ಸ್ಟಾಕ್‌ಹೋಮ್ (ಸ್ವೀಡನ್) : ಭೌತಶಾಸ್ತ್ರದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಈ ವರ್ಷ ಮೂವರಿಗೆ ನೀಡಲಾಗಿದೆ. ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಮಂಗಳವಾರ ಭೌತಶಾಸ್ತ್ರದ ಪ್ರಶಸ್ತಿ ಘೋಷಿಸಿದ್ದು, ಅಮೆರಿಕದ ಪೆರ್ರಿ ಅಗೋಸ್ಟಿನಿ, ಜರ್ಮನಿಯ ಫೆರೆಂಕ್ ಕ್ರೌಸ್ ಮತ್ತು ಸ್ವೀಡನ್‌ನ ಅನ್ನೆ ಎಲ್.ಹ್ಯೂಲಿಯರ್ ಅವರನ್ನು 2023ನೇ ಸಾಲಿನ ನೊಬೆಲ್ ಪ್ರಶಸ್ತಿಗೆ ಹೆಸರಿಸಲಾಗಿದೆ.
-
BREAKING NEWS
— The Nobel Prize (@NobelPrize) October 3, 2023 " class="align-text-top noRightClick twitterSection" data="
The Royal Swedish Academy of Sciences has decided to award the 2023 #NobelPrize in Physics to Pierre Agostini, Ferenc Krausz and Anne L’Huillier “for experimental methods that generate attosecond pulses of light for the study of electron dynamics in matter.” pic.twitter.com/6sPjl1FFzv
">BREAKING NEWS
— The Nobel Prize (@NobelPrize) October 3, 2023
The Royal Swedish Academy of Sciences has decided to award the 2023 #NobelPrize in Physics to Pierre Agostini, Ferenc Krausz and Anne L’Huillier “for experimental methods that generate attosecond pulses of light for the study of electron dynamics in matter.” pic.twitter.com/6sPjl1FFzvBREAKING NEWS
— The Nobel Prize (@NobelPrize) October 3, 2023
The Royal Swedish Academy of Sciences has decided to award the 2023 #NobelPrize in Physics to Pierre Agostini, Ferenc Krausz and Anne L’Huillier “for experimental methods that generate attosecond pulses of light for the study of electron dynamics in matter.” pic.twitter.com/6sPjl1FFzv
ಪೆರ್ರಿ ಅಗೋಸ್ಟಿನಿ ಅಮೆರಿಕದ ಕೊಲಂಬಸ್ನ ದಿ ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಪ್ರೊಫೆಸರ್ ಆಗಿದ್ದರೆ, ಫೆರೆಂಕ್ ಕ್ರೌಸ್ ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಟ್ ಆಫ್ ಕ್ವಾಂಟಮ್ ಆಪ್ಟಿಕ್ಸ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇನ್ನೊಬ್ಬ ವಿಜ್ಞಾನಿಯಾದ ಅನ್ನೆ ಹ್ಯೂಲಿಯರ್ ಅವರು ಸ್ವೀಡನ್ ಲುಂಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿದ್ದಾರೆ.
ಮಹತ್ವದ ಸಂಶೋಧನೆಗೆ ಗೌರವ: ಅತ್ಯಂತ ಚಿಕ್ಕದಾದ ಪರಮಾಣುವೊಂದು ವಿಭಜನೆಗೊಂಡ ಒಂದು ಸೆಕೆಂಡ್ನಲ್ಲಿ ಎಲೆಕ್ಟ್ರಾನ್ಗಳನ್ನೂ ಕಾಣಬಹುದು ಎಂಬುದನ್ನು ಈ ಮೂವರೂ ವಿಜ್ಞಾನಿಗಳು ಪತ್ತೆ ಮಾಡಿದ್ದರು. ಇದು ಪರಮಾಣುಗಳು ಮತ್ತು ಅಣುಗಳೊಳಗಿನ ಎಲೆಕ್ಟ್ರಾನ್‌ಗಳ ಜಗತ್ತನ್ನು ಅನ್ವೇಷಿಸಲು ಮಾನವ ಜಗತ್ತಿಗೆ ಹೊಸ ಸಾಧನ ನೀಡಿದೆ ಎಂದು ನೊಬೆಲ್ ಪ್ರಶಸ್ತಿ ನೀಡುವ ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಅಭಿಪ್ರಾಯಪಟ್ಟಿದೆ.
