ಗಾಂಧಿನಗರ( ಗುಜರಾತ್): ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷ ಇನ್ನೂ ನಡೆಯುತ್ತಲೇ ಇದೆ. ಈ ಮಧ್ಯೆ ಹಿಂತಿರುಗಿ ನೋಡುವುದಾದರೆ, ಪೆಸಿಫಿಕ್ ಯುದ್ಧದ ಸಮಯದಲ್ಲಿ ಅಮೆರಿಕ ಸೈನ್ಯವು ಜಪಾನ್‌ನ ನಾಗಸಾಕಿ ಮತ್ತು ಹಿರೋಷಿಮಾ ಮೇಲೆ ಅಣುಬಾಂಬ್‌ಗಳನ್ನು ಹಾಕಿದ್ದ ಕರಾಳ ಇತಿಹಾಸವನ್ನೂ ಒಮ್ಮೆ ನೆನಪಿಸಿಕೊಳ್ಳಬೇಕಾಗುತ್ತದೆ.
ಒಂದು ದೇಶವು ತನ್ನ ಎದುರಾಳಿ ರಾಷ್ಟ್ರದೊಂದಿಗೆ ಪರೋಕ್ಷವಾಗಿ ಯುದ್ಧ ಮಾಡಲು ತಂತ್ರಜ್ಞಾನ ಅಥವಾ ಜೈವಿಕ ಶಸ್ತ್ರಾಸ್ತ್ರಗಳನ್ನು ಬಳಸಿಕೊಳ್ಳುತ್ತಿರುವಾಗ ಭವಿಷ್ಯದಲ್ಲಿ ದೇಶದ ಗಡಿಯಲ್ಲೂ ಇಂತಹ ಜೈವಿಕ ಶಸ್ತ್ರಾಸ್ತ್ರ ಸಂಘರ್ಷ ಉದ್ಭವಿಸಿದರೂ ಯಾವುದೇ ಅಚ್ಚರಿ ಇಲ್ಲ. ಹೀಗಾಗಿ ಭಾರತ ಎಡಬಲಗಳಲ್ಲಿ ಶತ್ರುಗಳನ್ನ ಹೊಂದಿದೆ. ಹೀಗಾಗಿ ಭಾರತದ ಸೈನಿಕರು ಯಾವುದಕ್ಕೂ ಸಿದ್ದರಾಗಿರಬೇಕಾಗುತ್ತದೆ.
ಜೈವಿಕ ಯುದ್ಧಕ್ಕೂ ರಾಷ್ಟ್ರದ ಸೈನಿಕರು ಸಿದ್ಧ: ETV ಭಾರತಕ್ಕೆ ನೀಡಿದ ಸಂದರ್ಶನದಲ್ಲಿ DRDO ವಿಜ್ಞಾನಿ ಅಜಯ್ ಕುಮಾರ್ ಹಲವು ಮಹತ್ವದ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ. ದೇಶವು ಪ್ರಸ್ತುತ ಸ್ವಾವಲಂಬನೆಯತ್ತ ಸಾಗುತ್ತಿದೆ ಮತ್ತು DRDO ರಕ್ಷಣಾ ವ್ಯವಸ್ಥೆಗಳು ಸೇರಿದಂತೆ ಹಲವು ಹೊಸ ಅಂಶಗಳನ್ನು ಸಿದ್ಧಪಡಿಸುತ್ತಿದೆ ಎಂಬ ಅಂಶವನ್ನು ದೇಶದ ಜನರ ಎದುರು ತೆರೆದಿಟ್ಟಿದ್ದಾರೆ. ರಷ್ಯಾ- ಉಕ್ರೇನ್ ಯುದ್ದ ನಡೆಯುತ್ತಿರುವ ಈ ಸಂದರ್ಭದಲ್ಲಿ ರಾಸಾಯನಿಕ ಮತ್ತು ಜೈವಿಕ ಯುದ್ಧದ ಸನ್ನಿವೇಶ ಸೃಷ್ಟಿಯಾಗಿದೆ. ಹೀಗಾಗಿ ಜೈವಿಕ ಮತ್ತು ರಾಸಾಯನಿಕ ಪರಿಸ್ಥಿತಿಗಳನ್ನು ತಡೆಗಟ್ಟಲು, ಅದನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲು ಹಾಗೂ ಉತ್ತಮ ಸೌಲಭ್ಯಗಳ ಕುರಿತು ಸಂಶೋಧನೆ ಮಾಡಲಾಗಿದೆ ಎಂದು ಅಜಯ್ ಕುಮಾರ್ ಹೇಳಿದ್ದಾರೆ.
