ಲಂಡನ್ (ಇಂಗ್ಲೆಂಡ್): ಅನೇಕ ಗ್ರಾಹಕ ಉತ್ಪನ್ನಗಳಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್‌ಗಳ ಬದಲಾಗಿ ಬಳಸಬಲ್ಲ, ಸಸ್ಯ ಆಧಾರಿತ, ಸುಸ್ಥಿರ, ಸ್ಕೇಲೇಬಲ್ ವಸ್ತುವನ್ನು ಸಂಶೋಧಕರು ರಚಿಸಿದ್ದಾರೆ. ಬ್ರಿಟನ್ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು, ಪ್ರಕೃತಿಯ ಪ್ರಬಲ ವಸ್ತುಗಳಲ್ಲಿ ಒಂದಾದ ಜೇಡ ರೇಷ್ಮೆಯ ಮೂಲಕ ಪಾಲಿಮರ್ ಫಿಲ್ಮ್ ಸೃಷ್ಟಿಸಿದ್ದಾರೆ.
ಹೊಸ ವಸ್ತುವು ಇಂದು ಬಳಕೆಯಲ್ಲಿರುವ ಅನೇಕ ಸಾಮಾನ್ಯ ಪ್ಲಾಸ್ಟಿಕ್‌ಗಳಂತೆ ಪ್ರಬಲವಾಗಿದೆ ಮತ್ತು ಅನೇಕ ಉತ್ಪನ್ನಗಳಲ್ಲಿ ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಇದನ್ನು ಬಳಸಬಹುದಾಗಿದೆ.
ಸಸ್ಯ ಪ್ರೋಟೀನ್‌ಗಳನ್ನು ಆಣ್ವಿಕ ಮಟ್ಟದಲ್ಲಿ ರೇಷ್ಮೆಯನ್ನು ಅನುಕರಿಸುವ ವಸ್ತುಗಳಾಗಿ ಜೋಡಿಸಲು ಹೊಸ ವಿಧಾನವನ್ನು ಬಳಸಿಕೊಂಡು ಈ ವಸ್ತುವನ್ನು ರಚಿಸಲಾಗಿದೆ.
ಸುಸ್ಥಿರ ಪದಾರ್ಥಗಳನ್ನು ಬಳಸುವ ಇದನ್ನು ಕೈಗಾರಿಕಾ ಪ್ರಮಾಣದಲ್ಲಿ ತಯಾರಿಸಬಹುದು. ಅಧಿಕ ಮಟ್ಟದಲ್ಲಿ ತಯಾರಿಸಿದರೆ ಈ ವಸ್ತು ಪ್ಲಾಸ್ಟಿಕ್ಗೆ ಉತ್ತಮ ಪರ್ಯಾಯವಾಗಿ ಬಳಕೆಯಾಗಬಹುದು.