ETV Bharat / science-and-technology

SSLV: ಎಸ್‌ಎಸ್‌ಎಲ್‌ವಿಯನ್ನು ಉದ್ಯಮಕ್ಕೆ ವರ್ಗಾಯಿಸಲು ಮುಂದಾದ ಇಸ್ರೋ...

ಚಂದ್ರಯಾನ-3 ಉಡಾವಣೆಗೆ ಕೆಲವು ದಿನಗಳ ಮೊದಲು, ಸಣ್ಣ ಉಪಗ್ರಹಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ತನ್ನ 'ಸಣ್ಣ ಉಪಗ್ರಹ ಉಡಾವಣಾ ವಾಹಕ'ವನ್ನು (ಎಸ್​ಎಸ್​ಎಲ್​ವಿ) ಖಾಸಗಿ ವಲಯಕ್ಕೆ ವರ್ಗಾಯಿಸುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಘೋಷಣೆ ಮಾಡಿದೆ.

ISRO
ಎಸ್‌ಎಸ್‌ಎಲ್‌ವಿಯನ್ನು ಉದ್ಯಮಕ್ಕೆ ವರ್ಗಾಯಿಸಲು ಮುಂದಾದ ಇಸ್ರೋ
author img

By

Published : Jul 10, 2023, 6:02 PM IST

ನವದೆಹಲಿ: ಸಣ್ಣ ಉಪಗ್ರಹಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು(ಇಸ್ರೋ) ತನ್ನ ''ಸಣ್ಣ ಉಪಗ್ರಹ ಉಡಾವಣಾ ವಾಹಕ''ವನ್ನು (ಎಸ್‌ಎಸ್‌ಎಲ್‌ವಿ) ಖಾಸಗಿ ವಲಯಕ್ಕೆ ವರ್ಗಾಯಿಸಲಾಗುವುದಾಗಿ ಸೋಮವಾರ ಪ್ರಕಟಿಸಿದೆ. ಎರಡು ಅಭಿವೃದ್ಧಿ ಹೊಂದಿರುವ ಎಸ್​ಎಸ್​ಎಲ್​ವಿಯು, 500 ಕೆಜಿ ತೂಕದ ಉಪಗ್ರಹಗಳನ್ನು ಭೂಮಿಯ ಕಕ್ಷೆಯಲ್ಲಿ ಸೇರಿಸುವ ಬೇಡಿಕೆಯ ಸೇವೆಗಳನ್ನು ಒದಗಿಸಲು ಮುಂದಾಗಿದೆ.

ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದೇನು?: "ನಾವು ನಮ್ಮದೇ ಆದ ಎಸ್​ಎಸ್​ಎಲ್​ವಿ ಅನ್ನು ನಿರ್ಮಿಸಿದ್ದೇವೆ. ಅದನ್ನು ಉದ್ಯಮಕ್ಕೆ ವರ್ಗಾಯಿಸಲಾಗುವುದು ಮತ್ತು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಲಾಗುವುದು" ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು, ಎಸ್​ಐಎ ಇಂಡಿಯಾ ಆಯೋಜಿಸಿದ್ದ ಇಂಡಿಯಾ ಸ್ಪೇಸ್ ಕಾಂಗ್ರೆಸ್ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು. ಮಿನಿ ರಾಕೆಟ್ ಅನ್ನು ಉದ್ಯಮಕ್ಕೆ ವರ್ಗಾಯಿಸಲು ಬಿಡ್ಡಿಂಗ್ ಮಾರ್ಗವನ್ನು ಆಯ್ಕೆ ಮಾಡಲು ಬಾಹ್ಯಾಕಾಶ ಸಂಸ್ಥೆ ನಿರ್ಧರಿಸಿದೆ ಎಂದರು.

ಎಸ್‌ಎಸ್‌ಎಲ್‌ವಿ ಇಸ್ರೋ ಅಭಿವೃದ್ಧಿಪಡಿಸಿದ ಆರನೇ ಉಡಾವಣಾ ವಾಹಕವಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಎರಡು ಅಭಿವೃದ್ಧಿ ಪಡಿಸಲಾದ ವಾಹಕಗಳು ಹಾರಾಟ ನಡೆಸಿವೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಎಸ್‌ಎಸ್‌ಎಲ್‌ವಿಯ ಮೊದಲ ಹಾರಾಟವು ಎರಡನೇ ಹಂತದ ಬೇರ್ಪಡಿಕೆ ಸಮಯದಲ್ಲಿ ಎಕ್ವಿಪ್‌ಮೆಂಟ್ ಬೇ ಡೆಕ್‌ನಲ್ಲಿ ಅಲ್ಪಾವಧಿಗೆ ಕಂಪನ ಅಡಚಣೆಯಿಂದಾಗಿ ವಿಫಲವಾಗಿತ್ತು. ಈ ದೋಷದ ಬಗ್ಗೆ ಆಳವಾದ ವಿಶ್ಲೇಷಣೆಯನ್ನು ನಡೆಸಿದ ನಂತರ, ಇಸ್ರೋ ಸರಿಪಡಿಸುವ ಕ್ರಮಗಳನ್ನು ಕೈಗೊಂಡಿತ್ತು. ಫೆಬ್ರವರಿಯಲ್ಲಿ ಎಸ್​ಎಸ್​ಎಲ್​ವಿಯ ಯಶಸ್ವಿ ಉಡಾವಣೆ ನಡೆಸಿತು. ಎಸ್​ಎಸ್​ಎಲ್​ವಿ ಇಸ್ರೋದ ಇಒಎಸ್​-07 ಉಪಗ್ರಹ, ಯುಎಸ್​ ಮೂಲದ ಸಂಸ್ಥೆ ಅಂತರಿಸ್​ನ ಜಾನಸ್-1 ಹಾಗೂ ಚೆನ್ನೈ ಮೂಲದ ಬಾಹ್ಯಾಕಾಶ ಸ್ಟಾರ್ಟ್ ಅಪ್ ಸ್ಪೇಸ್ ಕಿಡ್ಜ್‌ನ ಆಜಾದಿಸ್ಯಾಟ್-2 ಉಪಗ್ರಹಗಳನ್ನು 450 ಕಿ.ಮೀ ವೃತ್ತಾಕಾರದ ಕಕ್ಷೆಗೆ ಸೇರಿಸಿತು.

