ETV Bharat / sitara

ಬಾತ್​ಟಬ್​ನಲ್ಲಿ ಕುಳಿತ ಆಲಿಯಾ ಭಟ್​.. ಹಾಟ್ ಪೋಸ್​ ಕೊಟ್ಟ ನಟಿಯ ಚಿತ್ರಕ್ಕೆ ಭಾರಿ ಮೆಚ್ಚುಗೆ - ಆಲಿಯಾ ಭಟ್ ಫೋಟೋಸ್​

ನಟಿ ಆಲಿಯಾ ಭಟ್ ಬಾತ್​​ಟಬ್​​ನಲ್ಲಿ ಫೋಟೋ ಶೂಟ್​ ಮಾಡಿಸಿದ್ದು, ಈ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

Alia Bhatt poses in bathtub
ಬಾತ್​ಟಬ್​ನಲ್ಲಿ ಆಲಿಯಾ ಭಟ್ ಫೋಟೋಶೂಟ್​
author img

By

Published : Feb 19, 2022, 6:59 AM IST

ಬಾಲಿವುಡ್ ನಟಿ ಆಲಿಯಾ ಭಟ್ ಬಹು ಬೇಡಿಕೆ ನಟಿಯಲ್ಲೊಬ್ಬರು. ಚಿಕ್ಕ ವಯಸ್ಸಿನಲ್ಲೇ ತನ್ನ ಅಭಿನಯದಿಂದ ಹಿಂದಿ ಚಿತ್ರರಂಗದಲ್ಲಿ ಭಾರಿ ಹೆಸರು ಗಳಿಸಿದ್ದಾರೆ. ಜೊತೆಗೆ ದೊಡ್ಡ ಅಭಿಮಾನಿ ಬಳವನ್ನೂ ಸಂಪಾದಿಸಿದ್ದಾರೆ.

ಆಲಿಯಾ ಭಟ್ ಸೋಶಿಯಲ್​ ಮೀಡಿಯಾದಲ್ಲಿ ಯಾವಾಗಲೂ ಸಾಕಷ್ಟು ಸಕ್ರಿಯರಾಗಿರುತ್ತಾರೆ. ತಮ್ಮ ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ಜೀವನದ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ವಿಭಿನ್ನವಾಗಿ ಫೋಟೋಶೂಟ್​ ಮಾಡಿಸಿ ಅವನ್ನು ಶೇರ್​ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿರುತ್ತಾರೆ.

ಬಾತ್​ಟಬ್​ನಲ್ಲಿ ಆಲಿಯಾ ಭಟ್ ಫೋಟೋಶೂಟ್​

ಇದೀಗ ವಿಭಿನ್ನ ರೀತಿಯ ಫೋಟೋಶೂಟ್​ ಮಾಡಿಸಿರುವ ಆಲಿಯಾ ಸಖತ್​ ಸುದ್ದಿಯಲ್ಲಿದ್ದಾರೆ. ಹೌದು, ಬಾತ್​​ಟಬ್​​ನಲ್ಲಿ ಫೋಟೋ ಶೂಟ್​ ಮಾಡಿಸಿದ್ದಾರೆ. ಬಿಳಿ ಬಣ್ಣದ ಸುಂದರ ಮಿನಿ ಡ್ರೆಸ್​ನಲ್ಲಿ ಆಲಿಯಾ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: ಅನನ್ಯಾ ಪಾಂಡೆ ಬಗ್ಗೆ ಆಸಕ್ತಿದಾಯಕ ವಿಚಾರ ಬಹಿರಂಗಪಡಿಸಿದ ದೀಪಿಕಾ ಪಡುಕೋಣೆ

ಇನ್ನೂ ಆಲಿಯಾ ಭಟ್ ನಟನೆಯ ಗಂಗೂಬಾಯಿ ಕಠಿಯಾವಾಡಿ ಚಿತ್ರದ ಟ್ರೈಲರ್​ ಕೆಲ ದಿಗಳ ಹಿಂದೆ ರಿಲೀಸ್ ಆಗಿದ್ದು, ಸಖತ್​ ಸೌಂಡ್​ ಮಾಡ್ತಿದೆ. ಗಂಗೂಬಾಯಿ ಪಾತ್ರದಲ್ಲಿ ಆಲಿಯಾ ಸಖತ್​ ಇಂಪ್ರೆಸ್​ ಮಾಡಿದ್ದಾರೆ. ಕೋವಿಡ್ ಕಾರಣದಿಂದಾಗಿ ಚಿತ್ರದ ಬಿಡುಗಡೆ ದಿನಾಂಕವನ್ನು ಮೂಂದೂಡಿಕೆ ಮಾಡಲಾಗುತ್ತಿತ್ತು.

ಇದೇ ಫೆಬ್ರವರಿ 25ರಂದು ಚಿತ್ರ ತೆರೆಗೆ ಅಪ್ಪಳಸಲಿದ್ದು, ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಠಿಯಾವಾಡಿಯಲ್ಲಿ ಕಾಮಾಟಿಪುರದ ಡಾನ್​ ಆಗಿ ಆಲಿಯಾ ಭಟ್​ ಮಿಂಚು ಹರಿಸಿದ್ದಾರೆ. 16ನೇ ವಯಸ್ಸಿನಲ್ಲೇ ಮುಂಬೈಗೆ ಬರುವ ಗಂಗೂಬಾಯಿ ಅಲ್ಲಿನ ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳಲ್ಪಡ್ತಾರೆ. ಅಲ್ಲಿನ ಜೀವನದ ಕುರಿತು ಚಿತ್ರ ಬೆಳಕು ಚೆಲ್ಲಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.