ಹೈದರಾಬಾದ್ (ತೆಲಂಗಾಣ): ಪ್ರಸಿದ್ಧ ಚಿತ್ರ ನಿರ್ದೇಶಕ ರಾಜಮೌಳಿಯ ಮುಂದಿನ ಚಿತ್ರವು ನಟ ಮಹೇಶ್ ಬಾಬು ಅವರನ್ನು ಹಿಂದಿ ಚಿತ್ರಲೋಕಕ್ಕೆ ಪರಿಚಯಿಸುವ ಸಾಧ್ಯತೆ ಕಾಣುತ್ತಿದೆ.
![Alia Bhatt in Mahesh Babu's pan-India film with SS Rajamouli?](https://etvbharatimages.akamaized.net/etvbharat/prod-images/alia-mahesh-babu_0703newsroom_1646651078_751.jpg)
ಟಾಲಿವುಡ್ ಸೂಪರ್‌ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಅವರು ಎಸ್.ಎಸ್. ರಾಜಮೌಳಿ ಅವರೊಂದಿಗೆ ತಮ್ಮ ಚೊಚ್ಚಲ ಪ್ಯಾನ್-ಇಂಡಿಯಾ ಚಿತ್ರಕ್ಕೆ ಸಿದ್ಧರಾಗಿದ್ದು ಅದಕ್ಕೆ ಬಾಲಿವುಡ್ ನಟಿ ಆಲಿಯಾ ಭಟ್ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
- " class="align-text-top noRightClick twitterSection" data="
">
ರಾಜಮೌಳಿ ನಿರ್ದೇಶನ RRR ಚಿತ್ರದಲ್ಲಿಯೂ ಆಲಿಯಾ ಭಟ್ ನಾಯಕಿ ನಟಿಯಾಗಿ ನಟಿಸಿದ್ದು ಇದೇ ತಿಂಗಳ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಹೀಗಿರುವಾಗಲೇ ಮತ್ತೊಂದು ಚಿತ್ರದಲ್ಲಿ ಮಹೇಶ್ ಬಾಬು ಅವರೊಂದಿಗೆ ಆಲಿಯಾ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
![Alia Bhatt in Mahesh Babu's pan-India film with SS Rajamouli?](https://etvbharatimages.akamaized.net/etvbharat/prod-images/14065040_ram-charan-rajamouli-ntr.jpg)
ಜಂಗಲ್ ಅಡ್ವೆಂಚರ್ ಕಥೆಯಾಧಾರಿತ ಚಿತ್ರ ಇದಾಗಿದ್ದು ಇದನ್ನು ರಾಜಮೌಳಿ ಅವರ ತಂದೆ ಮತ್ತು ಹಿರಿಯ ಚಿತ್ರಕಥೆಗಾರ ಕೆವಿ ವಿಜಯೇಂದ್ರ ಪ್ರಸಾದ್ ಬರೆದಿದ್ದಾರಂತೆ. ಚಿತ್ರ ತಂಡ ನಟಿಯ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದು ಶೀಘ್ರದಲ್ಲೇ ಈ ಬಗ್ಗೆ ಬಹಿರಂಗ ಮಾಡಲಿದೆಯಂತೆ.
![Alia Bhatt in Mahesh Babu's pan-India film with SS Rajamouli?](https://etvbharatimages.akamaized.net/etvbharat/prod-images/274779297_529726288438051_4132023569702305265_n_2802newsroom_1646034040_690.jpg)
ಈ ಬಗ್ಗೆ ಯಾರೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ರಾಜಮೌಳಿ ಅವರು ಇಂತಹದ್ದೊಂದು ಕಥೆ ಹೆಣೆದಿದ್ದು ಮಹೇಶ್ ಬಾಬು ಮತ್ತು ಆಲಿಯಾ ಭಟ್ ಜೊತೆಯಾಗಲಿದ್ದಾರೆ ಎಂಬ ಗಾಳಿ ಸುದ್ದಿಯೊಂದು ಮಾತ್ರ ಹರಿದಾಡುತ್ತಿದೆ.
- " class="align-text-top noRightClick twitterSection" data="
">
ಇತ್ತೀಚೆಗೆ ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟ ಮಹೇಶ್ ಬಾಬು ಸಹ ತಮ್ಮ ಮುಂದಿನ ಸಿನಿಮಾ ಬಗ್ಗೆ ಹಾಗೂ ಎಸ್‌ಎಸ್ ರಾಜಮೌಳಿ ಅವರ ಬಗ್ಗೆ ಹೇಳಿಕೊಂಡಿದ್ದರು. ತಮ್ಮ ಕಾಂಬಿನೇಷನ್ನಲ್ಲಿ ಪ್ಯಾನ್-ಇಂಡಿಯಾ ಚಿತ್ರ ಬರಲಿದ್ದು ಆರು ಭಾಷೆಯಲ್ಲಿ ತೆರೆಗೆ ಬರಲಿದೆ ಎಂದಿದ್ದರು.