ETV Bharat / sitara

ಸಿಗರೇಟನ್ನೇ ಮುಟ್ಟದ ಶಾಹಿದ್ ಆ ಪಾತ್ರಕ್ಕಾಗಿ ದಿನಕ್ಕೆ 20 ಸಿಗರೇಟ್ ಸೇದುತ್ತಿದ್ದಾರಂತೆ..! - undefined

ಎಂದಿಗೂ ಸಿಗರೇಟನ್ನೇ ಮುಟ್ಟದ ಶಾಹೀದ್ ಕಪೂರ್ ಈ ಸಿನಿಮಾ ಪಾತ್ರ ನ್ಯಾಚುರಲ್ ಆಗಿ ಬರಲೆಂದು ದಿನಕ್ಕೆ 20 ಸಿಗರೇಟ್ ಸೇದುತ್ತಿದ್ದಾರಂತೆ. ಅಲ್ಲದೆ ಕಾಲೇಜು ವಿದ್ಯಾರ್ಥಿಗಳ ಬಟ್ಟೆಗಳನ್ನು ಕೇಳಿ ಪಡೆದು ಧರಿಸುತ್ತಿದ್ದಾರಂತೆ.

ಶಾಹೀದ್ ಕಪೂರ್
author img

By

Published : May 12, 2019, 12:35 PM IST

ವಿಜಯ್ ದೇವರಕೊಂಡ ನಟನೆಯ 'ಅರ್ಜುನ್ ರೆಡ್ಡಿ' ತಮಿಳು ಹಾಗೂ ಹಿಂದಿಗೆ ರೀಮೇಕ್ ಆಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ತಮಿಳಿನಲ್ಲಿ ಈ ಸಿನಿಮಾ 'ಆದಿತ್ಯ ವರ್ಮಾ' ಹೆಸರಿನಲ್ಲಿ ರೀಮೇಕ್ ಆಗುತ್ತಿದ್ದು ವಿಕ್ರಮ್ ಪುತ್ರ ಧ್ರುವ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

kabir singh
'ಕಬೀರ್ ಸಿಂಗ್'

ಇನ್ನು ಹಿಂದಿಯಲ್ಲಿ 'ಕಬೀರ್ ಸಿಂಗ್' ಹೆಸರಿನಲ್ಲಿ ರೀಮೇಕ್ ಆಗುತ್ತಿರುವ ಅರ್ಜುನ್​ ರೆಡ್ಡಿ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಪಾತ್ರವನ್ನು ನಟ ಶಾಹೀದ್ ಕಪೂರ್ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು ಶಾಹೀದ್ ಈ ಪಾತ್ರಕ್ಕಾಗಿ ಸಾಕಷ್ಟು ಹಾರ್ಡ್ ವರ್ಕ್ ಮಾಡುತ್ತಿದ್ದಾರಂತೆ. ತಮ್ಮ ಜೀವನದಲ್ಲಿ ಸಿಗರೇಟನ್ನೇ ಮುಟ್ಟದ ಶಾಹೀದ್ ಈ ಸಿನಿಮಾ ಪಾತ್ರ ನ್ಯಾಚುರಲ್ ಆಗಿ ಬರಲೆಂದು ದಿನಕ್ಕೆ 20 ಸಿಗರೇಟ್ ಸೇದುತ್ತಿದ್ದಾರಂತೆ. ಅಷ್ಟೇ ಅಲ್ಲದೆ ದೆಹಲಿ ವಿದ್ಯಾರ್ಥಿಗಳ ಬಳಿ ಬಟ್ಟೆಗಳನ್ನು ಕೇಳಿ ಪಡೆದು ಅದನ್ನೇ ಧರಿಸುತ್ತಿರುವುದಲ್ಲದೆ ವಿದ್ಯಾರ್ಥಿಗಳ ಚಲನವಲನಗಳನ್ನು ಕಲಿಯಲು ಅವರೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದಾರಂತೆ.

  • " class="align-text-top noRightClick twitterSection" data="">

ಮೇ 13 ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಸಂದೀಪ್ ರೆಡ್ಡಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು ಸಿನಿ 1 ಸ್ಟುಡಿಯೋಸ್ ಹಾಗೂ ಟಿ-ಸೀರೀಸ್ ಜೊತೆಗೂಡಿ ಸಿನಿಮಾವನ್ನು ನಿರ್ಮಿಸುತ್ತಿವೆ. ಕೈರಾ ಅಡ್ವಾಣಿ ಸಿನಿಮಾದಲ್ಲಿ ಶಾಹೀದ್​​​​ಗೆ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಜೂನ್​ 21 ರಂದು ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

Intro:Body:

Shahid kapoor

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.