ಹೈದರಾಬಾದ್: ವೈಜಯಂತಿ ಮೂವೀಸ್ ಬ್ಯಾನರ್ ಅಡಿ ಟಾಲಿವುಡ್ನ ಯಂಗ್ ರೆಬಲ್ ಪ್ರಭಾಸ್ ಮುಂದಿನ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸಲಿದ್ದು, ಪ್ರಭಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿವೊಂದನ್ನು ನೀಡಿದ್ದಾರೆ.
ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ನಾಗ್ ಅಶ್ವಿನ್ ನಿರ್ದೇಶಿಸಲಿರುವ ದೊಡ್ಡ ಬಜೆಟ್ನ ಈ ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ಮಿಂಚುತ್ತಿದ್ದಾರೆ. ಬಹು ತಾರಾಗಣ ಬಳಗವಿರುವ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಸಹ ನಟಿಸಲಿದ್ದಾರೆ.
-
Welcoming with a full heart, the pride of a billion Indians. The Amitabh Bachchan. Our journey just got BIG-ger!https://t.co/bmG2GXBODh#NamaskaramBigB @SrBachchan 🙏#Prabhas @deepikapadukone @nagashwin7 @AshwiniDuttCh@SwapnaDuttCh @VyjayanthiFilms
— Vyjayanthi Movies (@VyjayanthiFilms) October 9, 2020 " class="align-text-top noRightClick twitterSection" data="
">Welcoming with a full heart, the pride of a billion Indians. The Amitabh Bachchan. Our journey just got BIG-ger!https://t.co/bmG2GXBODh#NamaskaramBigB @SrBachchan 🙏#Prabhas @deepikapadukone @nagashwin7 @AshwiniDuttCh@SwapnaDuttCh @VyjayanthiFilms
— Vyjayanthi Movies (@VyjayanthiFilms) October 9, 2020Welcoming with a full heart, the pride of a billion Indians. The Amitabh Bachchan. Our journey just got BIG-ger!https://t.co/bmG2GXBODh#NamaskaramBigB @SrBachchan 🙏#Prabhas @deepikapadukone @nagashwin7 @AshwiniDuttCh@SwapnaDuttCh @VyjayanthiFilms
— Vyjayanthi Movies (@VyjayanthiFilms) October 9, 2020
ಪ್ರಭಾಸ್ ಜೊತೆ ಡ್ಯುಯೆಟ್ ಮಾಡಲು ಬಾಲಿವುಡ್ ಆ್ಯಂಡ್ ಹಾಲಿವುಡ್ ಸ್ಟಾರ್ ಕನ್ನಡತಿ ದೀಪಿಕಾ ಪಡುಕೋಣೆ ರೆಡಿಯಾಗಿದ್ದಾರೆ.
‘ಲೆಜೆಂಡ್ ಅಮಿತಾಬ್ ಬಚ್ಚನ್ ಇಲ್ಲದೆ ಪೌರಾಣಿಕ ಚಿತ್ರವನ್ನು ಹೇಗೆ ಮಾಡಬಹುದು?’ ಎಂದು ಅಮಿತಾಬ್ ಬಚ್ಚನ್ ನಟನೆ ಬಗ್ಗೆ ಚಿತ್ರತಂಡ ಟ್ವೀಟ್ ಮಾಡಿದೆ.
ಈ ಚಿತ್ರದ ಮೂಲಕ ಮೊದಲ ಬಾರಿಗೆ ದೀಪಿಕಾ ಟಾಲಿವುಡ್ಗೆ ಕಾಲಿಟ್ಟಿರುವುದು ವಿಶೇಷ. ಪ್ರಮುಖ ನಿರ್ದೇಶಕ ಸಿಂಗಿತಂ ಶ್ರೀನಿವಾಸ ರಾವ್ ಈ ಚಿತ್ರಕ್ಕೆ ಮಾರ್ಗದರ್ಶಕರಾಗಲಿದ್ದಾರೆ. ಈ ಚಿತ್ರವು ವೈಜ್ಞಾನಿಕ ಕಾದಂಬರಿ ಕಥೆಯನ್ನೊಳಗೊಂಡಿದೆ ಎಂಬ ಮಾಹಿತಿ ಇದೆ.