ಬೆಂಗಳೂರು: ವಿವೋ ಸ್ಮಾರ್ಟ್ ಫೋನ್ ಭಾರತದಲ್ಲಿ X90 ಸರಣಿಯ ಹೊಸ ಎರಡು ಫೋನ್ಗಳನ್ನು ಬಿಡುಗಡೆ ಮಾಡಿದೆ. ZEISS 1 ಇಂಚಿನ ಮುಖ್ಯ ಕ್ಯಾಮೆರಾದೊಂದಿಗೆ X90 and X90 Pro ಫೋನ್ ಬಿಡುಗಡೆ ಮಾಡಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ಫೋನ್ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಕ್ಯಾಮೆರಾ ವಿಷಯದಲ್ಲಿ ವಿವೋ ಗ್ರಾಹಕರ ಮನಸ್ಸನ್ನು ಗೆಲ್ಲಲು ವಿಶೇಷ ವೈಶಿಷ್ಟಗಳನ್ನು ಪರಿಚಯಿಸಲಿದೆ. 12 ಜಿಬಿ+256 ಜಿಬಿ ವೆರಿಯಂಟ್ನೊಂದಿಗೆ X90 Pro ಬಳಕೆ ಸಿಗಲಿದೆ.
X90: ಇನ್ನು ಫೋನ್ ವಿನ್ಯಾಸದಲ್ಲಿ ಹೇಳುವುದಾದರೆ ಸಿಕ್ಕಾಪಟ್ಟೆ ಸ್ಲಿಮ್ ಪ್ರೋಫೈಲ್ ಅನ್ನು ಇದು ಹೊಂದಿದ್ದು, 5 ಎಂಎಂನ ಬ್ಯಾಕ್ ಪ್ಯಾನೆಲ್ ಕ್ಯಾಮೆರಾ ಬಂಪ್ ಎಲ್ಲರ ಗಮನ ಸೆಳೆಯುವುದು ಸುಳ್ಳಲ್ಲ. ಫೋನ್ ಬದಿಯಲ್ಲಿ ನಯವಾದ ಗ್ಲೊಸಿ, ಡಾರ್ಕ್ ಮೆಟಾಲಿಕ್ ಫಿನಿಶಿಂಗ್ ಇದ್ದು, ಇದಕ್ಕೆ ಹೊಂದಾಣಿಕೆಯಾಗುವ ಇದೇ ಮೆಟಿರಿಯಲ್ ಹಿಂಬದಿಯ ಪ್ಯಾನೆಲ್ ಅನ್ನು ಆವರಿಸುತ್ತದೆ.
ಕೇವಲ ಲುಕ್ನಲ್ಲಿ ಮಾತ್ರವಲ್ಲದೇ, ಹಿಡಿತದಲ್ಲೂ ಪರ್ಫೆಕ್ಟ್ ಕಾಯ್ದುಕೊಂಡಿದ್ದು, ಕೈಯಲ್ಲಿಡಿದಾಗ ಸುರಕ್ಷಿತವಾಗಿರುವಂತೆ ಕೇಸ್ ನಿರ್ಮಾಣ ಮಾಡಲಾಗಿದೆ, ಗಾತ್ರ ಮತ್ತು ತೂಕವನ್ನು ಗಣನೆಯ ಹೊರತಾಗಿ ಫೋನ್ ಹಿಡಿದುಕೊಳ್ಳುವುದು ಆರಾಮದಾಯಕವಾಗಿದೆ. ಮಾರುಕಟ್ಟೆಯಲ್ಲಿ ಅನೇಕ ಫೋನ್ಗಳ ನಡುವೆ ಈ ಫೋನ್ ಎಂದು ಕಾಣುವಂತೆ ಮಾಡುವ ಮತ್ತೊಂದು ಹೊಸ ವೈಶಿಷ್ಟ್ಯ ಎಂದರೆ ಅದು ಕ್ಯಾಮೆರಾ ಆಗಿದೆ, ಬೇರೆ ಸ್ಮಾರ್ಟ್ ಫೋನ್ಗೆ ಹೋಲಿಕೆ ಮಾಡಿದಾಗ ದೊಡ್ಡ ಗಾತ್ರದ ಕ್ಯಾಮೆರಾ ಬಂಪ್ ನಿಮ್ಮ ಕಣ್ಣು ಸೆಳೆಯದೇ ಇರಲಾರದು.
