ಮುಂಬೈ: ಕಪೂರ್ ಕುಟುಂಬದ ಅಥವಾ ಜೈನ್ ಕುಟುಂಬದ ಭಾಗವಾಗಲು ನನಗೆ ಯಾವುದೇ ಒತ್ತಡವಿಲ್ಲ ಎಂದು ಬಾಲಿವುಡ್ ಚಿತ್ರರಂಗದ ಮೇರುನಟ ರಾಜ್ ಕಪೂರ್ ಅವರ ಮೊಮ್ಮಗ ನಟ ಆದರ್ ಜೈನ್ ಹೇಳಿದ್ದಾರೆ.
ಆಧಾರ್ ಜೈನ್ ಅಭಿನಯದ 'ಹಲೋ ಚಾರ್ಲಿ' ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ನಟ ರಾಜ್ ಕಪೂರ್ ಅವರ ಮೊಮ್ಮಗನ ಹೊರತಾಗಿ ನನ್ನದೇ ಆದ ಗುರುತನ್ನು ಸೃಷ್ಟಿಸುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.
ಪ್ರಸ್ತುತ ಆದರ್ ಅವರು ಪಂಕಜ್ ಸರಸ್ವತ್ ನಿರ್ದೇಶನದ ಹಲೋ ಚಾರ್ಲಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಬಿಡುಗಡೆಗೆ ಸಿದ್ಧವಾಗಿದೆ.