ಬಾಲಿವುಡ್ ನಟ ಅರ್ಜುನ್ ಕಪೂರ್ ಅವರು ತಮ್ಮ ತಾಯಿ ಮೋನಾ ಶೌರಿ ಕಪೂರ್ ಅವರನ್ನು ಆಗಾಗ ನೆನಪಿಸಿಕೊಳ್ಳುತ್ತಾರೆ. ಫೆಬ್ರವರಿ 3 ರಂದು, ನಟ ತನ್ನ ತಾಯಿಯ 58ನೇ ಜನ್ಮದಿನ ಹಿನ್ನೆಲೆ ಇನ್ಸ್ಟಾಗ್ರಾಮ್ನಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಮತ್ತೊಂದು ತಾರಾ ಜೋಡಿ: ಯಾರು ಗೊತ್ತಾ?
ಬೋನಿ ಕಪೂರ್ ಮತ್ತು ಅವರ ಮೊದಲ ಪತ್ನಿ ಮೋನಾ ಶೌರಿ ಕಪೂರ್ ಅವರ ಪುತ್ರ ಅರ್ಜುನ್ ಕಪೂರ್ ಅವರು ತಮ್ಮ ಸಂದರ್ಶನಗಳಲ್ಲಿ ತಮ್ಮ ವೈಯಕ್ತಿಕ ಜೀವನ ಮತ್ತು ಕುಟುಂಬ ಸಂಬಂಧಗಳ ಬಗ್ಗೆ ಹೆಚ್ಚು ವಿಚಾರಗಳನ್ನು ಶೇರ್ ಮಾಡಿದ್ದಾರೆ.
ಇನ್‌ಸ್ಟಾಗ್ರಾಮ್ ನಲ್ಲಿ ಅರ್ಜುನ್ ಕಪೂರ್ ತಮ್ಮ ತಾಯಿಯ ಭಾವಚಿತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರ ಭಾವಚಿತ್ರದ ಮುಂದೆ ಹಲವಾರು ಹೂಗುಚ್ಛಗಳನ್ನು ಇಟ್ಟು, "ಹುಟ್ಟುಹಬ್ಬದ ಶುಭಾಶಯಗಳು ಅಮ್ಮ" ಎಂದು ಬರೆದ್ದಾರೆ. ಶೀರ್ಷಿಕೆಯಲ್ಲಿ ನನ್ನ ಫೋನ್‌ನಲ್ಲಿ ನಿಮ್ಮ ಹೆಸರನ್ನು ನೋಡುವುದನ್ನು ನಾನು ಮಿಸ್ಮಾಡಿಕೊಳ್ಳುತ್ತೇನೆ. ನೀನಿಲ್ಲದೇ ನಾನು ಅಪೂರ್ಣವಾಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.