ETV Bharat / science-and-technology

ಗ್ರೀನ್ ಎನರ್ಜಿಗೆ ಬದಲಾಗಲು ಜಗತ್ತಿನಲ್ಲಿ ಸಾಕಷ್ಟು ಅಪರೂಪದ ಖನಿಜಗಳು ಲಭ್ಯವಿವೆ: ಹೊಸ ಅಧ್ಯಯನ

ಪಳೆಯುಳಿಕೆ ಇಂಧನಗಳಿಂದ ನವೀಕರಿಸಬಹುದಾದ ಇಂಧನಕ್ಕೆ ಬದಲಾವಣೆ - ವಿದ್ಯುತ್ ಉತ್ಪಾದಿಸಲು, ಜಾಗತಿಕ ತಾಪಮಾನ ಕಡಿಮೆ ಮಾಡಲು, ಜಗತ್ತಿನಲ್ಲಿ ಸಾಕಷ್ಟು ಅಪರೂಪದ ಖನಿಜಗಳು ಲಭ್ಯವಿವೆ.

Study: Enough rare earth minerals to fuel green energy shift
ಗ್ರೀನ್ ಎನರ್ಜಿಗೆ ಬದಲಾಗಲು ಜಗತ್ತಿನಲ್ಲಿ ಸಾಕಷ್ಟು ಅಪರೂಪದ ಖನಿಜಗಳು ಲಭ್ಯವಿವೆ: ಹೊಸ ಅಧ್ಯಯನ
author img

By

Published : Jan 28, 2023, 5:11 PM IST

ಹೈದರಾಬಾದ್: ಪಳೆಯುಳಿಕೆ ಇಂಧನಗಳಿಂದ ನವೀಕರಿಸಬಹುದಾದ ಇಂಧನಕ್ಕೆ ಬದಲಾಗಲು ಮತ್ತು ವಿದ್ಯುತ್ ಉತ್ಪಾದಿಸಲು, ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು, ಜಗತ್ತಿನಲ್ಲಿ ಸಾಕಷ್ಟು ಅಪರೂಪದ ಭೂಮಿಯ ಖನಿಜಗಳು ಮತ್ತು ಇತರ ಪ್ರಮುಖ ಕಚ್ಚಾ ವಸ್ತುಗಳು ಇವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಸೌರ ಫಲಕಗಳು, ಪವನ ಟರ್ಬೈನ್​ಗಳು, ಜಲವಿದ್ಯುತ್ ಮತ್ತು ಪರಮಾಣು ವಿದ್ಯುತ್ ಸ್ಥಾವರಗಳಿಂದ ಹೆಚ್ಚಿನ ವಿದ್ಯುತ್ ಪಡೆಯುವ ಪ್ರಯತ್ನದೊಂದಿಗೆ, ಡಿಕಾರ್ಬನೈಸೇಶನ್​ಗೆ ಬದಲಾಗಲು ಇದೊಂದು ಮಾರ್ಗವಾಗಲಿದೆ.

