ನವದೆಹಲಿ : ವಿಶ್ವದ ಪ್ರಸಿದ್ಧ ಸ್ಮಾರ್ಟ್ ಫೋನ್ ಕಂಪನಿ ಒಪ್ಪೊ ಶುಕ್ರವಾರ ತನ್ನ ಹೊಸ 'ರೆನೊ 10 5ಜಿ' (Reno 10 5G) ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಬಾರ್ಡರ್ಲೆಸ್ ಮತ್ತು ಇಮ್ಮರ್ಸಿವ್ ವೀಕ್ಷಣೆಯ ಅನುಭವಕ್ಕಾಗಿ ಇದರಲ್ಲಿ 93 ಪ್ರತಿಶತದಷ್ಟು ಸ್ಕ್ರೀನ್-ಟು-ಬಾಡಿ ಅನುಪಾತವನ್ನು ನೀಡಲಾಗಿದೆ. Dragontrail Star 2 ಡಿಸ್ ಪ್ಲೇ ಮತ್ತು ಬಲವಾದ ಪಾಲಿಕಾರ್ಬೊನೇಟ್ ಬ್ಯಾಕ್ ಅನ್ನು ಹೊಂದಿದೆ. ನೈಜ ಧ್ವನಿ ತಂತ್ರಜ್ಞಾನದೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಸಹ ನೀವು ಆನಂದಿಸಬಹುದು. Oppo Reno 10 5G ಪ್ರಬಲ ಕ್ಯಾಮೆರಾಗಳನ್ನು ಹೊಂದಿರುವುದು ವಿಶೇಷವಾಗಿದೆ.
-
Oppo Reno 10 Pro and Reno 10 Pro Plus, which phone will you pick?
— Techyvillage (@techyvillage) July 21, 2023 " class="align-text-top noRightClick twitterSection" data="
.
.#techyvillage #oppo #opporeno10pro #opporeno10proplus #opporeno10series #opporeno10 #opporeno #oppoindia pic.twitter.com/Jg6am2poMW
">Oppo Reno 10 Pro and Reno 10 Pro Plus, which phone will you pick?
— Techyvillage (@techyvillage) July 21, 2023
.
.#techyvillage #oppo #opporeno10pro #opporeno10proplus #opporeno10series #opporeno10 #opporeno #oppoindia pic.twitter.com/Jg6am2poMWOppo Reno 10 Pro and Reno 10 Pro Plus, which phone will you pick?
— Techyvillage (@techyvillage) July 21, 2023
.
.#techyvillage #oppo #opporeno10pro #opporeno10proplus #opporeno10series #opporeno10 #opporeno #oppoindia pic.twitter.com/Jg6am2poMW
'Oppo Reno 10 5G ಇದು 6.7 ಇಂಚಿನ ಪೂರ್ಣ HD ಪ್ಲಸ್ 3D ಕರ್ವ್ ಡಿಸ್ಪ್ಲೇ ಹೊಂದಿದೆ. ಇದರಲ್ಲಿ 120 Hz ರಿಫ್ರೆಶ್ ದರವಿದೆ. ಪ್ರಸ್ತುತ ಇದರ ಬೆಲೆ 32,999 ರೂಪಾಯಿಗಳಾಗಿದೆ. ಹ್ಯಾಂಡ್‌ಸೆಟ್ ಜುಲೈ 27 ರ ಬೆಳಗ್ಗೆ 12 ಗಂಟೆಯಿಂದ ಇ-ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ಮುಖ್ಯ ರಿಟೇಲ್ ಔಟ್‌ಲೆಟ್‌ಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. 'Oppo Reno10 5G' 3D curved ಡಿಸ್ ಪ್ಲೇಯೊಂದಿಗೆ ಅಲ್ಟ್ರಾ-ಸ್ಲಿಮ್ bAwi ಹೊಂದಿದೆ ಮತ್ತು ಐಸ್ ಬ್ಲೂ ಮತ್ತು ಸಿಲ್ವರ್ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಈ ಸ್ಮಾರ್ಟ್ ಫೋನ್ ತುಂಬಾ ಹಗುರವಾಗಿದೆ ಮತ್ತು ಕೈಯಲ್ಲಿ ಹಿಡಿದಿಡಲು ಆರಾಮದಾಯಕವಾಗಿದೆ.
Reno10 5G 64-ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಮತ್ತು 32-ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸರ್ ಮತ್ತು 8-ಮೆಗಾಪಿಕ್ಸೆಲ್ ಸೆನ್ಸರ್ಗಳನ್ನು ಒಳಗೊಂಡಿದೆ. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಬಳಕೆದಾರರು ಈ ಕ್ಯಾಮೆರಾದೊಂದಿಗೆ ಉತ್ತಮ ಫೋಟೋಗಳನ್ನು ಸೆರೆಹಿಡಿಯಬಹುದು. ಪೋರ್ಟ್ರೇಟ್ ಶೂಟ್ ಆಗಿರಲಿ ಅಥವಾ ವೈಡ್ ಆಂಗಲ್ ಶಾಟ್ ಆಗಿರಲಿ, ಇದು ಎಲ್ಲರಿಗೂ ಉತ್ತಮ ಆಯ್ಕೆಯಾಗಿದೆ. 5000 mAh ಬ್ಯಾಟರಿ ಇದರಲ್ಲಿದೆ.
