ETV Bharat / science-and-technology

ಅಮೆರಿಕದ ಗಗನ ನೌಕೆಗೆ ಕಲ್ಪನಾ ಚಾವ್ಲಾ ಹೆಸರು: ಇತಿಹಾಸ ನಿರ್ಮಾಣದ ಹೊಸ್ತಿಲಲ್ಲಿದ್ದ ನೌಕೆಗೆ ಏನಾಯಿತು?

ನೆಲದ ಬೆಂಬಲ ಸಾಧನಗಳಿಂದ ನಾಮಮಾತ್ರದ ಡೇಟಾ ಸ್ವೀಕರಿಸಿದ ನಂತರ ನಾವು ಇಂದು ರಾತ್ರಿ ಆಂಟಾರೆಸ್ ಉಡಾವಣಾ ಪ್ರಯತ್ನವನ್ನು ನಿಲ್ಲಿಸಿದ್ದೇವೆ. ಮುಂದಿನ ಉಡಾವಣಾ ಪ್ರಯತ್ನದ ಸಮಯದವರೆಗೂ ಕಾಯುವಂತೆ ನಾರ್ಥ್​ರಾಪ್​ ಗ್ರುಮ್ಯಾನ್ ಟ್ವೀಟ್ ಮಾಡಿದೆ.

Kalpana Chawla
ಕಲ್ಪನಾ ಚಾವ್ಲಾ
author img

By

Published : Oct 2, 2020, 6:18 PM IST

Updated : Feb 16, 2021, 7:31 PM IST

ವಾಷಿಂಗ್ಟನ್​​​: ಭಾರತ ಮೂಲದ ಅಮೆರಿಕನ್ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರಿನ ನಾರ್ಥ್​ರಾಪ್​ ಗ್ರುಮ್ಯಾನ್ ಆಂಟಾರೆಸ್ ರಾಕೆಟ್ ಉಡಾವಣೆಯಾಗುವ 2 ನಿಮಿಷ 40 ಸೆಕೆಂಡ್​ಗೂ ಮುನ್ನ ಸ್ಥಗಿತಗೊಳಿಸಲಾಗಿದೆ.

ಅಮೆರಿಕದ ಬಾಹ್ಯಾಕಾದ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಕೆಲವು ಸಮಸ್ಯೆಯಿಂದ ಉಡಾವಣೆ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ.

ನೆಲದ ಬೆಂಬಲ ಸಾಧನಗಳಿಂದ ನಾಮಮಾತ್ರದ ಡೇಟಾ ಸ್ವೀಕರಿಸಿದ ನಂತರ ನಾವು ಇಂದು ರಾತ್ರಿ ಆಂಟಾರೆಸ್ ಉಡಾವಣಾ ಪ್ರಯತ್ನವನ್ನು ನಿಲ್ಲಿಸಿದ್ದೇವೆ. ಮುಂದಿನ ಉಡಾವಣಾ ಪ್ರಯತ್ನದ ಸಮಯದವರೆಗೂ ಕಾಯುವಂತೆ ನಾರ್ಥ್​ರಾಪ್​ ಗ್ರುಮ್ಯಾನ್ ಟ್ವೀಟ್ ಮಾಡಿದೆ.

  • We have scrubbed tonight's #Antares launch attempt after receiving off-nominal data from ground support equipment. Stay tuned for the time of the next launch attempt.

    — Northrop Grumman (@northropgrumman) October 2, 2020 " class="align-text-top noRightClick twitterSection" data=" ">

ಉಡಾವಣೆ ಆಗಲಿರುವ ಎನ್​ಜಿ 14 ಸಿಗ್ನಸ್​ ಎಂಬ ಗಗನ ನೌಕೆಗೆ ಕಲ್ಪನಾ ಚಾವ್ಲಾ ಅವರ ಹೆಸರಿಡಲಾಗಿದೆ. ಅಮೆರಿಕದ ಬಾಹ್ಯಾಕಾಶ ಹಾಗೂ ರಕ್ಷಣಾ ತಂತ್ರಜ್ಞಾನ ಕಂಪನಿ ನಾರ್ಥ್​ರಾಪ್​ ಗ್ರುಮ್ಯಾನ್​, ಬ್ಯಾಹಾಕಾಶ ಯಾನ ಕೈಗೊಂಡ ಮೊದಲ ಭಾರತ ಮೂಲದ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದ ಕಲ್ಪನಾ ಚಾವ್ಲಾ ಅವರಿಗೆ ಗೌರವ ಸಲ್ಲಿಸಿತ್ತು.

ವಾಣಿಜ್ಯ ಸರಕು ಬಾಹ್ಯಾಕಾಶ ನೌಕೆ ಎಸ್.ಎಸ್. ಕಲ್ಪನಾ ಚಾವ್ಲಾ ಸುಮಾರು 3,720 ಕಿಲೋಗ್ರಾಂಗಳಷ್ಟು ಸರಕು ಹೊತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ತೆಗೆದುಕೊಂಡು ಹೋಗಲಿತ್ತು. ಮುಂದಿನ ಉಡಾವಣೆಯು ಅಕ್ಟೋಬರ್ 2 ರಂದು ರಾತ್ರಿ 8: 45ಕ್ಕೆ ಪ್ರಾರಂಭವಾಗಲಿದೆ ಎಂದು ನಾಸಾ ಘೋಷಿಸಿತು. ವಾಲೋಪ್ಸ್ ಫ್ಲೈಟ್ ಫೆಸಿಲಿಟಿಯಲ್ಲಿ ಸಮಸ್ಯೆಯ ಪರಿಹಾರ ಬಾಕಿ ಉಳಿದಿದೆ ಎಂದು ಏಜೆನ್ಸಿ ಹೇಳಿದೆ.

ಅಂಟಾರೆಸ್ ರಾಕೆಟ್ ಸಿಗ್ನಸ್ ಬಾಹ್ಯಾಕಾಶ ನೌಕೆ ಸುಮಾರು 8,000 ಪೌಂಡ್ ಸರಕುಗಳೊಂದಿಗೆ ಅಕ್ಟೋಬರ್ 4ರೊಳಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಲಿದೆ. ಸಿಗ್ನಸ್ ಡಿಸೆಂಬರ್ ಮಧ್ಯಭಾಗದವರೆಗೆ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದು, ನಂತರ ಅಲ್ಲಿಂದ ನಿರ್ಗಮಿಸುತ್ತದೆ.

Last Updated : Feb 16, 2021, 7:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.