ಮುಂಬೈ (ಮಹಾರಾಷ್ಟ್ರ): ಹಿಂದಿಯ 'ಕೌನ್ ಬನೇಗಾ ಕರೋಡ್ಪತಿ' (ಕೆಬಿಸಿ) ಶೋ ಇತ್ತೀಚೆಗೆ 1000 ಸಂಚಿಕೆಗಳನ್ನು ಪೂರ್ಣಗೊಳಿಸಿದ್ದು, ಕಾರ್ಯಕ್ರಮವನ್ನು ನಡೆಸಿಕೊಡುತ್ತಾ ಬಂದಿರುವ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ.
-
@SrBachchan No one can host #KBC like #AmitabhBachchan ji in this whole world…Salute low bow to the living Legend thank you so much for the wonderful wonderful amazing #KBC and congratulations for 1000th episode & the grand success for entire KBC team
— Amit Nadkar (@NadkarAmit) December 3, 2021 " class="align-text-top noRightClick twitterSection" data="
pic.twitter.com/jbAs2pJ2aN
">@SrBachchan No one can host #KBC like #AmitabhBachchan ji in this whole world…Salute low bow to the living Legend thank you so much for the wonderful wonderful amazing #KBC and congratulations for 1000th episode & the grand success for entire KBC team
— Amit Nadkar (@NadkarAmit) December 3, 2021
pic.twitter.com/jbAs2pJ2aN@SrBachchan No one can host #KBC like #AmitabhBachchan ji in this whole world…Salute low bow to the living Legend thank you so much for the wonderful wonderful amazing #KBC and congratulations for 1000th episode & the grand success for entire KBC team
— Amit Nadkar (@NadkarAmit) December 3, 2021
pic.twitter.com/jbAs2pJ2aN
2000ರ ಜುಲೈ 3ರಿಂದ ಖಾಸಗಿ ವಾಹಿನಿಯಲ್ಲಿ ಕೆಬಿಸಿ ಆರಂಭಗೊಂಡಿದ್ದು, ಅಂದಿನಿಂದ ಇಂದಿನವರೆಗೂ, ಅಂದರೆ 21 ವರ್ಷಗಳಿಂದ ಬಿಗ್ ಬಿ ಅಮಿತಾಭ್ ಬಚ್ಚನ್ ಶೋ ನಡೆಸಿಕೊಂಡು ಬಂದಿದ್ದಾರೆ. 1000 ಸಂಚಿಕೆಗಳನ್ನು ಪೂರೈಸಿದ ಐತಿಹಾಸಿಕ ಸಾಧನೆಯನ್ನು ಆಚರಿಸಲು, ಅಮಿತಾಬ್ ಬಚ್ಚನ್ ಅವರ ಪುತ್ರಿ ಶ್ವೇತಾ ನಂದಾ ಮತ್ತು ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರನ್ನು ಅತಿಥಿಗಳಾಗಿ ಕರೆಯಲಾಗಿತ್ತು. ಇವರಿಬ್ಬರು ಹಾಟ್ ಸೀಟ್ನಲ್ಲಿ ಕುಳಿತಿದ್ದು, ಈ ಕೌಟುಂಬಿಕ ಸಂಚಿಕೆಯನ್ನು ಅಮಿತಾಬ್ ಪತ್ನಿ ಜಯಾ ಬಚ್ಚನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸೇರಿಕೊಂಡರು.
- " class="align-text-top noRightClick twitterSection" data="
">
ಇದನ್ನೂ ಓದಿ: ಕೆಬಿಸಿ ಸೆಟ್ನಲ್ಲಿ ಬಿಗ್ ಬಿ ಸುಳ್ಳನ್ನು ಬಯಲು ಮಾಡಿದ ಜಯಾ ಬಚ್ಚನ್
ಈ ವೇಳೆ ಕೆಬಿಸಿ ನಡೆದುಬಂದ 21 ವರ್ಷಗಳ ಹಾದಿಯ ಪ್ರೋಮೋವನ್ನು ಪ್ರಸಾರ ಮಾಡಲಾಯಿತು. ಥ್ರೋಬ್ಯಾಕ್ ಕ್ಲಿಪ್ ಅನ್ನು ಕಂಡ ಅಮಿತಾಬ್ ಭಾವುಕರಾದರು. ಕೆಬಿಸಿ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವರ ಮೊಮ್ಮಗಳು ಕೇಳಿದಾಗ, ನನ್ನ ಇಡೀ ಪ್ರಪಂಚವೇ ಬದಲಾಗಿದೆ ಎಂದು ತೋರುತ್ತದೆ ಎಂದು ಹೇಳಿ ಮತ್ತೆ ಭಾವುಕರಾಗಿದ್ದಾರೆ.