-
The most wanted portrait phone is here! Reno10 5G’s telephoto lens creates stunning pictures that everyone desires.
— OPPO India (@OPPOIndia) July 21, 2023 " class="align-text-top noRightClick twitterSection" data="
Pre-Order now: https://t.co/JvgemU5EzN#OPPOReno10Series#ThePortraitExpert pic.twitter.com/7dAcnfi2cL
">The most wanted portrait phone is here! Reno10 5G’s telephoto lens creates stunning pictures that everyone desires.
— OPPO India (@OPPOIndia) July 21, 2023
Pre-Order now: https://t.co/JvgemU5EzN#OPPOReno10Series#ThePortraitExpert pic.twitter.com/7dAcnfi2cLThe most wanted portrait phone is here! Reno10 5G’s telephoto lens creates stunning pictures that everyone desires.
— OPPO India (@OPPOIndia) July 21, 2023
Pre-Order now: https://t.co/JvgemU5EzN#OPPOReno10Series#ThePortraitExpert pic.twitter.com/7dAcnfi2cL
ರೆನೋ ಸರಣಿಯು 67 ವ್ಯಾಟ್‌ಗಳ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಇದುವರೆಗಿನ ಅತಿ ಹೆಚ್ಚು ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಮೊಬೈಲ್ ಅನ್ನು ಕೇವಲ 47 ನಿಮಿಷಗಳಲ್ಲಿ 100 ಪ್ರತಿಶತದಷ್ಟು ಚಾರ್ಜ್ ಮಾಡುತ್ತದೆ. ಬೇಗನೆ ಚಾರ್ಜಿಂಗ್ ಬೇಕು ಎಂದರೆ 30 ನಿಮಿಷಗಳಲ್ಲಿ 70 ಪ್ರತಿಶತದವರೆಗೆ ಚಾರ್ಜ್ ಮಾಡಿಕೊಳ್ಳಬಹುದು.
ಬ್ಯಾಟರಿ ಲೈಫ್ ಮತ್ತು ಸ್ಟೋರೇಜ್: ಒಪ್ಪೊದ ಬ್ಯಾಟರಿ ಹೆಲ್ತ್ ಇಂಜಿನ್ (BHE) ಚಾರ್ಜಿಂಗ್ ಅವಧಿಯನ್ನು ವಿಸ್ತರಿಸಲು ಮೇಲ್ವಿಚಾರಣೆಯ ಮೂಲಕ ಕರೆಂಟ್ ಮತ್ತು ವೋಲ್ಟೇಜ್ ಅನ್ನು ನಿಯಂತ್ರಿಸುತ್ತದೆ. ಇದು ಹ್ಯಾಂಡ್‌ಸೆಟ್‌ನ ಬ್ಯಾಟರಿಯನ್ನು ನಾಲ್ಕು ವರ್ಷಗಳವರೆಗೆ 80 ಪ್ರತಿಶತದವರೆಗೆ ಇರುವಂತೆ ಕಾಪಾಡುತ್ತದೆ. 'Reno 10 5G' ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಪ್ರೊಸೆಸರ್ ಅನ್ನು ಹೊಂದಿದೆ. 8 GB RAM ಮತ್ತು 256 GB ಸಂಗ್ರಹವನ್ನು ಹೊಂದಿದೆ. ಗ್ರಾಹಕರು ಇದನ್ನು 8 GB ವರೆಗೆ ಹೆಚ್ಚಿಸಬಹುದು. ಕೂಲಿಂಗ್ಗಾಗಿ 'T19' ಲೇಯರ್ ಗ್ರ್ಯಾಫೈಟ್ ಅನ್ನು ಬಳಸಲಾಗಿದೆ. ಹಿಂದಿನ ಪೀಳಿಗೆಯ ಸಾಧನಗಳಿಗೆ ಹೋಲಿಸಿದರೆ 'Reno10' ನಲ್ಲಿ OPPO ನ ಡೈನಾಮಿಕ್ ಕಂಪ್ಯೂಟಿಂಗ್ ಎಂಜಿನ್ ಅಪ್ಲಿಕೇಶನ್ ತೆರೆಯುವ ವೇಗ 12 ಪ್ರತಿಶತದಷ್ಟು ಹೆಚ್ಚಾಗಿದೆ.
