ETV Bharat / science-and-technology

ಪೆಟ್ರೋಲ್, ಡೀಸೆಲ್ ಯುಗಾಂತ್ಯದ ಆರಂಭದಲ್ಲಿ ಜಗತ್ತು: ಅಧ್ಯಯನ ವರದಿ - ಮರುಬಳಕೆ ಇಂಧನ ಮೂಲ

ಜಗತ್ತು ಪಳೆಯುಳಿಕೆ ಇಂಧನ ಬಳಕೆಯ ಯುಗಾಂತ್ಯಕ್ಕೆ ಹತ್ತಿರವಾಗುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.

World has reached 'beginning of the end of fossil age': Study

author img

By

Published : Apr 13, 2023, 2:49 PM IST

ಲಂಡನ್ : ಪವನ ಶಕ್ತಿ ಮತ್ತು ಸೋಲಾರ್​ ಇಂಧನಗಳ ಉತ್ಪಾದನೆಯಲ್ಲಿ ಹೆಚ್ಚಳವಾಗಿರುವ ಕಾರಣದಿಂದ ಮರುಬಳಕೆ ಇಂಧನ ಮೂಲಗಳಿಂದ ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯ ಪ್ರಮಾಣವೂ ಹೆಚ್ಚಾಗುತ್ತಿದೆ. ವಿದ್ಯುತ್ ಉತ್ಪಾದಿಸಲು ಕಲ್ಲಿದ್ದಲು, ತೈಲ ಮತ್ತು ಅನಿಲದ ಬಳಕೆಯು 2023 ರಲ್ಲಿ ಕುಸಿಯುವ ನಿರೀಕ್ಷೆಯಿದೆ ಎಂದು ಎನರ್ಜಿ ಥಿಂಕ್ ಟ್ಯಾಂಕ್ ಎಂಬರ್ ಪ್ರಕಟಿಸಿದ ವರದಿಯಲ್ಲಿ ತಿಳಿಸಲಾಗಿದೆ. ಜಾಗತಿಕ ಆರ್ಥಿಕ ಹಿಂಜರಿತ ಅಥವಾ ಕೋವಿಡ್ ಸಾಂಕ್ರಾಮಿಕ ಪೀಡಿತ ವರ್ಷಗಳ ಹೊರತಾಗಿ ವಿದ್ಯುತ್ ಉತ್ಪಾದಿಸಲು ಪಳೆಯುಳಿಕೆ ಇಂಧನಗಳ (ಪೆಟ್ರೋಲ್ ಹಾಗೂ ಡೀಸೆಲ್ ರೀತಿಯ ಇಂಧನ) ಬಳಕೆಯಲ್ಲಿ ಕುಸಿತವನ್ನು ಕಾಣುವ ಮೊದಲ ವರ್ಷವಾಗಿ ಇದು ಗುರುತಿಸಲ್ಪಡುತ್ತದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಪಳೆಯುಳಿಕೆ ಇಂಧನ ಬಳಸಿ ವಿದ್ಯುಚ್ಛಕ್ತಿ ಉತ್ಪಾದನೆಯಿಂದ ಭೂಮಿಯ ತಾಪಮಾನ ಹೆಚ್ಚಳ ಆಗಲೇ ಉತ್ತುಂಗಕ್ಕೇರಿದೆ ಎಂದು ಹೇಳಲಾಗಿದೆ.

ಕ್ಲೀನ್ ಪವರ್ ಯುಗದತ್ತ..: ಈ ಜಗತ್ತು ಪಳೆಯುಳಿಕೆ ಇಂಧನಗಳ ಯುಗದ ಅಂತ್ಯದ ಆರಂಭವನ್ನು ತಲುಪಿದೆ ಎಂದು ಸಂಶೋಧನೆಯ ಪ್ರಮುಖ ಲೇಖಕ ಮಾಲ್ಗೊರ್ಜಾಟಾ ವಿಯಾಟ್ರೋಸ್-ಮೊಟಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಾವು ಕ್ಲೀನ್ ಪವರ್ ಯುಗವನ್ನು ಪ್ರವೇಶಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಎಂಬರ್ ಸಂಸ್ಥೆಯು ತನ್ನ ವಾರ್ಷಿಕ ಗ್ಲೋಬಲ್ ಇಲೆಕ್ಟ್ರಿಸಿಟಿ ರಿವ್ಯೂನ ನಾಲ್ಕನೇ ಆವೃತ್ತಿಗಾಗಿ ವಿದ್ಯುಚ್ಛಕ್ತಿಯ ಜಾಗತಿಕ ಬೇಡಿಕೆಯ 93 ಪ್ರತಿಶತವನ್ನು ಪ್ರತಿನಿಧಿಸುವ 78 ದೇಶಗಳ ಅಂಕಿ ಅಂಶಗಳನ್ನು ವಿಶ್ಲೇಷಿಸಿದೆ.

