ಮಾಜಿ ಮಿಸ್ ಯೂನಿವರ್ಸ್, ಬಾಲಿವುಡ್ ನಟಿ ಸುಷ್ಮಿತಾ ಸೇನ್ 'ಆರ್ಯ' ವೆಬ್ ಸೀರೀಸ್ನಲ್ಲಿ ಕಾಣಿಸಿಕೊಂಡಿದ್ದು ತಮ್ಮೊಂದಿಗೆ ನಟಿಸಿರುವ ಮನೀಶ್ ಚೌಧರಿಯನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪರಿಚಯಿಸಿದ್ದಾರೆ. ಮನೀಶ್ ಈ ವೆಬ್ ಸೀರೀಸ್ನಲ್ಲಿ ಶೇಖಾವತ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.
- " class="align-text-top noRightClick twitterSection" data="
">
ಮನೀಶ್ ಅವರನ್ನು ಹೊಗಳಿರುವ ಸುಷ್ಮಿತಾ, ನಟನೆಯಲ್ಲಿ ಅವರ ಶಿಸ್ತು ಹಾಗೂ ಪರಕಾಯ ಪ್ರವೇಶವನ್ನು ಹೊಗಳಿದ್ದಾರೆ. ಮನೀಶ್ ಅವರೊಂದಿಗಿನ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಸುಷ್ಮಿತಾ, ತೆರೆ ಮುಂದೆ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡಾ ಮನೀಶ್ ಒಬ್ಬ ಜಂಟಲ್ಮ್ಯಾನ್. ಬಹಳ ಸೌಮ್ಯ ಸ್ವಭಾವದ ವ್ಯಕ್ತಿ. ಅತ್ಯಂತ ಕಷ್ಟಕರವಾದ ದೃಶ್ಯಗಳಲ್ಲಿ ಅವರು ನನಗೆ ಬಹಳ ಸಹಾಯ ಮಾಡಿದರು. ಈತನೊಂದಿಗೆ ಮತ್ತೆ ಕೆಲಸ ಮಾಡಬೇಕೆಂದು ಬಹಳ ಇಷ್ಟ. ಅವರಿಂದ ಕಲಿಯುವುದು ಬಹಳಷ್ಟಿದೆ ಎಂದು ಸುಷ್ಮಿತಾ ಬರೆದುಕೊಂಡಿದ್ದಾರೆ.
ಮನೀಶ್ ಮಾತ್ರವಲ್ಲದೆ ತಮ್ಮ ಮತ್ತೊಬ್ಬ ಸಹನಟ ನಮಿತ್ ದಾಸ್ ಅವರನ್ನೂ ಸುಷ್ಮಿತಾ ಪರಿಚಯಿಸಿದ್ದಾರೆ. ಅಲ್ಲದೆ ಅವರು ವಿಶ್ವಕೋಶ ಇದ್ದಂತೆ ಎಂದು ಹೊಗಳಿದ್ದಾರೆ. 'ಆರ್ಯ' ಸೀರೀಸ್ನಲ್ಲಿ ನಮಿತ್ ದಾಸ್ ಜವಾಹರ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. 'ಆರ್ಯ' ವೆಬ್ ಸರಣಿ ಜೂನ್ 19 ರಿಂದ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿದೆ. ವಿಶೇಷ ಎಂದರೆ ಸುಷ್ಮಿತಾ ಸೇನ್ ಸುಮಾರು 5 ವರ್ಷಗಳ ನಂತರ ಈ ಸೀರೀಸ್ ಮೂಲಕ ಮತ್ತೆ ಆ್ಯಕ್ಟಿಂಗ್ಗೆ ವಾಪಸಾಗಿದ್ದಾರೆ.
- " class="align-text-top noRightClick twitterSection" data="">
ಈ ವೆಬ್ ಸೀರಿಸ್ನಲ್ಲಿ ಸುಷ್ಮಿತಾ ಸೇನ್ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇರಲಿದೆಯಂತೆ. 'ಆರ್ಯ' ಎಂಬ ಪಾತ್ರದಲ್ಲಿ ಅವರು ನಟಿಸಿದ್ದು, ತಮ್ಮ ಕುಟುಂಬವನ್ನು ಸುತ್ತಮುತ್ತ ನಡೆಯುತ್ತಿರುವ ಅಪರಾಧಗಳಿಂದ ರಕ್ಷಿಸಲು ಹೇಗೆ ಹೋರಾಡುತ್ತಾಳೆ ಎನ್ನುವುದು ಈ ಸೀರೀಸ್ನ ಕಥೆ ಎನ್ನಲಾಗಿದೆ.
ಇತ್ತೀಚೆಗೆ ಈ ವೆಬ್ ಸೀರೀಸ್ ಟ್ರೇಲರ್ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಗಳಿಸಿದೆ. ರಾಮ್ ಮಾಧವಾನಿ ಈ ವೆಬ್ ಸೀರೀಸನ್ನು ನಿರ್ದೇಶಿಸಿದ್ದು ಮನೀಶ್ ಚೌಧರಿ, ನಮಿತ್ ದಾಸ್, ಚಂದ್ರಚೂಡ್ ಸಿಂಗ್, ಸಿಖಂದರ್ ಖೇರ್ ಮತ್ತು ವಿನೋದ್ ರಾವತ್ ಹಾಗೂ ಇನ್ನಿತರರು ನಟಿಸಿದ್ದಾರೆ.