ಬಾರ್ಸಿಲೋನಾ : ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಹೊಸದಾಗಿ 1UI ವಾಚ್ನ್ನು ಬಿಡುಗಡೆ ಮಾಡಲಿಧಎ. ಇದು ವಾಚ್ ಮತ್ತು ಸ್ಮಾರ್ಟ್‌ಫೋನ್ ಬಳಕೆಗೆ ಉಪಕಾರಿಯಾಗುವಂತೆ ವಿನ್ಯಾಸಗೊಳಿಸಲಾಗಿದೆ.
2021ರಲ್ಲಿ ಹೊಸ ಗ್ಯಾಲಕ್ಸಿ ವಾಚ್ 1UI ಲಭ್ಯವಿರುತ್ತದೆ ಎಂದು ಕಂಪನಿ ದೃಢಪಡಿಸಿದೆ. ಇದು ಗೂಗಲ್‌ನೊಂದಿಗೆ ಜಂಟಿಯಾಗಿ ನಿರ್ಮಿಸಲ್ಪಟ್ಟಿದೆ. ಶೀಘ್ರದಲ್ಲಿಯೇ ಈ ಉತ್ಪನ್ನ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
"ನಮ್ಮ ಮುಕ್ತ ಪರಿಸರ ವ್ಯವಸ್ಥೆಯಲ್ಲಿ ನಮ್ಮೊಂದಿಗೆ ಬೆಳೆಯುತ್ತಿರುವ ಮೊಬೈಲ್ ಆವಿಷ್ಕಾರ ಮತ್ತು ವಿಶ್ವಾಸಾರ್ಹ ಉದ್ಯಮದ ನಾಯಕರೊಂದಿಗಿನ ಸಹಭಾಗಿತ್ವವನ್ನು ನಾವು ಹೆಚ್ಚಿಸುತ್ತಿದ್ದೇವೆ"ಎಂದು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಮೊಬೈಲ್ ಸಂವಹನ ವ್ಯವಹಾರದ ಇವಿಪಿ ಮತ್ತು ಗ್ರಾಹಕ ಅನುಭವ ಕಚೇರಿಯ ಮುಖ್ಯಸ್ಥ ಪ್ಯಾಟ್ರಿಕ್ ಚೊಮೆಟ್ ಹೇಳಿದ್ದಾರೆ.
ಇದನ್ನು ಒದಿ: 40 ಕೋಟಿ ಉದ್ಯೋಗದಾರರಲ್ಲಿ ಅರ್ಧದಷ್ಟು ಮಂದಿ ಸಾಲದ ಸುಳಿಯಲ್ಲಿದ್ದಾರೆ - ವರದಿ
"ಈ ಪ್ರಯತ್ನಗಳ ಮೂಲಕ, ನಮ್ಮ ಗ್ರಾಹಕರಿಗೆ ಸ್ಮಾರ್ಟ್ ವಾಚ್ ಅನುಭವ ಮತ್ತು ಗ್ಯಾಲಕ್ಸಿ ವ್ಯವಸ್ಥೆಯ ಅನುಕೂಲತೆಯನ್ನು ನಾವು ನೀಡಲಿದ್ದೇವೆ "ಎಂದು ಅವರು ಹೇಳಿದ್ದಾರೆ. ಗ್ಯಾಲಕ್ಸಿ ವಾಚ್‌ನಲ್ಲಿ ನೇರವಾಗಿ ಗೂಗಲ್ ಪ್ಲೇನಿಂದ ಅಪ್ಲಿಕೇಶನ್ಗಳನ್ನು ಡೌನ್‌ಲೋಡ್ ಮಾಡುವ ವ್ಯವಸ್ಥೆ ಇರಲಿದೆ ಎನ್ನಲಾಗಿದೆ. ಇನ್ನು, ಸ್ಯಾಮ್‌ಸಂಗ್ ವಾಚ್ ಉತ್ತಮ ವಿನ್ಯಾಸ ಹೊಂದಿದೆ. ಉಪಯೋಗಿಸಲು ಸುಲಭ ವಿಧಾನ ಹೊಂದಿದೆ.