ETV Bharat / science-and-technology

ಟ್ವಿಟರ್‌ ಬಳಕೆದಾರರಿಗೆ ಬೊಂಬಾಟ್​ ಆಫರ್.. ಏನಿದು ಗುಡ್​ ನ್ಯೂಸ್​? - ಮೈಕ್ರೋ ಬ್ಲಾಗಿಂಗ್

ಟ್ವಿಟ್ಟರ್​ನಲ್ಲಿ ಬ್ಲೂಟಿಕ್​ ಹೊಂದಿರುವ ಬಳಕೆದಾರರು ಇನ್ನು ಮುಂದೆ ಹಣ ಗಳಿಸಬಹುದೆಂದು ಟ್ವಿಟರ್ ಸಿಇಒ ಎಲಾನ್ ಮಸ್ಕ್ ಘೋಷಿಸಿದ್ದಾರೆ. ಹೇಗೆಂದು ನೀವೇ ನೋಡಿ.

twitter
ಟ್ವಿಟ್ಟರ್​
author img

By

Published : Feb 21, 2023, 12:17 PM IST

ಸ್ಯಾನ್ ಫ್ರಾನ್ಸಿಸ್ಕೋ: ಟ್ವಿಟರ್ ಸಿಇಒ ಎಲಾನ್ ಮಸ್ಕ್ ತಮ್ಮ ಬಳಕೆದಾರರಿಗೆ ಮೇಲಿಂದ ಮೇಲೆ ಗುಡ್​ ನ್ಯೂಸ್​ ನೀಡುತ್ತಿದ್ದಾರೆ. ಮೊದಲು ಟ್ವಿಟ್ಟರ್​ ಬ್ಲೂಟಿಕ್​ ಗೆ ಹಣ ಪಾವತಿಸಿ ಚಂದದಾರಿಕೆ ಪಡೆಯಲು ಅವಕಾಶ ನೀಡಿತ್ತು. ಇದೀಗ ಅದೇ ಬ್ಲೂಟಿಕ್​ ಹೊಂದಿರುವವರು ಹಣಗಳಿಸಬಹುದಾಗಿದೆ. ಹೌದು ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಚಂದಾದಾರಿಕೆಗಳನ್ನು ಸ್ಪಿನ್ ಮಾಡಲು ಅವಕಾಶ ನೀಡಿದ್ದು, ಇದರಿಂದ ಬ್ಲೂಟಿಕ್​ ಹೊಂದಿರುವ ಬಳಕೆದಾರರು ಉದಾಹರಣೆಗೆ ಬೇರೆಯವರ ಜಾಹೀರಾತನ್ನು ತಮ್ಮ ಖಾತೆಯಲ್ಲಿ ಪೋಸ್ಟ್​ ಮಾಡಿಕೊಳ್ಳುವುದರ ಜೊತೆಗೆ ಜಾಹೀರಾತು ನೀಡಿದವರಿಗೆ ಇಂತಿಷ್ಟು ಚಾರ್ಜ್​ ಮಾಡಬಹುದು. ಅಂದರೆ ಬ್ಲೂಟಿಕ್​ ಹೊಂದಿರುವವರು ತಮ್ಮ ಖಾತೆಯಲ್ಲಿ ಬೇರೆಯವರು ಯಾವುದೇ ಜಾಹಿರಾತು, ವ್ಯಾಪಾರದ ಕುರಿತಾಗಿಯೂ ಪೋಸ್ಟ್ ಹಾಕಿಕೊಳ್ಳಲು ನೀಡಿದರೆ ಅವರಿಂದ ನಿಮಗೆ ಹಣ ಪಾವತಿಸಿಕೊಳ್ಳಲು ಟ್ವಿಟರ್ ಸಿಇಒ ಎಲಾನ್ ಮಸ್ಕ್ ಹೊಸದಾದ ಅವಕಾಶ ನೀಡಿದ್ದಾರೆ.

