ಕ್ಯಾಲಿಫೋರ್ನಿಯಾ( ಅಮೆರಿಕ): ಬಾಹ್ಯಾಕಾಶ ನೌಕೆಯಲ್ಲಿನ ಕೂಲಂಟ್ ಸೋರಿಕೆ ಹಿನ್ನೆಲೆಯಲ್ಲಿ ನಾಸಾ ಮತ್ತು ರಷ್ಯಾದ ಬಾಹ್ಯಕಾಶ ಸಂಸ್ಥೆ ರಷ್ಯಾದ ಇಬ್ಬರು ಗಗನಯಾತ್ರಿಗಳ ಬಾಹ್ಯಕಾಶಯಾನವನ್ನು ರದ್ದುಗೊಳಿಸಿದ್ದಾರೆ. ಬಾಹ್ಯಾಕಾಶ ಯಾನಕ್ಕೆ ಸಜ್ಜಾಗಿದ್ದ ಸೆರ್ಗೆ ಪ್ರೊಕೊಪಿಯೆವ್ ಮತ್ತು ಡಿಮಿಟ್ರಿ ಪೆಟೆಲಿನ್ಗೆ ಯಾವುದೇ ಅಪಾಯವಾಗಿಲ್ಲ.
ಬಾಹ್ಯಕಾಶ ಕೇಂದ್ರದಲ್ಲಿ ಈ ವೇಳೆ ಗಗನಯಾತ್ರಿಗಳು ಇರಲಿಲ್ಲ. ಲೈವ್ ವೀಡಿಯೊ ಫೀಡ್‌ನಲ್ಲಿ ಸೋರಿಕೆ ಕಾಣಿಸಿಕೊಂಡಾಗ ಗಗನಯಾತ್ರಿಗಳು ಸ್ಪೇಸ್‌ಸೂಟ್‌ಗಳನ್ನು ಧರಿಸಿದ್ದರು. ಏರ್‌ಲಾಕ್ ಅನ್ನು ಒತ್ತಡಕ್ಕೆ ಒಳಪಡಿಸಲಾಗಿತ್ತು. ಹೀಗಾಗಿ ಯಾತ್ರಿಗಳು ತಮ್ಮ ಯಾನವನ್ನು ನಿಲ್ಲಿಸಿದ್ದಾರೆ.
ಹೀಗಾಗುತ್ತಿರುವುದು ಎರಡನೇ ಬಾರಿಯಾಗಿದೆ. ಈ ಹಿಂದೆಯೂ ಕೂಲೆಂಟ್ನಲ್ಲಿ ಸೋರಿಕೆ ಕಂಡು ಬಂದಿದ್ದರಿಂದ ರಷ್ಯಾ ಗಗನಯಾತ್ರಿಗಳ ಬಾಹ್ಯಕಾಶ ಯಾನ ರದ್ದು ಮಾಡಲಾಗಿತ್ತು. ಮೊದಲ ಬಾರಿ ನ. 25ರಂದು ಕೂಡ ಗಗನಯಾತ್ರಿಗಳ ಕೂಲಂಟ್ ಪಂಪ್ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು.
ಬಾಹ್ಯಾಕಾಶದಿಂದ ನೇರ ವೀಡಿಯೊ ಫೀಡ್‌ನಲ್ಲಿ ದ್ರವ ಮತ್ತು ಕಣಗಳ ಸ್ಟ್ರೀಮ್ ಅನ್ನು ಗ್ರೌಂಡ್ ಸ್ಪೇಷಲಿಸ್ಟ್ ತಜ್ಞರು ಗಮನಿಸಿದ್ದಾರೆ. ಜೊತೆಗೆ ಉಪಕರಣಗಳ ಮೇಲಿನ ಒತ್ತಡದ ಕುಸಿತ, ಪ್ರೊಕೊಪಿಯೆವ್ ಮತ್ತು ಪೆಟೆಲಿನ್ ಜೊತೆಗೆ ನಾಸಾ ಗಗನಯಾತ್ರಿ ಫ್ರಾಂಕ್ ರೂಬಿಯೊ ಅವರನ್ನು ಹೊತ್ತೊಯ್ದ ಸೋಯುಜ್ ಎಂಎಸ್-22 ಕ್ಯಾಪ್ಸುಲ್‌ನಿಂದ ಹೊರಹೊಮ್ಮಿತು. ಸೆಪ್ಟೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸೋಯುಜ್ ಕ್ಯಾಪ್ಸುಲ್‌ನಿಂದ ಸೋರಿಕೆ ಮುಂದುವರೆದಿದೆ.
ಗಗನಯಾತ್ರಿಗಳು ಏರ್‌ಲಾಕ್‌ಗೆ ಒತ್ತಡವನ್ನು ಪುನಃಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಬಾಹ್ಯಾಕಾಶ ಉಡುಪುಗಳನ್ನು ತೆಗೆದು ಮತ್ತೆ ಬಾಹ್ಯಾಕಾಶ ಪ್ರದೇಶಕ್ಕೆ ಪುನಃ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಾಸಾ ಹೇಳಿದೆ.
ಇದನ್ನೂ ಓದಿ: ಚಂದ್ರನ ದೂರಗಾಮಿ ಕಕ್ಷೆ ಪ್ರವೇಶಿಸಿದ ನಾಸಾದ ಓರಿಯನ್ ಕ್ಯಾಪ್ಸೂಲ್