ಮತ್ತೊಂದು ಆಸಕ್ತಿಕರ ಅಂಶ ಎಂದರೆ ಇದರ ಕ್ಯಾಮೆರಾ ತುದಿಗಳು. ಇದರಿಂದ ಇವುಗಳನ್ನು ನಿರ್ವಹಣೆಯನ್ನು ಒಂದೇ ಕೈಯಲ್ಲಿ ಸುಲಭವಾಗಿ, ಸರಳವಾಗಿ ಮಾಡಬಹುದಾಗಿದೆ,
X90 Pro: ಇನ್ನು ಮತ್ತೊಂದು ಸರಣಿಯಾದ X90 Pro ಬಗ್ಗೆ ಮಾತನಾಡುವುದಾದರೆ ಇದು 6.78 ಇಂಚಿನ ಅಮೊಲೆಡ್ ಡಿಸ್ಪ್ಲೈ ಹೊಂದಿದ್ದು, ಇದರ ಪಿಕ್ಸೆಲ್ ರೆಸ್ಯೂಲೆಷನ್ 2800x1260 ಆಗಿದೆ. ಫೋನ್ ಡಿಸ್ಪ್ಲೈ ಹೊಸ ತಾಜಾತನದಿಂದ ಕೂಡಿದ್ದು, ಇದು 120 ಹರ್ಟ್ಸ್ ಇದೆ. ಇದರಿಂದ ಇದರ ಸ್ಕ್ರೋಲ್ ಮಾಡುವುದು ಸುಲಭವಾಗಿದೆ. ಜೊತೆಗೆ ಡಿಸ್ಪ್ಲೈ ಬೆಂಬಲ ಎಚ್ಡಿಆರ್ 10+ಕಂಟೆಟ್ ವೈಬ್ರೆಂಟ್ ಆಗಿದ್ದು, ಕಲರ್ ಜೊತೆಗೆ ಹೆಚ್ಚಿನ ಕಂಟ್ರಸ್ಟ್ ಹೊಂದಿದೆ.
ಮೊಬೈಲ್ ಪರದೆಗಳು ಬ್ರೈಟ್ ಆಗಿದ್ದು, ಇದನ್ನು ಬೆಳಕಿನ ಪ್ರಖರ ಬಿಸಿಲಿನಲ್ಲೂ ಆರಾಮದಾಯಕವಾಗಿ ಕಾಣಬಹುದಾಗಿದೆ. 120 ಹರ್ಟ್ ದರ ವನ್ನು ಹೊಂದಿದ್ದು, ನಯವಾದ ಮತ್ತು ತಡೆರಹಿತ ಸ್ವೈಪಿಂಗ್ ಗೆಸ್ಚರ್‌ಗಳೊಂದಿಗೆ ಆಪರೇಟಿಂಗ್ ಸಿಸ್ಟಂ ಮೂಲಕ ನ್ಯಾವಿಗೇಟ್ ಮಾಡಬಹುದಾಗಿದೆ.
ಡುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಮೊಬೈಲ್ ಹೊಂದಿದ್ದು, ಇದರ ಪ್ರಭಾವಶಾಲಿ ಅಂಶ ಇದಾಗಿದೆ. ಲೌಡ್ ಸ್ಪೀಕರ್‌ಗಳಾಗಿಲ್ಲದಿದ್ದರೂ, ಇದು ಉತ್ತಮ ಸ್ಟಿರಿಯೊ ಬೇರ್ಪಡಿಕೆ ಮತ್ತು ಕಡಿಮೆ-ಮಟ್ಟದ ಪ್ರತಿಕ್ರಿಯೆಯನ್ನು ಹೊಂದಿದೆ. X90 Pro ಉತ್ತಮ ಫೋಟೋ ಗುಣಮಟ್ಟ ಹೊಂದಿದ್ದು, ಉನ್ನತ ಮಟ್ಟದ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಕೆ ಮಾಡಿದರೆ, ಇದು ಉತ್ತಮ ಮಟ್ಟದ ಎಚ್ಡಿಆರ್ ಪರಿಣಾಮವನ್ನು ಹೊಂದಿದೆ. ಕ್ಯಾಮೆರಾ ವೈಡ್ - ಆಂಗಲ್ ಕ್ಯಾಮೆರಾವು ಮೂರು ಕ್ಯಾಮೆರಾಗಳಲ್ಲಿ 12 ಮೆಗಾ ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ.
ಇದನ್ನೂ ಓದಿ: ದೇಶದಲ್ಲಿ 75 ಕೋಟಿ ಇಂಟರ್ನೆಟ್ ಬಳಕೆದಾರರು: ಮುಂಚೂಣಿಯಲ್ಲಿ ಗ್ರಾಮೀಣ ಭಾರತ!