ETV Bharat / sitara

ನಟ ಆಯುಷ್ಮಾನ್ ಖುರಾನ್ ಅಭಿನಯದ ಚಿತ್ರ 'ಅನೆಕ್' ಬಿಡುಗಡೆಗೆ ಡೇಟ್​ ಫಿಕ್ಸ್​.. - ನಿರ್ದೇಶಕ ಸಿನ್ಹಾ

ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆ ಮಾತನಾಡಿದ ನಿರ್ದೇಶಕ ಸಿನ್ಹಾ ಅವರು, ಇದು ಬರೆಯಲು ಸವಾಲಿನ ಮತ್ತು ನಿರ್ಮಾಣ ಮಾಡಲು ಕಷ್ಟಕರ ಚಿತ್ರ. ನಾವು ಈ ಸಿನಿಮಾವನ್ನು ಬರಡು ಭೂಪ್ರದೇಶದಲ್ಲಿ ಚಿತ್ರೀಕರಿಸಿದ್ದೇವೆ. ವಿಶೇಷ ಅಂದರೆ ಟೇಕ್ಅವೇ ತುಂಬಾ ತೃಪ್ತಿಕರವಾಗಿದೆ. ಇಂತಹ ಸಿನಿಮಾದಲ್ಲಿ ಕೆಲಸ ಮಾಡುವುದು ತುಂಬಾ ಸಂತೋಷಕರ ಎಂದಿದ್ದಾರೆ..

Ayushmann Khurrana's Anek gets release date
'ಅನೆಕ್' ಸಿನೆಮಾದಲ್ಲಿ ನಟ ಆಯುಷ್ಮಾನ್ ಖರಾನ್​
author img

By

Published : Oct 22, 2021, 6:18 PM IST

ಮುಂಬೈ (ಮಹಾರಾಷ್ಟ್ರ): ಅನುಭವ್ ಸಿನ್ಹಾ ನಿರ್ದೇಶನದ ಹಾಗೂ ನಟ ಆಯುಷ್ಮಾನ್ ಖುರಾನ್​-ನಟಿಸಿದ 'ಅನೆಕ್' ಚಿತ್ರ ಮಾರ್ಚ್ 31, 2022ಕ್ಕೆ ಬಿಡುಗಡೆಯಾಗಲಿದೆ. ಈ ಚಿತ್ರ ಈಶಾನ್ಯ ಭಾರತದ ಭೌಗೋಳಿಕ-ರಾಜಕೀಯ ಹಿನ್ನೆಲೆ ಕಥೆಯನ್ನು ಒಳಗೊಂಡಿದೆ.

'ಒಬ್ಬ ನಟ ತನ್ನ ಕಂಫರ್ಟ್ ಝೋನ್​ನಿಂದ ಹೊರ ಜಿಗಿಯುವಂತಹ ಕಥೆಯನ್ನು ನೋಡಲು ಬಯಸುತ್ತಾನೆ. ನಾನು ಯಾವಾಗಲೂ ಕಾದಂಬರಿ ಕಥೆಗಳನ್ನು ಬೆಂಬಲಿಸುತ್ತಿದ್ದೇನೆ. 'ಅನೆಕ್​' ನನ್ನನ್ನು ಹೊಸ ಉತ್ಸಾಹದಿಂದ ಭಾಗವಹಿಸಲು ಪ್ರೇರೇಪಿಸಿತು.

ನಾವು ಈ ರೀತಿಯ ಸಿನಿಮಾ ಮಾಡಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ಅದಕ್ಕಿಂತಲೂ ಹೆಚ್ಚು ಅದೃಷ್ಟವಶಾತ್ ನನಗೆ ಅದನ್ನು ಶೀರ್ಷಿಕೆ ಮಾಡುವ ಅವಕಾಶ ಸಿಕ್ಕಿದೆ' ಎಂದು ನಟ ಆಯುಷ್ಮಾನ್ ಹೇಳಿಕೊಂಡಿದ್ದಾರೆ.

'ಅನೆಕ್' ಚಿತ್ರ​ ಹೊಸ ಕಾಲಘಟ್ಟದ ಸಿನಿಮಾ ಎಂದು ನಟ ಆಯುಷ್ಮಾನ್​ ನಂಬಿದ್ದಾರಂತೆ. ಅಲ್ಲದೇ, ಈ ವಿಶೇಷ ಕಥೆಯನ್ನು ಹೇಳಲು ನನ್ನನ್ನು ಆಯ್ಕೆ ಮಾಡಿದ ಅನುಭವ್ ಸರ್ ಹಾಗೂ ನಮ್ಮ ಪ್ರಯಾಣದಲ್ಲಿ ನಮಗೆ ಬೇಕಾದ ಬೆಂಬಲ ನೀಡಲು ಜೊತೆಗಿದ್ದ ಭೂಷಣ್ ಸರ್ ಅವರಿಗೆ ಧನ್ಯವಾದಗಳು ಎಂದಿದ್ದಾರೆ.

ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆ ಮಾತನಾಡಿದ ನಿರ್ದೇಶಕ ಸಿನ್ಹಾ ಅವರು, ಇದು ಬರೆಯಲು ಸವಾಲಿನ ಮತ್ತು ನಿರ್ಮಾಣ ಮಾಡಲು ಕಷ್ಟಕರ ಚಿತ್ರ. ನಾವು ಈ ಸಿನಿಮಾವನ್ನು ಬರಡು ಭೂಪ್ರದೇಶದಲ್ಲಿ ಚಿತ್ರೀಕರಿಸಿದ್ದೇವೆ. ವಿಶೇಷ ಅಂದರೆ ಟೇಕ್ಅವೇ ತುಂಬಾ ತೃಪ್ತಿಕರವಾಗಿದೆ. ಇಂತಹ ಸಿನಿಮಾದಲ್ಲಿ ಕೆಲಸ ಮಾಡುವುದು ತುಂಬಾ ಸಂತೋಷಕರ ಎಂದಿದ್ದಾರೆ.

'ಅನೇಕ್'ನಂತಹ ಚಿತ್ರವನ್ನು ನಿರ್ಮಿಸಲು ನಿಜವಾದ ದೂರದೃಷ್ಟಿಯ ಅಗತ್ಯವಿದೆ. ಚಲನಚಿತ್ರ ನಿರ್ಮಾಣವು ನಿಜವಾಗಿಯೂ ವೈವಿಧ್ಯಮಯವಾಗಿದೆ. ಇದರ ನಿರ್ಮಾಣದಲ್ಲಿ ತೊಡಗಿರುವುದು ನಿಜಕ್ಕೂ ನಮಗೆ ಸಂತೋಷ ತಂದಿದೆ ಎಂದು ನಿರ್ಮಾಪಕ ಭೂಷಣ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಓದಿ: 'ಬಂಟಿ ಔರ್ ಬಬ್ಲಿ 2' ಚಿತ್ರದ ಟೀಸರ್ ಬಿಡುಗಡೆ: ಸೈಫ್‌ - ರಾಣಿ ಜೋಡಿಯ ಮೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.