ಸ್ಯಾನ್ ಫ್ರಾನ್ಸಿಸ್ಕೊ: ಸೂಜಿಯಿಂದ ಚುಚ್ಚುವ ವ್ಯಾಕ್ಸಿನ್ಗಳ ಬದಲಿಗೆ ಬಾಯಿಂದ ಕುಡಿಯಬಹುದಾದ ಕೋವಿಡ್-19 ವ್ಯಾಕ್ಸಿನ್ ತಯಾರಿಸುವುದರಲ್ಲಿ ಸಂಶೋಧಕರು ನಿರತರಾಗಿದ್ದಾರೆ. ಮ್ಯುಕೋಸಲ್ ವ್ಯಾಕ್ಸಿನ್ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುತ್ತಿರುವ ಸಂಶೋಧಕರು, swish and swallow ಬಾಯಿಯ ಮೂಲಕ ಸೇವಿಸುವ ವ್ಯಾಕ್ಸಿನ್ಗಳ ಬಗ್ಗೆಯೂ ಸಂಶೋಧನೆ ಮಾಡುತ್ತಿದ್ದಾರೆ. QYNDR ಎಂದು ಕರೆಯಲ್ಪಡುವ ಲಸಿಕೆ ಹಂತ-1 ರ ಕ್ಲಿನಿಕಲ್ ಟ್ರಯಲ್ಸ್ಗಳನ್ನು ಪೂರ್ಣಗೊಳಿಸಿದೆ ಮತ್ತು ಪ್ರಸ್ತುತ ಲಸಿಕೆಯನ್ನು ಮಾರುಕಟ್ಟೆಗೆ ತರಲು ಹೆಚ್ಚು ವಿವರವಾದ, ಸುಧಾರಿತ ಪ್ರಯೋಗಗಳನ್ನು ನಡೆಸಲು ಹೆಚ್ಚಿನ ಫಂಡಿಂಗ್ಗಾಗಿ ಕಾಯುತ್ತಿದೆ.
ಇದೇ ಹೆಸರು ಏಕೆ ಇಡಲಾಗಿದೆ?: QYNDR ಲಸಿಕೆಯನ್ನು 'ಕೈಂಡರ್' (kinder) ಎಂದು ಉಚ್ಚರಿಸಲಾಗುತ್ತದೆ. ಇದು ಲಸಿಕೆ ನೀಡುವ ನಯವಾದ ಮಾರ್ಗವಾಗಿರುವುದರಿಂದ ಈ ಹೆಸರು ಇಡಲಾಗಿದೆ ಎಂದು QYNDR ನ ತಯಾರಕ, ಯುಎಸ್ ಸ್ಪೆಷಲಿಟಿ ಫಾರ್ಮುಲೇಶನ್ಸ್ ಸಂಸ್ಥಾಪಕ ಕೈಲ್ ಫ್ಲಾನಿಗನ್ ಹೇಳಿದ್ದಾರೆ. ಇದಲ್ಲದೆ, ನ್ಯೂಜಿಲ್ಯಾಂಡ್ನ ವಿಶ್ವಾಸಾರ್ಹ ಕ್ಲಿನಿಕಲ್ ಪ್ರಯೋಗ ಫಲಿತಾಂಶಗಳ ಪ್ರಕಾರ QYNDR ಈಗ ಚಲಾವಣೆಯಲ್ಲಿರುವ ಕೋವಿಡ್ -19 ರೂಪಾಂತರಗಳ ವಿರುದ್ಧ ರಕ್ಷಣೆಗಾಗಿ ಕಾರ್ಯಸಾಧ್ಯವಾದ ಆಯ್ಕೆಯಾಗಿದೆ ಎಂದು ವರದಿ ಹೇಳಿದೆ.
ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೂಲಕ ಹಾದು ಹೋಗುವಾಗಲೂ ವ್ಯಾಕ್ಸಿನ್ ಜೀವಂತವಾಗಿರುವಂತೆ ಮಾಡುವುದು ನಿಜವಾಗಿಯೂ ಸವಾಲಿನ ವಿಷಯವಾಗಿತ್ತು ಎಂದು ಕೈಲ್ ಫ್ಲಾನಿಗನ್ ಹೇಳಿದ್ದಾರೆ. ವ್ಯಾಕ್ಸಿನ್ ಹೊಟ್ಟೆಯ ಮುಖಾಂತರ ಹಾದು ಹೋಗುವಂತೆ ಮತ್ತು ಕರುಳಿನೊಳಗೆ ಹೋಗುವಂತೆ ಮತ್ತು ಅದು ಪರಿಣಾಮಕಾರಿಯಾಗಿರುವಂತೆ ಮತ್ತು ಸೂಕ್ತವಾದ ಪರಿಣಾಮ ಬೀರುವಂತೆ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಅವರು ತಿಳಿಸಿದರು.
