ಬೆಂಗಳೂರು: ಈ ವರ್ಷದ ಜುಲೈ ತಿಂಗಳಲ್ಲಿ ನಡೆಸಲು ಉದ್ದೇಶಿಸಲಾಗಿರುವ ಗಗನಯಾನ ಕಾರ್ಯಕ್ರಮಕ್ಕಾಗಿ ಬಳಸುವ ಕ್ರಯೋಜೆನಿಕ್ ಎಂಜಿನ್‌ನ ಅರ್ಹತಾ ಪರೀಕ್ಷೆಯನ್ನು ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್‌ನಲ್ಲಿ 720 ಸೆಕೆಂಡುಗಳ ಕಾಲ ಯಶಸ್ವಿಯಾಗಿ ನಡೆಸಲಾಗಿದೆ.
ಈ ಪರೀಕ್ಷೆ ಯಶಸ್ವಿಯಾಗಿ ಪೂರೈಸಿದ್ದು, ಎಂಜಿನ್‌ನ ಕಾರ್ಯಕ್ಷಮತೆಯು ಪರೀಕ್ಷಾ ಉದ್ದೇಶಗಳನ್ನು ಪೂರೈಸಿದೆ ಮತ್ತು ಸಂಪೂರ್ಣ ಪರೀಕ್ಷೆಯ ಅವಧಿಯಲ್ಲಿ ಸಕಾರಾತ್ಮಕ ಫಲಿತಾಂಶ ಹೊರ ಬಂದಿದೆ ಎಂದು ಬೆಂಗಳೂರಿನ ಇಸ್ರೋ ಪ್ರಧಾನ ಕಚೇರಿ ಮಾಹಿತಿ ನೀಡಿದೆ.
ದೀರ್ಘಾವಧಿಯಲ್ಲಿ ನಡೆದ ಈ ಪರೀಕ್ಷೆಯು ಮಾನವ ಬಾಹ್ಯಾಕಾಶ ಕಾರ್ಯಕ್ರಮವಾದ ಗಗನಯಾನಕ್ಕೆ ಪ್ರಮುಖ ಮೈಲಿಗಲ್ಲು. ಇದು ಗಗನಯಾನಕ್ಕಾಗಿ ಈ ಕ್ರಯೋಜೆನಿಕ್ ಎಂಜಿನ್ ಹೆಚ್ಚು ವಿಶ್ವಾಸಾರ್ಹವಾಗಿದೆ ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.
-
Today, ISRO successfully conducted the qualification test of Cryogenic Engine for the Gaganyaan programme for a duration of 720 seconds at ISRO Propulsion Complex (IPRC), Mahendragiri, Tamil Nadu. Details: https://t.co/6hGrC6keBA pic.twitter.com/qB20tPsu3r
— ISRO (@isro) January 12, 2022 " class="align-text-top noRightClick twitterSection" data="
">Today, ISRO successfully conducted the qualification test of Cryogenic Engine for the Gaganyaan programme for a duration of 720 seconds at ISRO Propulsion Complex (IPRC), Mahendragiri, Tamil Nadu. Details: https://t.co/6hGrC6keBA pic.twitter.com/qB20tPsu3r
— ISRO (@isro) January 12, 2022Today, ISRO successfully conducted the qualification test of Cryogenic Engine for the Gaganyaan programme for a duration of 720 seconds at ISRO Propulsion Complex (IPRC), Mahendragiri, Tamil Nadu. Details: https://t.co/6hGrC6keBA pic.twitter.com/qB20tPsu3r
— ISRO (@isro) January 12, 2022
ಈಗ ಮಹೇಂದ್ರಗಿರಿಯಲ್ಲಿ ನಡೆದ ಪರೀಕ್ಷೆಯ ನಂತರ ಈ ಎಂಜಿನ್ ಅನ್ನು 1810 ಸೆಕೆಂಡುಗಳ ಕಾಲ ಇನ್ನೂ ನಾಲ್ಕು ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಎಂಜಿನ್ ಅರ್ಹತೆಯನ್ನು ಪೂರ್ಣಗೊಳಿಸಲು ಇನ್ನೂ ಎರಡು ಅಲ್ಪಾವಧಿಯ ಪರೀಕ್ಷೆಗಳು ಮತ್ತು ಒಂದು ದೀರ್ಘಾವಧಿಯ ಪರೀಕ್ಷೆಗೆ ಒಳಗಾಗುತ್ತದೆ ಎಂದು ಇಸ್ರೋ ಹೇಳಿದೆ.
ಈ ತಿಂಗಳ ಆರಂಭದಲ್ಲಿ ಭಾರತದ ಪ್ರಮುಖ ಗಗನಯಾನ್ ಯೋಜನೆಯು ವಿನ್ಯಾಸ ಹಂತವನ್ನು ಪೂರ್ಣಗೊಳಿಸಿದೆ ಮತ್ತು ಪರೀಕ್ಷಾ ಹಂತಕ್ಕೆ ಪ್ರವೇಶಿಸಿದೆ ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತೀಯ ಎರಡು ಉದಯೋನ್ಮುಖ ಸ್ಟಾರ್ಟ್ಅಪ್ಗಳಿಗೆ ವಿಶ್ವಬ್ಯಾಂಕ್ ಗ್ರೂಪ್ ಅವಾರ್ಡ್