ಮುಂಬೈ: ಬಾಲಿವುಡ್ ಮಂದಿಗೆ ಮಹಾಮಾರಿ ಕೊರೊನಾ ವೈರಸ್ ಬೆನ್ನು ಬಿದ್ದ ಬೇತಾಳನಂತೆ ಕಾಡುತ್ತಿದ್ದು, ಅಕ್ಷಯ್ ಕುಮಾರ್ಗೆ ಸೋಂಕು ಕಾಣಿಸಿಕೊಂಡಿರುವ ಬೆನ್ನಲ್ಲೇ ಇದೀಗ 45 ಕಿರಿಯ ಕಲಾವಿದರಿಗೂ ವೈರಸ್ ದೃಢಪಟ್ಟಿದೆ.
ಅಕ್ಷಯ್ ಕುಮಾರ್ 'ರಾಮಸೇತು' ಚಿತ್ರದ 45 ಸಹ ಕಲಾವಿದರಿಗೆ ಕೊರೊನಾ ಸೋಂಕು ದೃಢಗೊಂಡಿರುವ ಬಗ್ಗೆ ಇದೀಗ ಮಾಹಿತಿ ಲಭ್ಯವಾಗಿದ್ದು, ಮುಂಬೈನಲ್ಲಿರುವ ಮಧ್ ಐಲೆಂಡ್ನಲ್ಲಿ 100 ಮಂದಿ ಸಹ ಕಲಾವಿದರೊಂದಿಗೆ ನಟ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಭಾಗಿಯಾಗಿದ್ದ ನಿರ್ದೇಶಕ ವಿಕ್ರಂ ಮಲ್ಹೋತ್ರಾ ಸೇರಿದಂತೆ ಎಲ್ಲರಿಗೂ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಹೀಗಾಗಿ ಸೆಟ್ನಲ್ಲಿದ್ದ 100 ಜನರು ಪರೀಕ್ಷೆಗೆ ಒಳಪಟ್ಟಿದ್ದು, ಇದೀಗ 45 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇದನ್ನೂ ಓದಿ: ಕೋವಿಡ್-19 ದೃಢ: ಆಸ್ಪತ್ರೆಗೆ ದಾಖಲಾದ ನಟ ಅಕ್ಷಯ್ ಕುಮಾರ್
ಕಳೆದ ಭಾನುವಾರ ಮಹಾಮಾರಿ ಕೊರೊನಾ ಸೋಂಕಿಗೊಳಗಾಗಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇಂದು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.