಿಯಲ್ಲಿ ಮಕ್ಕಳೊಂದಿಗೆ ಶಿಲ್ಪಾ ಆಚರಿಸಿದ್ದರು. ಮೊನ್ನೆಯಷ್ಟೇ ರಾಜ್​ ಕುಂದ್ರಾ ಜಾಮೀನಿನ ಮೇಲೆ ಹೊರಬಂದಿದ್ದು, "ಘೋರ ಚಂಡ ಮಾರುತದ ನಂತರ ಸುಂದರ ಸಂಗತಿಗಳು ಸಂಭವಿಸಬಹುದು" ಎಂದು ನಟಿ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ: "ಘೋರ ಚಂಡ ಮಾರುತದ ನಂತರ ಸುಂದರ ಸಂಗತಿ ಸಂಭವಿಸಬಹುದು": ಪತಿಗೆ ಜಾಮೀನು ಸಿಕ್ಕ ಖುಷಿಯಲ್ಲಿ ನಟಿ ಶಿಲ್ಪಾ ಶೆಟ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.