ಆ್ಯಮಿ ಜಾಕ್ಸನ್ ತನ್ನ ಗ್ಲಾಮರ್ನಿಂದ ಮಾತ್ರವಲ್ಲ ಮದುವೆಗೂ ಮುನ್ನವೇ ತಾಯಿಯಾಗುವ ವಿಷಯ ಹೇಳಿ ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದ್ದರು. ಪ್ರೇಮ್ ನಿರ್ದೇಶನದ 'ವಿಲನ್' ಚಿತ್ರದ ಮೂಲಕ ಕನ್ನಡಕ್ಕೆ ಬಂದ ಈ ಚೆಲುವೆ ಸದ್ಯಕ್ಕೆ ಸಿನಿಮಾಗಳಿಂದ ದೂರ ಇದ್ದಾರೆ.
-
We’re having a........ ✨💙🧚🏼♂️ pic.twitter.com/DGSqvYKYZr
— Amy Jackson (@iamAmyJackson) August 26, 2019 " class="align-text-top noRightClick twitterSection" data="
">We’re having a........ ✨💙🧚🏼♂️ pic.twitter.com/DGSqvYKYZr
— Amy Jackson (@iamAmyJackson) August 26, 2019We’re having a........ ✨💙🧚🏼♂️ pic.twitter.com/DGSqvYKYZr
— Amy Jackson (@iamAmyJackson) August 26, 2019
ತಾನು ಗರ್ಭಿಣಿ ಆಗುತ್ತಿದ್ದೇನೆ ಎಂಬ ವಿಷಯದಿಂದ ಹಿಡಿದು ಇದುವರೆಗೂ ಕೆಲವೊಂದು ವೈಯಕ್ತಿಕ ವಿಷಯಗಳನ್ನು ಆ್ಯಮಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಬಾಯ್ಫ್ರೆಂಡ್ ಜಾರ್ಜ್ ಪನಯಟೋ ಜೊತೆ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಿರುವ ಫೋಟೋವನ್ನು ಕೂಡಾ ಆಕೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಪ್ರತಿ ತಿಂಗಳು ಬೇಬಿ ಬಂಪ್ ಫೋಟೋಗಳನ್ನು ಕೂಡಾ ಅಪ್ಲೋಡ್ ಮಾಡುತ್ತಿದ್ದರು.
ಇದೀಗ ಆ್ಯಮಿ ಜಾಕ್ಸನ್ ಮತ್ತೊಂದು ವಿಷಯವನ್ನು ರಿವೀಲ್ ಮಾಡಿದ್ದಾರೆ. ತನಗೆ ಹುಟ್ಟುತ್ತಿರುವ ಮಗು ಯಾವುದು ಎಂಬುದನ್ನು ಈ ಚೆಲುವೆ ಹೇಳಿದ್ದಾರೆ. ಇತ್ತೀಚೆಗೆ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದ ಆ್ಯಮಿ ಜಾಕ್ಸನ್ ತನ್ನ ಸ್ನೇಹಿತರು, ಸಂಬಂಧಿಕರ ಎದುರು 'ನಾನು ಗಂಡು ಮಗುವಿಗೆ ಜನ್ಮ ನೀಡುತ್ತಿದ್ದೇನೆ' ಎಂಬ ವಿಷಯವನ್ನು ರಿವೀಲ್ ಮಾಡಿದ್ದಾರೆ. ಕೆಲವೊಂದು ದೇಶಗಳಲ್ಲಿ ಹುಟ್ಟುವ ಮಗು ಹೆಣ್ಣೋ, ಗಂಡೋ ಎಂದು ವೈದ್ಯರು ಮೊದಲೇ ಹೇಳುತ್ತಾರೆ. ಆದ್ದರಿಂದ ಆ್ಯಮಿ ಈ ವಿಷಯವನ್ನು ರಿವೀಲ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು ಆ್ಯಮಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಲ್ಲದೆ ತಮ್ಮ ಮೆಚ್ಚಿನ ನಟಿಗೆ ಶುಭ ಕೋರಿದ್ದಾರೆ.