ಪರಮಾಣುವೊಂದರಲ್ಲಿ ಎಲೆಕ್ಟ್ರಾನ್‌ಗಳು ಚಲಿಸುವ ಅಥವಾ ಶಕ್ತಿಯನ್ನು ಪರಿವರ್ತಿಸಿಕೊಳ್ಳುವ ಕ್ಷಿಪ್ರ ಪ್ರಕ್ರಿಯೆಯನ್ನು ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ. ಇದು ಮುಂದಿನ ಅಧ್ಯಯನಗಳಿಗೆ ನೆರವಾಗಲಿದೆ ಎಂದು ಅಕಾಡೆಮಿ ಹೇಳಿದೆ.
ಕಳೆದ ವರ್ಷವೂ ಮೂವರು ವಿಜ್ಞಾನಿಗಳು ಜಂಟಿಯಾಗಿ ಭೌತಶಾಸ್ತ್ರದಲ್ಲಿ ನೊಬೆಲ್ ನೀಡಲಾಗಿತ್ತು. ಸಣ್ಣ ಕಣಗಳು ಬೇರ್ಪಟ್ಟರೂ ಪರಸ್ಪರ ಸಂಪರ್ಕವನ್ನು ಉಳಿದಿರುತ್ತವೆ ಎಂದು ಅವರು ಸಾಬೀತುಪಡಿಸಿದ್ದರು. ಈ ಸಂಶೋಧನೆಯನ್ನು ಮೊದಲು ಶಂಕಿಸಲಾಗಿತ್ತಾದರೂ, ಬಳಿಕ ನಡೆದ ಪ್ರಯೋಗದಲ್ಲಿ ಇದು ನಿಜವೆಂದು ಸಾಬೀತಾಗಿತ್ತು.
ನೊಬೆಲ್ ಪ್ರಶಸ್ತಿ ಪ್ರಕಟಣೆ: ಅಕ್ಟೋಬರ್ 4 ರಂದು ರಸಾಯನಶಾಸ್ತ್ರ ವಿಭಾಗದ ಪ್ರಶಸ್ತಿ, ಅಕ್ಟೋಬರ್ 5 ರಂದು ಸಾಹಿತ್ಯ ನೊಬೆಲ್ ಪ್ರಶಸ್ತಿ, 6 ರಂದು ನೊಬೆಲ್ ಶಾಂತಿ ಪ್ರಶಸ್ತಿ, ಅರ್ಥಶಾಸ್ತ್ರ ವಿಭಾಗದ ಪ್ರಶಸ್ತಿಯನ್ನು ಅಕ್ಟೋಬರ್ 9 ರಂದು ಪ್ರಕಟಿಸಲಾಗುವುದು ಎಂದು ಅಕಾಡೆಮಿ ತಿಳಿಸಿದೆ.
1 ಮಿಲಿಯನ್ ಡಾಲರ್ ನಗದು ಬಹುಮಾನ: ನೊಬೆಲ್ ಪ್ರಶಸ್ತಿಯು 1896 ರಲ್ಲಿ ನಿಧನರಾದ ಪ್ರಶಸ್ತಿಯ ಸೃಷ್ಟಿಕರ್ತ, ಸ್ವೀಡಿಷ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರ ಆಶಯದಂತೆ ನೀಡಲಾಗುತ್ತಿದೆ. ಇದು 1 ಮಿಲಿಯನ್ ಡಾಲರ್ ನಗದು ಬಹುಮಾನ ಹೊಂದಿರುತ್ತದೆ. ಡಿಸೆಂಬರ್ 10 ರಂದು ಅಲ್ಫ್ರಡ್ ನೊಬೆಲ್ ಅವರ ವಾರ್ಷಿಕೋತ್ಸವದ ದಿನದಂದು ಓಸ್ಲೋದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿಜೇತರಿಗೆ ಹಸ್ತಾಂತರಿಸಲಾಗುತ್ತದೆ.
ಇದನ್ನೂ ಓದಿ: ಕೋವಿಡ್‌ಗೆ ಲಸಿಕೆಗಳ ಆವಿಷ್ಕಾರ: ಕ್ಯಾಟಲಿನ್ ಕರಿಕೊ, ಡ್ರೂ ವೈಸ್‌ಮನ್‌ಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