ETV Bharat / science-and-technology

ನೆಕ್ಸಾನ್​ EV ರಿಲೀಸ್ ಮಾಡಿದ ಟಾಟಾ.. ಒಂದೇ ಚಾರ್ಜ್​​​ನಲ್ಲಿ 437 ಕಿ.ಮೀ ಕ್ರಮಿಸುವ ಸಾಮರ್ಥ್ಯ - ನೆಕ್ಸಾನ್​ EV ಮ್ಯಾಕ್ಸ್​​ ಕಾರು

ಸ್ವದೇಶಿ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್​​ ಇಂದು ಗ್ರಾಹಕರಿಗೋಸ್ಕರ ಮತ್ತೊಂದು ಕಾರು ಪರಿಚಯಿಸಿದ್ದು, ಮಾರುಕಟ್ಟೆಗೆ ರಿಲೀಸ್ ಮಾಡಿದೆ.

Nexon EV max
Nexon EV max
author img

By

Published : May 11, 2022, 5:32 PM IST

ನವದೆಹಲಿ: ಭಾರತದ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್​​ ಇದೀಗ ನೆಕ್ಸಾನ್​ EV ಮ್ಯಾಕ್ಸ್​​ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಲವಾರು ವೈಶಿಷ್ಟ್ಯಗಳೊಂದಿಗೆ ತಯಾರುಗೊಂಡಿರುವ ಈ ಕಾರು ಒಂದೇ ಚಾರ್ಜ್​​​ನಲ್ಲಿ ಬರೋಬ್ಬರಿ 437 ಕಿಲೋ ಮೀಟರ್ ದೂರದವರೆಗೆ​ ಕ್ರಮಿಸುವ ಸಾಮರ್ಥ್ಯ ಹೊಂದಿದೆ.

ಟಾಟಾ ನೆಕ್ಸಾನ್​​ EV ಮ್ಯಾಕ್ಸ್​​​ ಆರಂಭಿಕ ಬೆಲೆ 17.74 ಲಕ್ಷ ರೂ.(ದೆಹಲಿ ಶೋ ರೂಂ) ಆಗಿದೆ. ಈ ಕಾರು ದೊಡ್ಡ 40kWh ಬ್ಯಾಟರಿ ಪ್ಯಾಕ್​ ಹೊಂದಿದ್ದು, 437 ಕಿಲೋ ಮೀಟರ್​​ ಚಲಿಸುವ ಸಾಮರ್ಥ್ಯ ಹೊಂದಿದೆ. ಕಾರಿನಲ್ಲಿ ನವೀಕರಿಸಿದ ಪವರ್‌ಟ್ರೇನ್ ಇದ್ದು, ಹಲವಾರು ಹೊಸ ವೈಶಿಷ್ಟ್ಯಗಳೊಂದಿಗೆ ಅಭಿವೃದ್ಧಿಗೊಂಡಿದೆ. ಇದರಲ್ಲಿ ರೋಟರಿ ಗೇರ್​ ಬದಲಿಗೆ PRND ಹೊಂದಿದ್ದು, ಎಲೆಕ್ಟ್ರಾನಿಕ್​ ಪಾರ್ಕಿಂಗ್​ ಬ್ರೇಕ್​​ ಹಾಗೂ ಆಟೋ ಟಾಗಲ್​ ಇಡಲಾಗಿದೆ.

ಇದನ್ನೂ ಓದಿ: ಗೇರುಹಣ್ಣಿನಲ್ಲಿ ವೈನ್ ತಯಾರಿಸಿ ಪೇಟೆಂಟ್‌ ಪಡೆದ ಮಂಗಳೂರಿನ ಎನ್​ಐಟಿಕೆ ಪ್ರೊಫೆಸರ್!

ಸುಮಾರು 6.5 ಗಂಟೆಗಳ ಕಾಲ ಈ ಕಾರು ಚಾರ್ಜ್​ ಮಾಡಬೇಕಾಗಿದ್ದು, ಶೇ. 80ರಷ್ಟು ಚಾರ್ಜಿಂಗ್​​ ಕೇವಲ 56 ನಿಮಿಷಗಳಲ್ಲಿ ಆಗುತ್ತದೆ. ಕಾರಿನ ಮೇಲೆ 8 ವರ್ಷಗಳ ವಾರೆಂಟಿ ಇದ್ದು, ಬ್ಯಾಟರಿ ಮೇಲೆ ಸುಮಾರು 3 ವರ್ಷಗಳ ವಾರೆಂಟ್ ನೀಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇಂದಿನಿಂದಲೇ ಅಧಿಕೃತ ಬುಕ್ಕಿಂಗ್​ ಆರಂಭಗೊಂಡಿದ್ದು, ಇದರ ಬೆಲೆ 17ರಿಂದ 20 ಲಕ್ಷ ರೂ. ಅಂದಾಜು ಮಾಡಲಾಗಿದೆ. ಹೊರಗಡೆಯಿಂದ ನೋಡಲು ಎಸ್​​ಯುವಿ ಕಾರಿನಂತೆ ಇದ್ದು, ಕೆಲವೊಂದು ಮಹತ್ವದ ಬದಲಾವಣೆ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.