ಅಪರೂಪದ ಭೂಮಿಯ ಖನಿಜಗಳನ್ನು , ಭೂಮಿಯ ಅಂಶಗಳು ಎಂದು ಕರೆಯಲ್ಪಡುತ್ತವೆ. ಆದರೆ, ವಾಸ್ತವವಾಗಿ ಅದು ಅಪರೂಪವಲ್ಲ. ಅಮೆರಿಕದ​ ಭೂವೈಜ್ಞಾನಿಕ ಸಮೀಕ್ಷೆಯು ಅವುಗಳನ್ನು ತುಲನಾತ್ಮಕವಾಗಿ ಹೇರಳವಾಗಿದೆ ಎಂದು ವಿವರಿಸುತ್ತದೆ. ಗಾಳಿ ಟರ್ಬೈನ್‌ಗಳಿಗೆ ಅಗತ್ಯವಾದ ಬಲವಾದ ಆಯಸ್ಕಾಂತಗಳಿಗೆ ಅವು ಅತ್ಯಗತ್ಯ, ಅವು ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್ ಡಿಸ್‌ಪ್ಲೇಗಳು ಮತ್ತು ಎಲ್‌ಇಡಿ ಲೈಟ್ ಬಲ್ಬ್‌ಗಳಲ್ಲಿ ಸಹ ಬಳಕೆಯಾಗುತ್ತದೆ. ಈ ಹೊಸ ಅಧ್ಯಯನವು ಇಂತಹ ಮೂಲವಸ್ತುಗಳನ್ನು ಮಾತ್ರವಲ್ಲದೇ, ವಿದ್ಯುತ್ ಉತ್ಪಾದಿಸಲು ಅಗತ್ಯವಿರುವ 17 ವಿಭಿನ್ನ ಕಚ್ಚಾ ವಸ್ತುಗಳನ್ನು ಕಂಡುಹಿಡಿಯು ಪ್ರಯತ್ನವಾಗಿದೆ. ಇದರಲ್ಲಿ ಉಕ್ಕು, ಸಿಮೆಂಟ್ ಮತ್ತು ಗಾಜಿನಂತಹ ಕೆಲವು ಸಾಮಾನ್ಯ ಸಂಪನ್ಮೂಲಗಳು ಸೇರಿವೆ.

ಪಳೆಯುಳಿಕೆ ಇಂಧನದಿಂದ ಶಾಖ - ಟ್ರ್ಯಾಪಿಂಗ್ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಗಣಿಗಾರಿಕೆಯಿಂದ ಉಂಟಾಗುವ ಮಾಲಿನ್ಯವನ್ನು ಅವರು ಲೆಕ್ಕಹಾಕಿದರು. ಪ್ರಸ್ತುತ ಹೆಚ್ಚಿನ ಗಣಿಗಾರಿಕೆಯ ಅಗತ್ಯವಿದೆ. ಇದರ ಜೂತೆಗೆ ಸಾಕಷ್ಟು ಖನಿಜಗಳಿವೆ ಅವುಗಳನ್ನು ಹೊರ ತೆಗೆಯುವುದರಿಂದ ತಾಪಮಾನ ಹದಗೆಡುವುದಿಲ್ಲ ಎಂದು ವೈಜ್ಞಾನಿಕ ಜರ್ನಲ್ ಜೂಲ್‌ನಲ್ಲಿನ ಅಧ್ಯಯನವು ತಿಳಿಸಿದೆ.

ಡಿಕಾರ್ಬೊನೈಸೇಶನ್‌ಗಾಗಿ ಕಚ್ಚಾ ವಸ್ತುಗಳು ಜಾಗತಿಕವಾಗಿ ಅಗತ್ಯವಿದೆ: ಡಿಕಾರ್ಬೊನೈಸೇಶನ್ ದೊಡ್ಡದಾಗಿದೆ ಮತ್ತು ಗೊಂದಲಮಯವಾಗಿರುತ್ತದೆ. ಆದರೆ, ನಾವು ಅದನ್ನು ಸಾಧಿಸಬಹುದು ಎಂದು ಟೆಕ್ ಕಂಪನಿ ಸ್ಟ್ರೈಪ್ ಮತ್ತು ಬರ್ಕ್ಲಿ ಅರ್ಥ್‌ನ ಹವಾಮಾನ ವಿಜ್ಞಾನಿ ಅಧ್ಯಯನದ ಸಹ - ಲೇಖಕ ಝೆಕ್ ಹಾಸ್‌ಫಾದರ್ ಹೇಳಿದರು. ಡಿಕಾರ್ಬೊನೈಸೇಶನ್‌ಗಾಗಿ ಕಚ್ಚಾ ವಸ್ತುಗಳು ಜಾಗತಿಕವಾಗಿ ಅಗತ್ಯವಿದೆ ಇವು ನೇರವಾಗಿ ಬ್ಯಾಟರಿಗಳು ಮತ್ತು ಸಾರಿಗೆಯೊಂದಿಗೆ ಸಂಬಂಧಿಸಿದೆ. ವಿಶೇಷವಾಗಿ ವಾಹನಗಳ ಬ್ಯಾಟರಿಗಳಿಗಾಗಿ ಲಿಥಿಯಂ ಅನ್ನು ಅವಲಂಬಿಸಿರುವ ಎಲೆಕ್ಟ್ರಿಕ್ ಕಾರುಗಳಿಗೆ ಇದು ಅಗತ್ಯವಾಗಿದೆ.

