ಚಿತ್ರರಂಗದಲ್ಲಿ ಮೋಸ್ಟ್ ವಾಂಟೆಡ್ ಬ್ಯಾಚುಲರ್ ಎಂದರೆ ನೆನಪಾಗುವುದೇ ಸಲ್ಮಾನ್ ಖಾನ್, ಪ್ರಭಾಸ್, ರಾಣಾರಂತ ನಟರು. ಆದರೆ ನಟರು ಮಾತ್ರವಲ್ಲ, ಎಷ್ಟೋ ನಟಿಯರು ಕೂಡಾ ಇನ್ನೂ ವಿವಾಹ ಬಂಧನದ ಹೊರಗೆ ಇದ್ದಾರೆ. ಈ ನಟಿಯರು 40 ವರ್ಷ ದಾಟಿದರೂ ಇನ್ನೂ ಮದುವೆಯಾಗಿಲ್ಲ.
ಟಾಲಿವುಡ್ ನಟಿಯರಲ್ಲಿ ಅನುಷ್ಕಾ ಶೆಟ್ಟಿ ಇನ್ನೂ ಮದುವೆಯಾಗಿಲ್ಲ. ಇನ್ನು ಬಾಲಿವುಡ್ನಲ್ಲಿ ಸುಷ್ಮಿತಾ ಸೇನ್ ಹಾಗೂ ಟಬು ಕೂಡಾ ಮದುವೆಯಾಗಿಲ್ಲ. ಅದರಲ್ಲಿ ಸುಷ್ಮಿತಾ ಸೇನ್ ಮಾಡೆಲ್ ರೊಹ್ಮನ್ ಷಾಲ್ ಜೊತೆ ಲವ್ಬಿ ಡವ್ವಿಯಲ್ಲಿದ್ದು ಶೀಘ್ರವೇ ಇಬ್ಬರೂ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಉಳಿಯುವುದೇ ಟಬು. ಈಕೆಗೆ ಮದುವೆಯಾಗುವ ಉದ್ದೇಶ ಇದೆಯಾ..? ಈಕೆಯ ಜೀವನದಲ್ಲಿ ಯಾರಾದರೂ ಇದ್ದಾರಾ..? ಎಂಬುದರ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕೇಳಲಾಗಿದೆ. ಈ ಎಲ್ಲಾ ವಿಷಯಗಳಿಗೆ ಟಬು ಕ್ಲಾರಿಟಿ ನೀಡಿದ್ದಾರೆ.
'ಪ್ರಸ್ತುತ ನನ್ನದು ಒಂಟಿ ಜೀವನ, ಸಿನಿಮಾದಲ್ಲಿ ನನಗೆ ಎಷ್ಟೋ ಬಾಯ್ಫ್ರೆಂಡ್ಗಳಿದ್ದಾರೆ. ಆದರೆ ನಿಜ ಜೀವನದಲ್ಲಿ ಯಾರೂ ಇಲ್ಲ. ಸ್ಕ್ರಿಪ್ಟ್ ವಿಷಯದಲ್ಲಿ ಎಷ್ಟು ಎಚ್ಚರಿಕೆಯಿಂದ ಇರುತ್ತೇನೋ, ವೈಯಕ್ತಿಕ ಜೀವನದಲ್ಲಿ ಕೂಡಾ ಅಷ್ಟೇ ಎಚ್ಚರಿಕೆಯಿಂದ ಇರಲು ಇಷ್ಟಪಡುತ್ತೇನೆ. ಪ್ರಸ್ತುತ ನನಗೆ ಈ ಜೀವನವೇ ಚೆನ್ನ ಎನಿಸುತ್ತಿದೆ. ಆದರೆ ಮದುವೆ ಬಗ್ಗೆ ನನಗೆ ನೆಗೆಟಿವ್ ಆಲೋಚನೆಗಳಿಲ್ಲ. ಒಬ್ಬ ನಟಿಯಾಗಿ ಕೋಟ್ಯಂತರ ಅಭಿಮಾನಿಗಳ ಪ್ರೀತಿಯನ್ನು ನಾನು ಗಳಿಸಿದ್ದೇನೆ. ಒಂದು ವೇಳೆ ಮದುವೆ ಆಗುವ ಅವಕಾಶ ದೊರೆತರೆ ಖಂಡಿತ ಆಗುತ್ತೇನೆ ' ಎಂದು ಟಬು ಹೇಳಿಕೊಂಡಿದ್ದಾರೆ.