ಹೈದರಾಬಾದ್: ಎಕ್ಸ್ (X) ಅನ್ನು ಸರ್ವ ಉಪಯೋಗಿ ಆ್ಯಪ್ (everything app) ಮಾಡುವ ನಿಟ್ಟಿನಲ್ಲಿ ಈಗ ಎಕ್ಸ್ ಕಾರ್ಪ್ ಆಡಿಯೊ ಮತ್ತು ವಿಡಿಯೊ ಕಾಲ್ ಫೀಚರ್ ಅನ್ನು ಪರಿಚಯಿಸಲು ಪ್ರಾರಂಭಿಸಿದೆ. ಮೆಟಾ ಒಡೆತನದ ವಾಟ್ಸ್ಆ್ಯಪ್ಗೆ ಪೈಪೋಟಿ ನೀಡುವ ಸಲುವಾಗಿ ಎಲೋನ್ ಮಸ್ಕ್ ಒಡೆತನದ ಎಕ್ಸ್ ಕಾರ್ಪ್ ಈ ವೈಶಿಷ್ಟ್ಯ ಅಳವಡಿಸಲು ಮುಂದಾಗಿದೆ ಎಂದು ತಂತ್ರಜ್ಞಾನ ವಿಶ್ಲೇಷಕರು ಹೇಳಿದ್ದಾರೆ.
-
Early version of video & audio calling on 𝕏 https://t.co/aFI3VujLMh
— Elon Musk (@elonmusk) October 25, 2023 " class="align-text-top noRightClick twitterSection" data="
">Early version of video & audio calling on 𝕏 https://t.co/aFI3VujLMh
— Elon Musk (@elonmusk) October 25, 2023Early version of video & audio calling on 𝕏 https://t.co/aFI3VujLMh
— Elon Musk (@elonmusk) October 25, 2023
ಎಕ್ಸ್ನಲ್ಲಿನ ಡೋಜ್ ಡಿಸೈನರ್ ಹೆಸರಿನ ಹ್ಯಾಂಡಲ್ನ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿದ ಎಲೋನ್ ಮಸ್ಕ್ ಹೊಸ ವೈಶಿಷ್ಟ್ಯವನ್ನು ಘೋಷಿಸಿದ್ದಾರೆ. "ಎಕ್ಸ್‌ನಲ್ಲಿ ವಿಡಿಯೊ ಮತ್ತು ಆಡಿಯೊ ಕರೆಗಳ ಆರಂಭಿಕ ಆವೃತ್ತಿ ಆರಂಭವಾಗಲಿದೆ" ಎಂದು ಮಸ್ಕ್ ಹೇಳಿದ್ದಾರೆ.
"ಆಡಿಯೊ ಮತ್ತು ವಿಡಿಯೊ ಕಾಲ್ಗಳ ವೈಶಿಷ್ಟ್ಯ ಬಂದಿದೆ" ಎಂದು ಹಲವಾರು ಎಕ್ಸ್ ಬಳಕೆದಾರರಿಗೆ ನೋಟಿಫಿಕೇಶನ್ಗಳನ್ನು ಬರುತ್ತಿವೆ. ಎಕ್ಸ್ನಲ್ಲಿನ ಸೆಟಿಂಗ್ನಲ್ಲಿ Enable audio and video calling ಹಾಗೂ ಅದರ ನಂತರ turn the feature on and then select who you’re comfortable using it with ಅನ್ನು ಸೆಟಿಂಗ್ ಮಾಡುವ ಮೂಲಕ ಬಳಕೆದಾರರು ಈ ವೈಶಿಷ್ಟ್ಯವನ್ನು ಬಳಸಲಾರಂಭಿಸಬಹುದು.
