ETV Bharat / science-and-technology

ನಮ್ಮ ವಿಜ್ಞಾನಿಗಳು ಮಿಲಿಯನೇರ್​ಗಳಲ್ಲ, ಇದು ಸಮರ್ಪಣಾಭಾವದ ಸಾಧನೆ: ಇಸ್ರೊ ಮಾಜಿ ಅಧ್ಯಕ್ಷ ನಾಯರ್

ಇಸ್ರೊ ವಿಜ್ಞಾನಿಗಳಲ್ಲಿ ಯಾರೂ ಕೋಟ್ಯಧಿಪತಿಗಳಿಲ್ಲ, ಆದರೆ ಅವರೆಲ್ಲರೂ ಮನಃಪೂರ್ತಿಯಾಗಿ ತಮ್ಮ ಧ್ಯೇಯಕ್ಕೆ ಸಮರ್ಪಿತರಾಗಿದ್ದಾರೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಜಿ.ಮಾಧವನ್ ನಾಯರ್ ಹೇಳಿದ್ದಾರೆ.

There are no millionaires among ISRO scientists

author img

By ETV Bharat Karnataka Team

Published : Aug 24, 2023, 5:12 PM IST

ತಿರುವನಂತಪುರಂ : ಭಾರತದ ಚಂದ್ರಯಾನ-3 ಮಿಷನ್​ ಯಶಸ್ವಿಯಾಗಿರುವುದಕ್ಕೆ ಇಸ್ರೋ ಮಾಜಿ ಅಧ್ಯಕ್ಷ ಜಿ.ಮಾಧವನ್ ನಾಯರ್ ಸಂತಸ ವ್ಯಕ್ತಪಡಿಸಿದರು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ವಿಜ್ಞಾನಿಗಳು ಪಡೆಯುವ ವೇತನದ ಐದನೇ ಒಂದು ಭಾಗದಷ್ಟು ವೇತನವನ್ನು ಮಾತ್ರ ನಮ್ಮ ವಿಜ್ಞಾನಿಗಳು ಪಡೆಯುತ್ತಿದ್ದಾರೆ. ಆದರೂ ನಮ್ಮ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಇಷ್ಟು ದೊಡ್ಡ ಮಟ್ಟದ ಐತಿಹಾಸಿಕ ಯಶಸ್ಸನ್ನು ಸಾಧಿಸಿದ್ದಾರೆ ಎಂದು ಹೇಳಿದ್ದಾರೆ.

ಇಸ್ರೋದ ವಿಜ್ಞಾನಿಗಳು ಕಡಿಮೆ ವೇತನ ಪಡೆಯುತ್ತಿರುವುದು ಬಾಹ್ಯಾಕಾಶ ಪರಿಶೋಧನೆಗೆ ಅವರು ಕಡಿಮೆ ವೆಚ್ಚದ ಸಂಶೋಧನೆಗಳನ್ನು ಕಂಡುಹಿಡಿಯಲು ಒಂದು ಕಾರಣವಾಗಿದೆ ಎಂಬುದು ಮಾಧವನ್ ನಾಯರ್ ಅವರ ಅಭಿಪ್ರಾಯವಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶವನ್ನು ಅನ್ವೇಷಿಸುವ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಇತಿಹಾಸದ ಬಗ್ಗೆ ಮಾತನಾಡಿದ ಅವರು, "ಇಸ್ರೋದ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಇತರ ಸಿಬ್ಬಂದಿಗೆ ನೀಡಲಾಗುವ ವೇತನವು ಜಾಗತಿಕವಾಗಿ ನೀಡಲಾಗುವ ವೇತನದ ಐದನೇ ಒಂದು ಭಾಗದಷ್ಟೂ ಇಲ್ಲ. ಅದೂ ಸಹ ಒಂದು ರೀತಿಯ ಅನುಕೂಲವನ್ನೇ ಮಾಡಿದೆ" ಎಂದು ನಾಯರ್ ತಿಳಿಸಿದರು.