ಮೊದಲು ಟ್ವಿಟ್ಟರ್​ನ ಎಲ್ಲಾ ಬಳಕೆದಾರರಿಗೆ 300 ಕ್ಕಿಂತ ಕಡಿಮೆ ಅಕ್ಷರಗಳಿಗೆ ಮಾತ್ರ ಬರೆದು ಹಾಕಿಕೊಳ್ಳುವ ಮಿತಿ ಇತ್ತು. ಆದರೆ ಇದೀಗ ಚಂದಾದಾರಿಕೆ ಇರುವವರು ತಮ್ಮ ಖಾತೆಯಲ್ಲಿ 4000 ಅಕ್ಷರಗಳಷ್ಟು ಬರೆದುಕೊಳ್ಳಲು ಅವಕಾಶ ನೀಡಿದೆ. ಇದರ ಮೂಲಕ ಬ್ಲೂಟಿಕ್​ ಹೊಂದಿರುವ ಬಳಕೆದಾರರು ಸುದೀರ್ಘ ಟ್ವೀಟ್ ಅನ್ನು ಪೋಸ್ಟ್ ಮಾಡಬಹುದಾಗಿದೆ. ಈ ಕುರಿತು ಮಸ್ಕ್​ ದೀರ್ಘ ಟ್ವೀಟ್‌ನ ಉತ್ತಮ ಬಳಕೆ ಏನೆಂದರೆ ಇನ್ನು ಮುಂದೆ ನೀವು ಮೂಲ ಫಾರ್ಮ್ಯಾಟಿಂಗ್‌ನೊಂದಿಗೆ ಹೆಚ್ಚು ದೀರ್ಘವಾದ ಯಾವುದೇ ವಿಷಯವನ್ನು Twitter ನಲ್ಲಿ ಪೋಸ್ಟ್ ಮಾಡಬಹುದು, ಜೊತೆಗೆ ನಾವು ಚಂದಾದಾರಿಕೆಯನ್ನು ಕೂಡ ಈ ದಿನಗಳಲ್ಲಿ ಹೆಚ್ಚಿಸುತ್ತಿದ್ದೇವೆ ಎಂದಿದ್ದಾರೆ.

ಈ ಹೊಸ ವೈಶಿಷ್ಟ್ಯದ ಕುರಿತು ಅನೇಕ ಬಳಕೆದಾರರು ತಮ್ಮ ತಮ್ಮ ಪ್ರಶ್ನೆ ಹಾಗೂ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ "ಟ್ವಿಟ್ ಓದಲು ಚಾರ್ಜ್ ಮಾಡಲಾಗುತ್ತಿದೆಯೇ? ಅಥವಾ ಪೇವಾಲ್?" ಎಂದು ಕೇಳಿದರೆ, ಮತ್ತೊಬ್ಬರು ಈಗ ತಂದಿರುವ ಹೊಸ ವೈಶಿಷ್ಟ್ಯಗಳು ಉತ್ತಮ ಕಲ್ಪನೆಯಾಗಿದೆ. ಅಲ್ಲದೆ ಲೇಖಕರು ತಮ್ಮ ಇಡೀ ಪುಸ್ತಕವನ್ನು Twitter ನಲ್ಲಿ ಬಹುಶಃ ಒಂದು ಅಧ್ಯಾಯದಲ್ಲಿ ಪ್ರಕಟಿಸಬಹುದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಮುಂಬರುವ ವೈಶಿಷ್ಟ್ಯವು ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ಅನುಯಾಯಿಗಳಿಂದ ಹಣವನ್ನು ಗಳಿಸಲು ಬಳಕೆದಾರರಿಗೆ ಉತ್ತಮ ಅವಕಾಶವಾಗಿದೆ.

ಇದರ ಮಧ್ಯೆ ಕಳೆದ ವಾರ, ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಮಾರ್ಚ್ 20 ರ ನಂತರ ಟ್ವಿಟರ್ ಬ್ಲೂ ಅಲ್ಲದ ಬಳಕೆದಾರರಿಗೆ ಪಠ್ಯ ಸಂದೇಶಗಳನ್ನು ಎರಡು ಅಂಶ ದೃಢೀಕರಣ (2FA) ವಿಧಾನವಾಗಿ ಬಳಸಲು ಅನುಮತಿಸುವುದಿಲ್ಲ ಎಂದು ಘೋಷಿಸಿತು. ಈ ತಿಂಗಳ ಆರಂಭದಲ್ಲಿ, ಟ್ವಿಟರ್ ವೆಬ್‌ನಲ್ಲಿ ಪರಿಶೀಲನೆಯೊಂದಿಗೆ ತನ್ನ ಬ್ಲೂಟಿಕ್​ ಸೇವೆಗೆ ತಿಂಗಳಿಗೆ ರೂ 650 ಮತ್ತು ಭಾರತದಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್ ಸಾಧನಗಳಲ್ಲಿ ರೂ 900 ಶುಲ್ಕ ವಿಧಿಸುವುದಾಗಿ ದೃಢಪಡಿಸಿತ್ತು. ಇದಲ್ಲದೆ, US ನಲ್ಲಿನ ಚಂದಾದಾರರು 4,000 ಅಕ್ಷರಗಳವರೆಗೆ ದೀರ್ಘ ಟ್ವೀಟ್‌ಗಳನ್ನು ರಚಿಸಬಹುದು ಎಂದು ಘೋಷಿಸಿದೆ.

ಇದನ್ನೂ ಓದಿ: ಚಾಟ್​ಜಿಪಿಟಿಗೆ ಪ್ರತಿಸ್ಪರ್ಧಿಯಾಗಿ ಚಾಟ್​ಬೂಟ್​ ನಿರ್ಮಾಣಕ್ಕೆ ಚೀನಾ ಮುಂದಾಗುವುದಿಲ್ಲ; ಕಾರಣ ಏನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.