ವಾಷಿಂಗ್ಟನ್: ಕ್ಷುದ್ರ ಗ್ರಹಗಳ ಅಧ್ಯಯನಕ್ಕೆ ಕಳುಹಿಸಬೇಕು ಎಂದುಕೊಂಡಿದ್ದ ’ಸೈಕ್ ಆಸ್ಟ್ರೈಡ್ ಮಿಷನ್’ 2022 ಯೋಜನೆಯನ್ನು ನಾಸಾ ರದ್ದುಗೊಳಿಸಿದೆ. ಕ್ಷುದ್ರಗ್ರಹಗಳಲ್ಲಿ ಲೋಹಗಳ ಬಗ್ಗೆ ಅಧ್ಯಯನ ಮಾಡಲು ಈ ಯೋಜನೆ ರೂಪಿಸಲಾಗಿತ್ತು.
ಬಾಹ್ಯಾಕಾಶ ನೌಕೆಯಗೆ ಅಳವಡಿಸಿಬೇಕಿದ್ದ ಸಾಫ್ಟ್‌ವೇರ್ ಮತ್ತು ಪರೀಕ್ಷಾ ಸಲಕರಣೆಗಳು ಸರಬರಾಜಿನಲ್ಲಿ ವ್ಯತ್ಯಯವಾಗಿದ್ದರಿಂದ ಈ ಯೋಜನೆ ತಡವಾಗಿದೆ. ಈ ಮೊದಲಿನ ಪ್ಲಾನ್ ಪ್ರಕಾರ ಆಗಸ್ಟ್ನಲ್ಲಿ ನೌಕೆ ಉಡ್ಡಯನ ಮಾಡಲು ಯೋಜಿಸಲಾಗಿತ್ತು. ಆದರೆ ಅಗತ್ಯ ಸಲಕರಣೆಗಳ ಪೂರೈಕೆ ತಡವಾಗಿದ್ದರಿಂದ ಸಂಪೂರ್ಣ ಪರೀಕ್ಷೆ ಮಾಡಲಾಗಿಲ್ಲ. ಹೀಗಾಗಿ ಮಿಷನ್ ಕಾರ್ಯಾಚರಣೆ ವಿಳಂಬವಾಗಿದೆ ಎಂದು ನಾಸಾ ತಿಳಿಸಿದೆ.
ದಕ್ಷಿಣ ಕ್ಯಾಲಿಫೋರ್ನಿಯಾದ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿನ ಮಿಷನ್ ತಂಡವು, ’ಸೈಕ್ ಆಸ್ಟ್ರೈಡ್ ಮಿಷನ್ ಉಡ್ಡಯನಕ್ಕೆ ಎಲ್ಲ ಸಿದ್ಧತೆಗಳನ್ನು ಪರೀಕ್ಷೆ ಮಾಡಲು ಆರಂಭಿಸಿದಾಗ, ನೌಕೆಯಲ್ಲಿ ಸಾಫ್ಟ್‌ವೇರ್‌ನ ಟೆಸ್ಟ್‌ಬೆಡ್ ಸಿಮ್ಯುಲೇಟರ್‌ಗಳ ಹೊಂದಾಣಿಕೆ ಸಮಸ್ಯೆ ಕಂಡು ಬಂದಿದ್ದರಿಂದ ನಾಸಾ ಈ ನಿರ್ಧಾರ ಕೈಗೊಂಡಿದೆ.
ಮೇ ತಿಂಗಳಲ್ಲಿ ಅಗತ್ಯವಿರುವ ಕೆಲಸವನ್ನು ಸರಿಹೊಂದಿಸಲು NASA ಉಡಾವಣಾ ದಿನಾಂಕವನ್ನು ಆಗಸ್ಟ್ 1 ರಿಂದ ಸೆಪ್ಟೆಂಬರ್ 20 ಕ್ಕೆ ಬದಲಾಯಿಸಿತು. ಆದರೂ ಎಲ್ಲ ಉಡ್ಡಯನ ಸಂಬಂಧಿತ ಪರೀಕ್ಷೆಗಳು ಸಂಪೂರ್ಣವಾಗದ ಹಿನ್ನೆಲೆ ಉಡ್ಡಯನ ತಡವಾಗಲಿದೆ ಎಂದು ನಾಸಾ ಹೇಳಿದೆ.
ಉಡಾವಣೆ ವಿಳಂಬ ನಿರ್ಧಾರ ಸರಿಯಾದುದಲ್ಲ, ಆದರೆ ನಾಸಾ ಕೈಗೊಂಡಿರುವ ಈ ನಿರ್ಧಾರ ಸರಿಯಾಗಿಯೇ ಇದೆ ಎಂದು ಜೆಪಿಎಲ್ ನಿರ್ದೇಶಕ ಲೆಶಿನ್ ಹೇಳಿದ್ದಾರೆ. ಇದೇ ಅಕ್ಟೋಬರ್ನಲ್ಲಿ ನೌಕೆ ಉಡ್ಡಯನಗೊಂಡಿದ್ದರೆ, ಈ ಮಿಷನ್ 2026ರಲ್ಲಿ ಕ್ಷುದ್ರಗ್ರಹದ ಅಂಗಳ ತಲುಪಲಿತ್ತು. ಆದರೆ ಈ ಯೋಜನೆ ಈಗ 2023 ಇಲ್ಲವೇ 2024ಕ್ಕೆ ಮುಂದೂಡಲ್ಪಟ್ಟಿದೆ. ಈ ಅವಧಿಯಲ್ಲಿ ಸೈಕ್ ಆಸ್ಟ್ರೈಡ್ ಮಿಷನ್ ಉಡ್ಡಯನಗೊಂಡರೆ ನೌಕೆ ಕ್ಷುದ್ರಗ್ರಹವನ್ನು 2029 ಅಥವಾ 2030ಕ್ಕೆ ತಲುಪಲಿದೆ ಎಂದು ನಾಸಾ ಹೇಳಿದೆ.
ಇದನ್ನು ಓದಿ: ಕಡಿಮೆ ವೆಚ್ಚದಲ್ಲಿ ತೈಲವಿಲ್ಲದೆ ಓಡುವ ಪುಟ್ಟ ಕಾರು: ಹೇಗಿದೆ ಗೊತ್ತಾ ಈ ಹೈಬ್ರಿಡ್ ವಾಹನ?