ನಿಮ್ಮ ಅಡ್ರೆಸ್ ಬುಕ್ನಲ್ಲಿರುವ ಜನ, ನೀವು ಫಾಲೋ ಮಾಡುವ ವ್ಯಕ್ತಿಗಳು, ವೆರಿಫೈ ಆದ ಬಳಕೆದಾರರು ಅಥವಾ ಆ ಎಲ್ಲ ಮೂರು ವರ್ಗದ ವ್ಯಕ್ತಿಗಳಿಗೆ ಆಡಿಯೊ ಮತ್ತು ವಿಡಿಯೊ ಕರೆಗಳನ್ನು ಮಾಡಬಹುದು. "ಎವೆರಿಥಿಂಗ್ ಅಪ್ಲಿಕೇಶನ್" ಆಗಿ ಪರಿವರ್ತನೆಯ ಭಾಗವಾಗಿ ಪ್ಲಾಟ್ಫಾರ್ಮ್ ವೀಡಿಯೊ ಕರೆಗಳನ್ನು ಆರಂಭಿಸುತ್ತಿದೆ ಎಂದು ಎಕ್ಸ್ ಸಿಇಒ ಲಿಂಡಾ ಯಾಕರಿನೊ ಕಳೆದ ತಿಂಗಳು ಹೇಳಿದ್ದರು.
-
ready for it…?
— X (@X) October 25, 2023 " class="align-text-top noRightClick twitterSection" data="
">ready for it…?
— X (@X) October 25, 2023ready for it…?
— X (@X) October 25, 2023
ಎಕ್ಸ್ (ಹಿಂದೆ ಟ್ವಿಟರ್) ಇದೊಂದು ಆನ್ಲೈನ್ ಸುದ್ದಿ ಮತ್ತು ಸಾಮಾಜಿಕ ನೆಟ್ವರ್ಕಿಂಗ್ ಸೈಟ್ ಆಗಿದ್ದು, ಇದರಲ್ಲಿ ಜನ ಕಿರು ಸಂದೇಶಗಳ ಮೂಲಕ ಸಂವಹನ ನಡೆಸಬಹುದು. X ಇದು ಮೈಕ್ರೋಬ್ಲಾಗಿಂಗ್ ಪ್ಲಾಟ್ ಫಾರ್ಮ್ ಆಗಿದೆ. ಎಕ್ಸ್ನಲ್ಲಿರುವ ನೂರಾರು ಬಳಕೆದಾರರ ಪೋಸ್ಟ್ಗಳನ್ನು ಅತ್ಯಂತ ತ್ವರಿತವಾಗಿ ನೀವು ನೋಡಬಹುದು.
ಅಲ್ಲದೆ ಕೆಲವೇ ನಿಮಿಷಗಳಲ್ಲಿ ನೂರಾರು ಫೀಡ್ಗಳನ್ನು ಸ್ಕ್ರೋಲ್ ಮಾಡಬಹುದು. X ಅನ್ನು ನೀವು ಪೋಸ್ಟ್ ಮಾಡಲು ಅಥವಾ ರೀಡರ್ ಆಗಿ ಬಳಸಬಹುದು. ಇದರಲ್ಲಿ ಉಚಿತವಾಗಿ ಖಾತೆ ಆರಂಭಿಸಿ ಯೂಸರ್ ನೇಮ್ ಪಡೆಯಬಹುದು. ನಿಮ್ಮನ್ನು ಫಾಲೋ ಮಾಡುವವರು ಹಾಗೂ ಫಾಲೋ ಮಾಡದೆ ಇರುವವರು ಕೂಡ ನಿಮ್ಮ ಪೋಸ್ಟ್ ಅನ್ನು ಓದಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಇನ್ನು ಈ ಫೋನ್ಗಳಲ್ಲಿ ಕೆಲಸ ಮಾಡಲ್ಲ ವಾಟ್ಸ್ಆ್ಯಪ್! ನಿಮ್ಮದು ಯಾವ ವರ್ಷನ್ ನೋಡಿಕೊಳ್ಳಿ..