ಕ್ರಾಂತಿಕಾರಿ ಎಂಆರ್‌ಎನ್‌ಎ ಲಸಿಕೆಗಳು ಮತ್ತು ಬೂಸ್ಟರ್‌ಗಳ ರೀತಿಯಲ್ಲಿ ಮ್ಯೂಕೋಸಲ್ ಲಸಿಕೆಗಳು ತೀವ್ರವಾದ ಕಾಯಿಲೆಗಳು ಮತ್ತು ಸಾವಿನಿಂದ ರಕ್ಷಿಸುವುದಲ್ಲದೆ ಸೋಂಕುಗಳನ್ನು ದೂರವಿಡುತ್ತವೆ ಎಂದು ವಿಜ್ಞಾನಿಗಳು ಭರವಸೆ ಹೊಂದಿದ್ದಾರೆ ಎಂದು ವರದಿ ಹೇಳಿದೆ.
ಇತರ ಲಸಿಕೆಗಳಿಗಿಂತ ಇದು ಹೇಗೆ ಭಿನ್ನ: ಸಾಂಪ್ರದಾಯಿಕ ಲಸಿಕೆಗಳಿಗಿಂತ ಭಿನ್ನವಾಗಿ, ಮ್ಯೂಕೋಸಲ್ ಲಸಿಕೆಗಳು ನಮ್ಮ ಮೂಗಿನ ಮೂಲಕ (ಹೆಚ್ಚು-ಚರ್ಚಿತ ಮೂಗಿನ ಕೋವಿಡ್-19 ಲಸಿಕೆಯಂತೆ) ಅಥವಾ ನಮ್ಮ ಕರುಳಿನ ಮೂಲಕ ನಮ್ಮ ಲೋಳೆಯ ಪೊರೆಗಳ ಮೂಲಕ ಪ್ರವೇಶಿಸುತ್ತವೆ. ಮ್ಯೂಕೋಸಲ್ ಲಸಿಕೆಗಳು ಕೋವಿಡ್-19 ಸೋಂಕನ್ನು ಎದುರಿಸಲು ಕಾರ್ಯಸಾಧ್ಯವಾದ ಅಥವಾ ಆದ್ಯತೆಯ ಆಯ್ಕೆಗಳಾಗಿ ಬೆಂಬಲಿಸಲ್ಪಟ್ಟಿವೆ. ಅವು ಉತ್ಪಾದಿಸುವ ವಿವಿಧ ರೀತಿಯ ರೋಗನಿರೋಧಕ ಶಕ್ತಿಯು ವೈರಸ್ ನಮ್ಮ ದೇಹಕ್ಕೆ ಪ್ರವೇಶಿಸುವ ಸ್ಥಳದಿಂದಲೇ ಪ್ರಾರಂಭವಾಗುತ್ತದೆ ಎಂದು ವರದಿ ಉಲ್ಲೇಖಿಸಿದೆ.
ಕೋವಿಡ್ ಲಸಿಕೆ ಪಡೆಯುವಂತೆ ಒತ್ತಾಯಿಸುವಂತಿಲ್ಲ: ಕೋವಿಡ್-19 ಲಸಿಕೆ ಪಡೆಯುವಂತೆ ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ಒತ್ತಾಯಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ನ್ಯಾಯಾಲಯವು ಈ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡಿತು. ಉದ್ಯೋಗದಾತರು ಲಸಿಕೆ ಪಡೆಯುವಂತೆ ಒತ್ತಾಯಿಸುವಂತಿಲ್ಲ ಎಂದು ಹೇಳಿತು.
ಕೊರೊನಾವೈರಸ್ ಲಸಿಕೆ ತೆಗೆದುಕೊಳ್ಳುವಂತೆ ಒತ್ತಾಯಿಸದೆ ಶಾಲೆಯಲ್ಲಿ ಕೆಲಸ ಮಾಡಲು ಅನುಮತಿ ಕೋರಿ ಸರ್ಕಾರಿ ಶಿಕ್ಷಕರೊಬ್ಬರು ಕೋರ್ಟ್ಗೆ ಮನವಿ ಸಲ್ಲಿಸಿದ ನಂತರ ಈ ವಿಷಯ ವಿಚಾರಣೆಗೆ ಬಂದಿತ್ತು. ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಅವರ ಏಕಸದಸ್ಯ ಪೀಠವು ಅರ್ಜಿದಾರರ ಪರವಾಗಿ ತೀರ್ಪು ನೀಡಿದೆ.
ಇದನ್ನೂ ಓದಿ: ರಣಬೀರ್ ಜೊತೆ ಶ್ರದ್ಧಾ ಲಿಪ್ ಕಿಸ್: ಹುಡುಗರ ಎದೆಬಡಿತ ಹೆಚ್ಚಿಸುವ ಹಾಟ್ ಲುಕ್ನಲ್ಲಿ ಬಿಟೌನ್ ಬೆಡಗಿ