ಬ್ಯಾಟರಿಗಳಿಗೆ ಖನಿಜ ಬೇಡಿಕೆಗಳನ್ನು ನೋಡುವುದು, ವಿದ್ಯುತ್ ಶಕ್ತಿಗಿಂತ ಹೆಚ್ಚು ಜಟಿಲವಾಗಿದೆ ಎಂದು ಹಾಸ್‌ಫಾದರ್ ಹೇಳಿದರು. ವಿದ್ಯುತ್ ವಲಯಕ್ಕೆ ಮೂರನೇ ಒಂದರ ಅರ್ಧದಷ್ಟು ಸಂಪನ್ಮೂಲ ಸಮಸ್ಯೆಯಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು. ಪ್ರಪಂಚವು ಎಷ್ಟು ವೇಗವಾಗಿ ಹಸಿರು ಶಕ್ತಿಗೆ ಬದಲಾಗುತ್ತದೆ ಎಂಬುದರ ಮೇಲೆ ಮುಂದಿನ ಭವಿಷ್ಯ ಅವಲಂಬಿತವಾಗಿರುತ್ತದೆ ಎಂದೂ ಝೆಕ್ ಹಾಸ್‌ಫಾದರ್ ಹೇಳಿದ್ದಾರೆ.

ಕಡಿಮೆ ಉತ್ಪಾದನೆ: ಉದಾಹರಣೆಗೆ, ಡಿಸ್ಪ್ರೋಸಿಯಮ್​ ಗಾಳಿಯಂತ್ರಗಳಲ್ಲಿನ ಆಯಸ್ಕಾಂತಗಳಿಗೆ ಬಳಸಲಾಗುವ ಖನಿಜವಾಗಿದೆ ಮತ್ತು ಕ್ಲೀನರ್ ವಿದ್ಯುತ್​ಗಾಗಿ ಪ್ರಸ್ತುತ ಉತ್ಪಾದಿಸುವುದಕ್ಕಿಂತ ಮೂರು ಪಟ್ಟು ಹೆಚ್ಚು ಡಿಸ್ಪ್ರೋಸಿಯಂ ಬೇಕಾಗುತ್ತದೆ ಎಂದು ಜರ್ನಲ್​ ಹೇಳಿದೆ. ಆದರೆ, ಆ ಕ್ಲೀನರ್ ವಿದ್ಯುತ್​ ಅಗತ್ಯವಿರುವುದಕ್ಕಿಂತಲೂ 12 ಪಟ್ಟು ಹೆಚ್ಚು ಡಿಸ್ಪ್ರೋಸಿಯಂ ನಿಕ್ಷೇಪಗಳಿವೆ. ಮತ್ತೊಂದು ಪ್ರಮುಖ ಖನಿಜ ಟೆಲ್ಯುರಿಯಮ್, ಇದನ್ನು ಕೈಗಾರಿಕಾ ಸೌರ ಫಾರ್ಮ್‌ಗಳಲ್ಲಿ ಬಳಸಲಾಗುತ್ತದೆ. ಈ ಖನಿಜಗಳಿಗೆ ಪರ್ಯಾಯಗಳು ಲಭ್ಯವಿವೆ ಎಂದು ಹಾಸ್‌ಫಾದರ್ ಹೇಳಿದರು.