ಜಾಗತಿಕ ವಿದ್ಯುಚ್ಛಕ್ತಿಯ ಸುಮಾರು 40 ಪ್ರತಿಶತವು ಈಗ ನವೀಕರಿಸಬಹುದಾದ ಮತ್ತು ಪರಮಾಣು ಶಕ್ತಿಯಿಂದ ಉತ್ಪಾದಿಸಲ್ಪಡುತ್ತಿದೆ. ಇದು ಹೊಸ ದಾಖಲೆಯ ಮಟ್ಟವಾಗಿದೆ ಎಂದು ವರದಿ ತಿಳಿಸಿದೆ. ಗಾಳಿ ಮತ್ತು ಸೌರ ಶಕ್ತಿ ಬಳಸಿ ಉತ್ಪಾದಿಸಲಾದ ವಿದ್ಯುಚ್ಛಕ್ತಿಯ ಪ್ರಮಾಣವು 2022 ರಲ್ಲಿ ಜಾಗತಿಕ ಶಕ್ತಿ ಉತ್ಪಾದನೆಯ ಶೇಕಡಾ 12 ರಷ್ಟಿದೆ. ಇದು ಹಿಂದಿನ ವರ್ಷ ಶೇ 10 ಆಗಿತ್ತು. ಸೌರ ಶಕ್ತಿಯು 2022 ರಲ್ಲಿ ಸತತವಾಗಿ 18 ನೇ ವರ್ಷಕ್ಕೆ ವೇಗವಾಗಿ ಬೆಳೆಯುತ್ತಿರುವ ವಿದ್ಯುಚ್ಛಕ್ತಿಯ ಮೂಲವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇಕಡಾ 24 ರಷ್ಟು ಏರಿಕೆಯಾಗಿದೆ. ಗಾಳಿಯಿಂದ ವಿದ್ಯುತ್ ಉತ್ಪಾದನೆ ಪ್ರಮಾಣ ಶೇ 17ರಷ್ಟು ಹೆಚ್ಚಿದೆ.

2023 ರಲ್ಲಿ ಹಸಿರು ಇಂಧನವು ವಿದ್ಯುತ್ ಬೇಡಿಕೆಯ ಒಟ್ಟು ಬೆಳವಣಿಗೆಯನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ಎಂಬರ್ ಮುನ್ಸೂಚನೆ ನೀಡಿದೆ. ಪಳೆಯುಳಿಕೆ ಇಂಧನಗಳು ಇನ್ನೂ ಪ್ರಾಬಲ್ಯ ಹೊಂದಿವೆ. ಆದಾಗ್ಯೂ, ಕಲ್ಲಿದ್ದಲು ಶಕ್ತಿಯು ಜಗತ್ತಿನಾದ್ಯಂತ ವಿದ್ಯುಚ್ಛಕ್ತಿಯ ಏಕೈಕ ಅತಿದೊಡ್ಡ ಮೂಲವಾಗಿ ಉಳಿದಿದೆ. ಇದು 2022 ರಲ್ಲಿ ಜಾಗತಿಕ ವಿದ್ಯುತ್ ಉತ್ಪಾದನೆಯ 36 ಪ್ರತಿಶತವನ್ನು ಹೊಂದಿದೆ.

ಪಳೆಯುಳಿಕೆ ಇಂಧನ ಎಂದರೇನು?: ಕಲ್ಲಿದ್ದಲು, ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಇವುಗಳನ್ನು ಪಳೆಯುಳಿಕೆ ಇಂಧನಗಳೆಂದು ಪರಿಗಣಿಸಲಾಗುತ್ತದೆ. ಲಕ್ಷಾಂತರ ವರ್ಷಗಳ ಹಿಂದೆ ವಾಸಿಸುತ್ತಿದ್ದ ಸಸ್ಯಗಳು ಮತ್ತು ಪ್ರಾಣಿಗಳ ಪಳೆಯುಳಿಕೆ, ಅವಶೇಷಗಳಿಂದ ಈ ಇಂಧನಗಳು ರೂಪುಗೊಂಡಿವೆ. ಅವುಗಳ ಮೂಲದಿಂದಾಗಿ, ಪಳೆಯುಳಿಕೆ ಇಂಧನಗಳು ಹೆಚ್ಚಿನ ಇಂಗಾಲದ ಅಂಶವನ್ನು ಹೊಂದಿರುತ್ತವೆ.

ಇದನ್ನೂ ಓದಿ : 4 ಬಿಲಿಯನ್​ಗೆ ತಲುಪಿದ ಇ-ಕಾಮರ್ಸ್​ ಶಿಪ್​ಮೆಂಟ್ಸ್​: 2028ಕ್ಕೆ 10 ಬಿಲಿಯನ್​ಗೆ ತಲುಪುವ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.