ನವದೆಹಲಿ: ಆಗಸ ಸದಾ ಕೌತುಕದ ಕಣಜ. ಅಲ್ಲಿ ನಡೆಯುವ ಅನೇಕ ಬೆಳವಣಿಗೆಗಳು ನಮಗೆ ಅಚ್ಚರಿ ಮೂಡಿಸುತ್ತವೆ. ಅದೇ ರೀತಿಯ ಘಟನೆಗಳಿಗೆ ಆಗಸ್ಟ್ ತಿಂಗಳು ಸಾಕ್ಷಿಯಾಗಲಿದೆ. ಆಗಸ್ಟ್ನಲ್ಲಿ ಬಾನಂಗಳದಲ್ಲಿ ಎರಡು ಬ್ಲೂ ಮೂನ್ ಕಾಣಿಸಿಕೊಳ್ಳುತ್ತಿದೆ.
ಸಾಮಾನ್ಯ ಹುಣ್ಣಿಮೆಯಲ್ಲಿ ಹೊಳೆಯುವ ಚಂದ್ರ ಈ ಬಾರಿ ಸೂಪರ್ಮೂನ್ನಲ್ಲಿ ಮತ್ತಷ್ಟು ಪ್ರಖರವಾಗಿ ಕಾಣಿಸಿಕೊಳ್ಳಲಿದ್ದಾನೆ. ವರ್ಷದ ಮೊದಲ ಸೂಪರ್‌ಮೂನ್ ಜುಲೈನಲ್ಲಿ ಗೋಚರಿಸಿತ್ತು. ಆದರೀಗ ಒಂದೇ ತಿಂಗಳಲ್ಲಿ ಎರಡು ಸೂಪರ್‌ಮೂನ್ ಅನ್ನು ನೀವು ಆನಂದಿಸಬಹುದು.
ಅಪರೂಪದ ವಿದ್ಯಮಾನ : ವಿಜ್ಞಾನಿಗಳು ಹೇಳುವಂತೆ, 2018ರಲ್ಲಿ ಒಂದೇ ತಿಂಗಳಲ್ಲಿ ಈ ರೀತಿಯ ಎರಡು ಸಂಪೂರ್ಣ ಸೂಪರ್ಮೂನ್ಗಳು ಕಾಣಿಸಿಕೊಂಡಿತ್ತು. ಇದೀಗ ಅಂಥಹುದೇ ವಿದ್ಯಮಾನ ಮರುಕಳಿಸುತ್ತಿದೆ. ಈ ಕೌತುಕವನ್ನು ಮತ್ತೆ ನೋಡಬೇಕೆಂದರೆ 2027ರ ವರೆಗೆ ಕಾಯಲೇಬೇಕು.
ನಾಸಾ ಪ್ರಕಾರ, ಮೊದಲ ಸಂಪೂರ್ಣ ಸೂಪರ್‌ಮೂನ್ ಆಗಸ್ಟ್ 1ರಂದು ಕಾಣಲಿದೆ. ಭಾರತೀಯ ಕಾಲಮಾನದ ಪ್ರಕಾರ ಆಗಸ್ಟ್ 2ರಂದು ಮಧ್ಯರಾತ್ರಿ 12.2ಕ್ಕೆ ಇದು ಆರಂಭ. ಪೂರ್ಣ ಚಂದ್ರನನ್ನು ಮೂರುದಿನ ಅಂದರೆ ಗುರುವಾರ ಬೆಳಗಿನವರೆಗೂ ನೋಡಬಹುದು.
ಸೂಪರ್ ಮೂನ್ ಎಂದರೇನು?: ಚಂದ್ರನ ಕಕ್ಷೆ ಭೂಮಿಯ ಹತ್ತಿರಕ್ಕೆ ಬರುತ್ತದೆ. ಈ ವೇಳೆ ಚಂದ್ರನ ಸರಾಸರಿ ಗಾತ್ರದ ಶೇ 8ರಷ್ಟು ಮತ್ತು ಚಂದ್ರನ ಹೊಳಪಿನ ಶೇ 16ರಷ್ಟು ಹೆಚ್ಚಿರುತ್ತದೆ. ಚಂದ್ರನ ಕಕ್ಷೆ ಸರಿಯಾದ ವೃತ್ತಕಾರದಲ್ಲಿಲ್ಲ. ಕೆಲವು ವೇಳೆ ಇದು ತನ್ನ ಕಕ್ಷೆಗಿಂತ ಭೂಮಿಗೆ ಹತ್ತಿರವಿರುತ್ತದೆ. ಹಳೆ ರೈತ ಪಂಚಾಂಗದ ಪ್ರಕಾರ ಪೂರ್ಣ ಚಂದ್ರ ಆಗಸ್ಟ್ 30ರಂದು ರಾತ್ರಿ 9:36ಕ್ಕೆ ಉಚ್ಛ್ರಾಯ ಸ್ಥಿತಿಯಲ್ಲಿ ಇರುತ್ತದೆ.
ಬ್ಲೂ ಮೂನ್ ಎಂದರೇನು?: ನಾಸಾ ವರದಿಯಂತೆ, ಬ್ಲೂ ಮೂನ್ನಲ್ಲಿ ಎರಡು ವಿಧ. ಒಂದು ಮಾಸಿಕ, ಮತ್ತೊಂದು ಋತುಮಾನ ಆಧಾರಿತ. ಮಾಸಿಕ ಬ್ಲೂ ಮೂನ್ ಕ್ಯಾಲೆಂಡರ್ ತಿಂಗಳಲ್ಲಿನ ಎರಡು ಪೂರ್ಣ ಚಂದ್ರನ ಎರಡನೇ ಪೂರ್ಣ ಚಂದ್ರವಾಗಿದೆ. ಋತುಮಾನದ ಚಂದ್ರ ಎಂದರೆ ಖಗೋಳ ಋತುವಿನ ಮೂರನೇ ಹುಣ್ಣಿಮೆ.
ಬ್ಲೂ ಮೂನ್ ಎಂದು ಈ ಪೂರ್ಣಿಮೆಗೆ ಹೆಸರಿದ್ದರೂ, ಇದು ನೀಲಿ ಬಣ್ಣದಲ್ಲಿ ಇರುವುದಿಲ್ಲ. ಸಾಮಾನ್ಯ ಹುಣ್ಣಿಮೆ ಚಂದ್ರನ ಬಣ್ಣವನ್ನೇ ಹೊಂದಿರುತ್ತದೆ. ಸಾಮಾನ್ಯವಾಗಿ ಎರಡರಿಂದ ಮೂರು ವರ್ಷಗಳಿಗೊಮ್ಮೆ ಈ ರೀತಿಯ ಬ್ಲೂಮೂನ್ಗಳು ಕಾಣಸಿಗುತ್ತವೆ. ಆಗಸ್ಟ್ 1ರಂದು ಮೊದಲ ಬ್ಲೂಮೂನ್ ಕಾಣಿಸಿಕೊಂಡರೆ, ಆಗಸ್ಟ್ 30ರಂದು ಕಡೆಯ ಈ ಮಾಸದ ಎರಡನೇ ಸೂಪರ್‌ಮೂನ್ ಗೋಚರಿಸುತ್ತದೆ.
ಇದನ್ನೂ ಓದಿ: Dead Satellite: ಭೂಮಿಗೆ ಮರಳಿದ ನಿಷ್ಕ್ರಿಯ ಉಪಗ್ರಹ 'ಏಯೋಲಸ್'; ವಿಜ್ಞಾನಿಗಳ ಮಹತ್ತರ ಸಾಧನೆ