10 ಬಿಲಿಯನ್ ಮೆಟ್ರಿಕ್ ಟನ್​ ವಾರ್ಷಿಕ ಇಂಗಾಲದ ಹೊರಸೂಸುವಿಕೆ: ಗಣಿಗಾರಿಕೆಯು ವಾತಾವರಣಕ್ಕೆ ಹೆಚ್ಚಿನ ಶಾಖ-ಟ್ರ್ಯಾಪಿಂಗ್ ಇಂಗಾಲದ ಹೊರಸೂಸುವಿಕೆಯನ್ನು ಸೇರಿಸುತ್ತದೆಯೇ ಎಂಬುದು ಮತ್ತೊಂದು ಕಳವಳವಾಗಿದೆ. ಇದು ಬಹುಶಃ 10 ಬಿಲಿಯನ್ ಮೆಟ್ರಿಕ್ ಟನ್​ಗಳಷ್ಟು ಇರುತ್ತದೆ ಎಂದು ಅಂದಾಜಿಸಲಾಗಿದೆ. ಇದು ವಾರ್ಷಿಕ ಜಾಗತಿಕ ಇಂಗಾಲದ ಹೊರಸೂಸುವಿಕೆಯ ಕಾಲು ಭಾಗವಾಗಿದೆ ಎಂದು ಹೌಸ್‌ಫಾದರ್ ಹೇಳಿದರು. ನವೀಕರಿಸಬಹುದಾದ ಇಂಧನಗಳಿಗೆ ಪಳೆಯುಳಿಕೆ ಇಂಧನಗಳಿಗಿಂತ ಪ್ರತಿ ಶಕ್ತಿಯ ಉತ್ಪಾದನೆಗೆ ಹೆಚ್ಚಿನ ವಸ್ತುಗಳು ಬೇಕಾಗುತ್ತವೆ. ಏಕೆಂದರೆ ಅವು ಹೆಚ್ಚು ವಿಕೇಂದ್ರೀಕೃತವಾಗಿವೆ ಎಂದು ಅವರು ಹೇಳಿದರು.

ಆದರೆ, ಗಣಿಗಾರಿಕೆಯಿಂದ ಉಂಟಾಗುವ ಇಂಗಾಲದ ಮಾಲಿನ್ಯವನ್ನು, ಇಂಗಾಲ ಹೊರಸೂಸುವ ಪಳೆಯುಳಿಕೆ ಇಂಧನಗಳಿಂದ ಉಂಟಾಗುವ ಮಾಲಿನ್ಯವನ್ನು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡುವ ಮೂಲಕ ಸರಿದೂಗಿಸಲಾಗುವುದು ಎಂದು ಹಾಸ್‌ಫಾದರ್ ತಮ್ಮ ಲೇಖನದಲ್ಲಿ ಪ್ರತಿಪಾದಿಸಿದ್ದಾರೆ. ಅಧ್ಯಯನದ ಭಾಗವಲ್ಲದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ರಾಬ್ ಜಾಕ್ಸನ್, ಸಾಕಷ್ಟು ಅಪರೂಪದ ಭೂಮಿಯ ಖನಿಜಗಳಿವೆ ಎಂದು ಅನೇಕ ಪುರಾವೆಗಳು ತೋರಿಸಿದರೂ, ಇದಕ್ಕೆ ಸಮತೋಲನದ ಅಗತ್ಯವಿದೆ ಹೆಚ್ಚು ಗಣಿಗಾರಿಕೆಯ ಜೊತೆಗೆ, ನಾವು ಕಡಿಮೆ ಬಳಸಬೇಕು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ನಾವು ಇಂದಿಗೂ ಮಾನವನ ದೇಹದಲ್ಲಿ ಪೂರ್ವಜರ ಈ 5 ಕುರುಹುಗಳನ್ನ ಕಾಣಬಹುದು!.. ಹೇಗೆ ಅಂತೀರಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.