ಮಲ್ಟಿ-ಸ್ಕ್ರೀನ್ ಕನೆಕ್ಟ್ ವೈಶಿಷ್ಟ್ಯ/ ಅನ್ಲಾಕ್ ಮಾಡದೆ ಸ್ಪಾಟಿಫೈ: Oppo Reno 10 5G ಸ್ಮಾರ್ಟ್‌ಫೋನ್ 48 ತಿಂಗಳ ಫ್ಲೂಯೆನ್ಸಿ ರೇಟಿಂಗ್ ಹೊಂದಿದೆ. ಇದು ನಾಲ್ಕು ವರ್ಷಗಳ ನಂತರವೂ ಹೊಸ ಫೋನ್‌ನಂತೆ ಕಾರ್ಯನಿರ್ವಹಿಸುತ್ತದೆ. ಇನ್ ಫ್ರಾರೆಡ್ ರಿಮೋಟ್ ಕಂಟ್ರೋಲ್ ಅಪ್ಲಿಕೇಶನ್ ಕೂಡ ಇದರಲ್ಲಿದೆ. ಇದರ ಮೂಲಕ ಟಿವಿಗಳು, AC ಗಳು ಮತ್ತು ಸೆಟ್ - ಟಾಪ್ ಬಾಕ್ಸ್‌ಗಳಂತಹ ಗೃಹೋಪಯೋಗಿ ಉಪಕರಣಗಳನ್ನು ರಿಮೋಟ್‌ನಲ್ಲಿ ನಿಯಂತ್ರಿಸಬಹುದು. ಇದರ ಮಲ್ಟಿ ಸ್ಕ್ರೀನ್ ಸಂಪರ್ಕ ವೈಶಿಷ್ಟ್ಯದೊಂದಿಗೆ 'Reno10 5G' ಅನ್ನು ಇತರ ಸಾಧನಗಳಿಗೆ ಸಂಪರ್ಕಿಸಬಹುದು. ಇನ್ನು ಫೋನನ್ನು ಅನ್ಲಾಕ್ ಮಾಡದೆಯೇ Spotify ನಲ್ಲಿ ಸಂಗೀತವನ್ನು ನಿಯಂತ್ರಿಸಬಹುದು.
ಮೂರು ವರ್ಷಗಳವರೆಗೆ ಸೆಕ್ಯೂರಿಟಿ ಅಪ್ಡೇಟ್: ರೆನೋ 10 5G ಎರಡು ವರ್ಷಗಳವರೆಗೆ OS ಅಪ್ಡೇಟ್ಗಳನ್ನು ಮತ್ತು ಮೂರು ವರ್ಷಗಳವರೆಗೆ ಸೆಕ್ಯೂರಿಟಿ ಅಪ್ಡೇಟ್ಗಳನ್ನು ನೀಡಲಿದೆ.
ಖರೀದಿಯ ಮೇಲೆ ರಿಯಾಯಿತಿ: HDFC, ICICI ಬ್ಯಾಂಕ್, Axis ಬ್ಯಾಂಕ್ ಮತ್ತು SBI ಕಾರ್ಡ್‌ಗಳನ್ನು ಬಳಸಿ ಗ್ರಾಹಕರು ಫ್ಲಿಪ್‌ಕಾರ್ಟ್ ಮತ್ತು Oppo ಸ್ಟೋರ್‌ಗಳಲ್ಲಿ 3,000 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಹೆಚ್ಚುವರಿಯಾಗಿ, ಪ್ರಮುಖ ಬ್ಯಾಂಕ್ ಕಾರ್ಡ್‌ದಾರರು 6 ತಿಂಗಳವರೆಗೆ ನೋ ಕಾಸ್ಟ್EMI ಆಯ್ಕೆಗಳನ್ನು ಸಹ ಪಡೆಯಬಹುದು. ಪ್ರಮುಖ ಬ್ಯಾಂಕ್‌ಗಳಾದ ಎಸ್‌ಬಿಐ, ಕೊಟಕ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಒನ್ ಕಾರ್ಡ್ ಮತ್ತು ಎಯು ಸ್ಮಾಲ್ ಫೈನಾನ್ಸ್‌ನಂತಹ ಪ್ರಮುಖ ಬ್ಯಾಂಕ್‌ಗಳಿಂದ 6 ತಿಂಗಳವರೆಗೆ ಗ್ರಾಹಕರು 10 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. TVS ಕ್ರೆಡಿಟ್, HDB ಫೈನಾನ್ಶಿಯಲ್ ಮತ್ತು IDFC ಫಸ್ಟ್ ಬ್ಯಾಂಕ್‌ನಿಂದ ರೂ 3,000 ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು.
ಇದನ್ನೂ ಓದಿ : Acer Nitro 16 ಗೇಮಿಂಗ್ ಲ್ಯಾಪ್ಟಾಪ್ ಬಿಡುಗಡೆ; ಬೆಲೆ 1 ಲಕ್ಷ 15 ಸಾವಿರ