ಎಸ್​ಎಸ್ಎಲ್​ವಿ ನಂತಹ ಸಣ್ಣ ರಾಕೆಟ್‌ಗಳು, ಕ್ರಮವಾಗಿ 10 ಕೆಜಿ ಹಾಗೂ 100 ಕೆಜಿಗಿಂತ ಕಡಿಮೆ ತೂಕದ ನ್ಯಾನೊ ಮತ್ತು ಸೂಕ್ಷ್ಮ-ಉಪಗ್ರಹಗಳನ್ನು ಸಾಗಿಸಲು ದೊಡ್ಡ ರಾಕೆಟ್‌ಗಳಿಗಾಗಿ ಕಾಯುವ ಅಗತ್ಯವಿಲ್ಲ. ಬದಲಾಗಿ ಬೇಡಿಕೆಯ ಅನ್ವಯ ಉಡಾವಣಾ ಸೇವೆಗಳನ್ನು ಒದಗಿಸುತ್ತವೆ. ಕಳೆದ ವರ್ಷ, ಇಸ್ರೋ ಐದು ಧ್ರುವೀಯ ಉಪಗ್ರಹ ಉಡಾವಣಾ ವಾಹನಗಳ (ಪಿಎಸ್​ಎಲ್​ವಿಗಳು) ಮೂಲಕ 54 ಯಶಸ್ವಿ ಉಪಗ್ರಹಗಳನ್ನು ಉಡಾವಣೆಗಳನ್ನು ಮಾಡಲು, ಈ ರಾಕೆಟ್ ನಿರ್ಮಿಸಲು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಲಾರ್ಸನ್ ಮತ್ತು ಟೌಬ್ರೊದ ಒಕ್ಕೂಟವು ಗುತ್ತಿಗೆ ನೀಡಿತ್ತು.

2025ರ ವೇಳೆಗೆ ಆರ್ಥಿಕತೆಗೆ 13 ಶತಕೋಟಿ ಡಾಲರ್​ ಲಾಭ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಮತ್ತು ಸಲಹಾ ಸಂಸ್ಥೆ ಇವೈ ಇಂಡಿಯಾ ಸಿದ್ಧಪಡಿಸಿದ ಇತ್ತೀಚಿನ ವರದಿಯು ವಾಣಿಜ್ಯ ಉಪಗ್ರಹ ಉಡಾವಣಾ ಸೇವೆಗಳು ಭಾರತದ ದೇಶೀಯ ಬಾಹ್ಯಾಕಾಶ ಉದ್ಯಮವು 2025ರ ವೇಳೆಗೆ ಆರ್ಥಿಕತೆಗೆ 13 ಶತಕೋಟಿ ಡಾಲರ್​ ಕೊಡುಗೆಯನ್ನು ನೀಡಲಿದೆ ಎಂದು ಹೇಳಿದೆ. ಎಸ್​ಎಸ್​ಎಲ್​ವಿ ಉಪಗ್ರಹ ಉಡಾವಣೆಯ ನಂತರ ಇಸ್ರೋ ಅಭಿವೃದ್ಧಿಪಡಿಸಿದ ಆರನೇ ಉಡಾವಣಾ ವಾಹಕವಾಗಿದೆ. ವಾಹಕ-3 (ಎಸ್​ಎಲ್​​ವಿ-3), ಸುಧಾರಿತ ಉಪಗ್ರಹ ಉಡಾವಣಾ ವಾಹಕ (ಎಎಸ್​ಎಲ್​ವಿ), ಪೋಲಾರ್ ಉಪಗ್ರಹ ಉಡಾವಣಾ ವಾಹಕ (ಪಿಎಸ್​ಎಲ್​ವಿ), ಜಿಯೋಸಿಂಕ್ರೊನಸ್ ಉಪಗ್ರಹ ಉಡಾವಣಾ ವಾಹಕ (ಜಿಎಸ್​ಎಸ್​ವಿ) ಮತ್ತು ಲಾಂಚ್ ವೆಹಿಕಲ್ ಮಾರ್ಕ್-3 (ಎಲ್​ವಿಎಂ-3) ಇವು ಇಸ್ರೋ ಸಿದ್ಧಪಡಿಸಿದ ರಾಕೆಟ್​ಗಳಾಗಿವೆ​. ಇದರಲ್ಲಿ ಎಸ್‌ಎಲ್‌ವಿ-3 ಮತ್ತು ಎಎಸ್‌ಎಲ್‌ವಿಯ ಉತ್ಪಾದನೆ ಹಾಗೂ ಬಳಕೆಯನ್ನು ನಿಲ್ಲಿಸಲಾಗಿದೆ.

ಇದನ್ನೂ ಓದಿ: Chandrayaan-3 Mission: ರಾಕೆಟ್‌ನ ವಿದ್ಯುತ್ ಪರೀಕ್ಷೆಗಳು ಪೂರ್ಣ: ಉಡಾವಣೆ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ.. ನೋಂದಣಿ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.