ಏನಿದು ಜೈವಿಕ ಆಯುಧ?: ದೇಶದಲ್ಲಿ ಸಂಭವಿಸಬಹುದಾದ ರಾಸಾಯನಿಕ ಮತ್ತು ಜೈವಿಕ ಸನ್ನಿವೇಶವನ್ನು ನಿಭಾಯಿಸಲು ನಿರ್ದಿಷ್ಟ ರೀತಿಯ ಆಯುಧ ವಿನ್ಯಾಸಗೊಳಿಸಲಾಗಿದೆ ಎಂದು ವಿಜ್ಞಾನಿ ಅಜಯ್ ಕುಮಾರ್ ತಿಳಿಸಿದ್ದಾರೆ. ಪ್ರಯೋಗಾಲಯದಲ್ಲಿ ಈ ಸಂಬಂಧಿತ ಉಡುಪನ್ನು ಈಗಾಗಲೇ ಮಾಡಲಾಗಿದೆ. ಇಂತಹ ಯಾವುದೇ ದಾಳಿ ನಡೆದರೂ ಸೈನಿಕರನ್ನು ರಕ್ಷಣೆ ಮಾಡುವ ತಂತ್ರಜ್ಞಾನ ಕಂಡುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶತ್ರು ರಾಷ್ಟ್ರವು ನಮ್ಮ ದೇಶದ ಗಡಿಯೊಂದರ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಸೈನಿಕನು ಈ ಸೂಟ್ ಧರಿಸುವ ಮೂಲಕ ಆ ಸ್ಥಳದಲ್ಲಿ ಯಾವ ರೀತಿಯ ರಾಸಾಯನಿಕ ಇದೆ ಎಂಬುದನ್ನು ಗುರುತಿಸಲು ಈ ತಂತ್ರಜ್ಞಾನದಿಂದ ಸಾಧ್ಯವಾಗುತ್ತದೆ ಎಂದು ಅಜಯ್ ಕುಮಾರ್ ಹೇಳಿದ್ದಾರೆ.
ಈ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ?: ವ್ಯವಸ್ಥೆಯ ಪರಿಭಾಷೆಯಲ್ಲಿ ಹೇಳುವುದಾದರೆ, DRDO ತಯಾರಿಸಿರುವ ಸೂಟ್ ಧರಿಸಿದ ಜವಾನ್ ರಾಸಾಯನಿಕ ಇರುವ ಸ್ಥಳವನ್ನು ಸಮೀಪಿಸುತ್ತಾರೆ ಮತ್ತು ಈ ಸಂಬಂಧ ತಯಾರಿಸಲಾಗಿರುವ ಆಯುಧದಿಂದ ಅದನ್ನು ವಿಫಲಗೊಳಿಸಲಾಗುತ್ತದೆ. ಒಂದು ಪ್ರದೇಶದಲ್ಲಿ ರಾಸಾಯನಿಕ ಇದೆ ಎಂದು ವರದಿಯಾದಾಗ ಜವಾನನಿಗೆ ಫಾಸ್ಟ್ ಕಿಟ್ ನೀಡಲಾಗುತ್ತದೆ.
ಇದು ವಿಶಿಷ್ಟ ರೀತಿಯ ಇಂಜೆಕ್ಷನ್ ಅನ್ನು ಒಳಗೊಂಡಿರುತ್ತದೆ. ಈ ವೇಳೆ ಚುಚ್ಚುಮದ್ದು ನೀಡುತ್ತಿದ್ದಂತೆ ಅದನ್ನು ಶೂಟ್ ಮಾಡಬೇಕಾಗುತ್ತದೆ. ಈ ಇಂಜೆಕ್ಷನ್ ವೈರಸ್ಗಳ ವಿರುದ್ಧ ಸಂಪೂರ್ಣ ಪ್ರತಿರಕ್ಷೆಯನ್ನು ನೀಡುತ್ತದೆ. ಇದೇ ವೇಳೆ, ರಸಾಯನಿಕ ಇರುವ ಪ್ರದೇಶದಲ್ಲಿ ಸೈನಿಕ ಈ ಕ್ಷಣದಲ್ಲಿ ಯಾವ ರೀತಿಯ ವೈರಸ್‌ನೊಂದಿಗೆ ವ್ಯವಹರಿಸುತ್ತಿದ್ದಾರೆ ಎಂಬುದನ್ನು, ನಿಯಂತ್ರಣ ಕೊಠಡಿಗೆ ಸಂದೇಶಗಳನ್ನು ರವಾನಿಸುತ್ತದೆ. ಇಲ್ಲಿನ ಮಾಹಿತಿ ಆಧಾರದ ಮೇಲೆ ಆ ಸೋಂಕು ನಿರ್ವಹಿಸುವ ಪ್ರಯತ್ನವು ತಕ್ಷಣವೇ ಪ್ರಾರಂಭವಾಗುತ್ತದೆ. ಇದರಿಂದಾಗಿ ರಾಸಾಯನಿಕ ದಾಳಿ ನಡೆದಾಗ ತಡಮಾಡದೆ ಒಂದೆರಡು ಗಂಟೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬರಬಹುದು.
ಸೈನ್ಯದಲ್ಲಿ ಜೈವಿಕ ಶಸ್ತ್ರಾಸ್ತ್ರಗಳ ಬಳಕೆ: ಭಾರತೀಯ ಸೇನೆಯು ಜೈವಿಕ ಶಸ್ತ್ರಾಸ್ತ್ರಗಳನ್ನು ಸಕ್ರಿಯವಾಗಿ ಬಳಸುತ್ತಿದೆ. ಆದರೆ, ಭದ್ರತಾ ಕಾಳಜಿಯ ಕಾರಣ DRDO ಈ ವಿಷಯದ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ. ಈ ಜ್ಞಾನವು ಎದುರಾಳಿ ರಾಷ್ಟ್ರಕ್ಕೆ ಅನುಕೂಲಕರವಾಗಬಹುದು ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಆದ್ದರಿಂದ, ಅಂತಹ ಯಾವುದೇ ವಿವರಗಳನ್ನು ನೀಡಲಾಗಿಲ್ಲ.
ಇದನ್ನು ಓದಿ:10 ಲಕ್ಷ ಜನರಿಗೆ ಉದ್ಯೋಗ ನೀಡುವ ರೋಜ್‌ಗಾರ್ ಮೇಳಕ್ಕೆ ಅ.22ರಂದು ಮೋದಿ ಚಾಲನೆ