ರಾಜಸ್ಥಾನ: ದಂಗಲ್ ಸಿನೆಮಾ ಖ್ಯಾತಿಯ ಫಾತಿಮಾ ಸನಾ ಶೇಖ್ ತಮ್ಮ 28ನೇ ಹುಟ್ಟುಹಬ್ಬವನ್ನು ಪಾಲಿ ಜಿಲ್ಲೆಯ ದೇಸೂರಿಯ ನಾರ್ಲೈ ಕೋಟೆಯಲ್ಲಿ ಆಚರಿಸಿದರು. ನಟ ಅನಿಲ್ ಕಪೂರ್ ಕೂಡಾ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿದ್ದರು.
ಫಾತಿಮಾ ಸನಾ ಶೇಖ್ 4 ದಿನಗಳ ಹಿಂದೆ ಸಿನೆಮಾ ಚಿತ್ರೀಕರಣಕ್ಕಾಗಿ ನಾರ್ಲೈ ಕೋಟೆಗೆ ಬಂದಿದ್ದರು. ಹೀಗಾಗಿ ಅವರ ಜನ್ಮದಿನದಂದು ನಾರ್ಲೈ ಕೋಟೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇದರಲ್ಲಿ ಚಿತ್ರತಂಡವೇ ಭಾಗವಹಿಸಿತ್ತು.
ಅನಿಲ್ ಕಪೂರ್ ತಮ್ಮ ಮುಂಬರುವ ಚಿತ್ರ ಥಾರ್ ಚಿತ್ರೀಕರಣಕಕ್ಕಾಗಿ ಅದೇ ಪ್ರದೇಶದಲ್ಲಿ ತಂಗಿದ್ದು, ಪಾಲಿ ಮತ್ತು ರಾಜ್ಸಮಂಡ್ ಸ್ಥಳಗಳಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ. ಹೀಗಾಗಿ ಫಾತಿಮಾ ಸನಾ ಶೇಖ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಕಪೂರ್ ಭಾಗಿಯಾಗಿದ್ದರು.
ಅನಿಲ್ ಕಪೂರ್ ಫಾತಿಮಾ ಸನಾ ಶೇಖ್ ಮುಂದಿನ 7 ದಿನಗಳವರೆಗೆ ವಿವಿಧ ಸ್ಥಳಗಳಲ್ಲಿ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ.