ETV Bharat / science-and-technology

ಹೊಸ ವೈರಸ್‌ ಸುಳಿವು ಕೊಟ್ಟ ವಿಜ್ಞಾನಿಗಳು: 'ನಿಯೋಕೋವ್' ಸೋಂಕಿತ ಮೂವರಲ್ಲಿ ಒಬ್ಬನ ಸಾವು ಖಚಿತವಂತೆ! - New virus more dangerous than covid

ಜಗತ್ತಿಗೆ ಮತ್ತೊಂದು ಮಹಾಮಾರಿ ಎದುರಾಗುವ ಸಾಧ್ಯತೆ ಇದೆ ಎಂದು ಚೀನಾ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಕೋವಿಡ್‌ಗಿಂತೂ ಮತ್ತಷ್ಟು ಅಪಾಯಕಾರಿಯಾದ ನಿಯೋಕೋವ್ ಬಗ್ಗೆ ಎಚ್ಚರ ವಹಿಸುವಂತೆ ವಿಜ್ಞಾನಿಗಳು ತಿಳಿಸಿದ್ದಾರೆ. ಈ ವೈರಸ್‌ ತಗುಲಿದ ಮೂವರಲ್ಲಿ ಒಬ್ಬರು ಸಾಯುತ್ತಾರೆ ಎನ್ನಲಾಗಿದೆ.

Scientists warn of NeoCov, a virus that can kill 1 in 3 persons
ಹೊಸ ವೈರಸ್‌ ಸುಳಿವು ಕೊಟ್ಟ ವಿಜ್ಞಾನಿಗಳು; 'ನಿಯೋಕೋವ್' ಸೋಂಕಿತ ಮೂವರಲ್ಲಿ ಓರ್ವ ಸಾವು ಖಚಿತ ಎಂದ ವಿಜ್ಞಾನಿಗಳು..!
author img

By

Published : Jan 28, 2022, 12:20 PM IST

Updated : Jan 28, 2022, 1:05 PM IST

ನವದೆಹಲಿ: ಚೀನಾದ ವುಹಾನ್‌ನಲ್ಲಿ ಕಾಣಿಸಿಕೊಂಡು ಇಡೀ ಜಗತ್ತನ್ನು ಎರಡು ವರ್ಷಗಳ ಕಾಲ ಕೋವಿಡ್‌ ವೈರಸ್‌ ತಲ್ಲಣಗೊಳಿಸಿತ್ತು. ಇಂದಿಗೂ ಕೊರೊನಾ ರೂಪಾಂತರಿ ಮೂಲಕ ಕಾಡುತ್ತಿರುವ ಬೆನ್ನಲ್ಲೇ ವುಹಾನ್‌ ವಿಜ್ಞಾನಿಗಳು ಇಂತಹದ್ದೇ ಮತ್ತೊಂದು ವೈರಸ್‌ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

NeoCov ವೈರಸ್​​ ಜೀವಕ್ಕೆ ಮಾರಕ!: ಕೋವಿಡ್‌-19 ಬಳಿಕ ಇಂತಹದ್ದೇ ಮತ್ತೊಂದು ವೈರಸ್‌ 'ನಿಯೋಕೋವ್' ಬಗ್ಗೆ ಎಚ್ಚರಿಕೆ ವಹಿಸುವಂತೆ ವುಹಾನ್‌ನ ವಿಜ್ಞಾನಿಗಳು ತಿಳಿಸಿದ್ದು, ಈ ವೈರಸ್‌ ಹಿಂದಿನ ಎಲ್ಲಾ ವೈರಸ್‌ಗಳಿಗಿಂತ ಹೆಚ್ಚಿನ ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ.

'ನಿಯೋಕೋವ್' ಹೆಚ್ಚಿನ ಪ್ರಸರಣ ಹಾಗೂ ಮರಣ ಪ್ರಮಾಣವನ್ನು ಹೊಂದಿದೆ. ಇದುವರೆಗೆ ಅಭಿವೃದ್ಧಿಪಡಿಸಿದ ಯಾವುದೇ ಲಸಿಕೆಗಳಿಂದ ಈ ಸೋಂಕಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಮೂವರು ಸೋಂಕಿತರಲ್ಲಿ ಒಬ್ಬರನ್ನು (1/3) ಬಲಿ ಪಡೆಯಲಿದೆ. ಅಷ್ಟೊಂದು ಅಪಾಯಕಾರಿ ವೈರಸ್‌ ಇದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ನಿಯೋಕೋವ್​ ಮೂಲ ದಕ್ಷಿಣ ಆಫ್ರಿಕಾ: ಚೀನಾದ ವುಹಾನ್ ವಿಶ್ವವಿದ್ಯಾನಿಲಯ ಮತ್ತು ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ಇನ್‌ಸ್ಟಿಟ್ಯೂಟ್ ಆಫ್ ಬಯೋಫಿಸಿಕ್ಸ್‌ನ ಸಂಶೋಧಕರ ಅಧ್ಯಯನದ ಪ್ರಕಾರ, ನಿಯೋಕೋವ್ ವೈರಸ್ ಹೊಸದೇನಲ್ಲ. ಏಕೆಂದರೆ ಇದು 2012 ರಿಂದ 2015ರ ಅವಧಿಯಲ್ಲಿ ಮಧ್ಯಪ್ರಾಚ್ಯದಲ್ಲಿ ಉಸಿರಾಟದ ಸಿಂಡ್ರೋಮ್ MERS-CoV ಗೆ ಸಂಬಂಧಿಸಿದೆ ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಮೊದಲು ಬಾವಲಿಗಳಲ್ಲಿ ಪತ್ತೆಯಾಗಿರುವ ವೈರಸ್ ಇದುವರೆಗೆ ಮನುಷ್ಯರಿಗೆ ತಗುಲಿಲ್ಲ. ಆದರೂ ನಿಯೋಕೋವ್‌ ಮತ್ತು ಅದರ ಸಮೀಪದ PDF-2180-CoV ಸೋಂಕು ಜನರಲ್ಲಿ ಕಾಣಿಸಿಕೊಳ್ಳಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ವೈರಸ್ ಮಾನವ ಜೀವಕೋಶಗಳಿಗೆ ನುಸುಳಲು ಕೇವಲ ಒಂದು ರೂಪಾಂತರ ಸಾಕು ಎಂದು ಸಂಶೋಧಕರು ಹೇಳಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 28, 2022, 1:05 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.