ಇಸ್ರೋ ವಿಜ್ಞಾನಿಗಳಲ್ಲಿ ಯಾರೂ ಮಿಲಿಯನೇರ್​ಗಳಿಲ್ಲ ಮತ್ತು ಅವರು ಯಾವಾಗಲೂ ತುಂಬಾ ಸಾಮಾನ್ಯ ಮತ್ತು ಸರಳ ಜೀವನವನ್ನು ನಡೆಸುತ್ತಾರೆ ಎಂದು ಅವರು ಹೇಳಿದರು. "ಅವರು ವಾಸ್ತವದಲ್ಲಿ ಹಣದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಆದರೆ ಮನಃಪೂರ್ತಿಯಾಗಿ ತಮ್ಮ ಧ್ಯೇಯಕ್ಕೆ ಸಮರ್ಪಿತರಾಗಿದ್ದಾರೆ. ಹೀಗಾಗಿ ನಾವು ಇಷ್ಟು ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿದೆ" ಎಂದು ನಾಯರ್ ಹೇಳಿದರು.

"ನಾವು ಒಂದರ ಅನುಭವದ ಮೇಲೆ ಮತ್ತೊಂದನ್ನು ನಿರ್ಮಿಸಲು ಪ್ರಯತ್ನಿಸಿದ್ದೇವೆ. ನಾವು ಹಿಂದೆ ಕಲಿತ ಅನುಭವವನ್ನು ನಂತರದ ಮಿಷನ್​ಗೆ ಬಳಸಿದ್ದೇವೆ. ವಾಸ್ತವವಾಗಿ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್​ಗಾಗಿ ನಾವು ಸುಮಾರು 30 ವರ್ಷಗಳ ಹಿಂದೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದೆವು. ನಂತರ ಜಿಎಸ್ಎಲ್​ವಿ ಗೂ ಅದೇ ಎಂಜಿನ್ ಬಳಸುತ್ತಿದ್ದೇವೆ" ಎಂದು ನಾಯರ್ ಮಾಹಿತಿ ನೀಡಿದರು.

"ಭಾರತವು ತನ್ನ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಸ್ವದೇಶಿ ನಿರ್ಮಿತ ತಂತ್ರಜ್ಞಾನವನ್ನು ಬಳಸುವುದರಿಂದ ಅದರ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಗಿದೆ. ಇತರ ದೇಶಗಳ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಹೋಲಿಸಿದರೆ ಭಾರತದ ಬಾಹ್ಯಾಕಾಶ ಕಾರ್ಯಾಚರಣೆಯ ವೆಚ್ಚವು ಶೇಕಡಾ 50 ರಿಂದ 60 ರಷ್ಟು ಕಡಿಮೆಯಾಗಿದೆ. ಚಂದ್ರಯಾನ -3 ರ ಯಶಸ್ಸು ಭಾರತದ ಗ್ರಹಗಳ ಅನ್ವೇಷಣೆಯನ್ನು ಪ್ರಾರಂಭಿಸುವ ಮೊದಲ ಹೆಜ್ಜೆಯಾಗಿದೆ" ಎಂದು ಅವರು ತಿಳಿಸಿದರು.

ದೇಶವು ಈಗಾಗಲೇ ಯುರೋಪ್ ಮತ್ತು ಅಮೆರಿಕದೊಂದಿಗೆ ಹಲವಾರು ವಾಣಿಜ್ಯ ಒಪ್ಪಂದಗಳನ್ನು ಹೊಂದಿದೆ ಮತ್ತು ಚಂದ್ರಯಾನ -3 ರ ಯಶಸ್ಸಿನೊಂದಿಗೆ ಈ ವಲಯ ಬೆಳವಣಿಗೆ ಹೊಂದಲಿದೆ. ಖಂಡಿತವಾಗಿಯೂ ಜಗತ್ತಿನ ರಾಷ್ಟ್ರಗಳು ನಮ್ಮ ತಾಂತ್ರಿಕ ಸಾಮರ್ಥ್ಯ ಮತ್ತು ನಮ್ಮ ಉಡಾವಣಾ ವ್ಯವಸ್ಥೆ ಮತ್ತು ಬಾಹ್ಯಾಕಾಶ ನೌಕೆಯ ಗುಣಮಟ್ಟವನ್ನು ಸ್ವೀಕರಿಸಲಿದ್ದಾರೆ. ಅಂತರರಾಷ್ಟ್ರೀಯ ಸಹಕಾರವು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಕಾರ್ಯಸೂಚಿಯಲ್ಲಿದೆ ಮತ್ತು ಮುಂದಿನ ದಿನಗಳಲ್ಲಿ ಅದನ್ನು ಬಲಪಡಿಸಲಾಗುವುದು" ಎಂದು ನಾಯರ್‌ ಹೇಳಿದರು.

ಇದನ್ನೂ ಓದಿ : ಚಂದ್ರಯಾನ-3: ಚಂದ್ರನ ದಕ್ಷಿಣ ಧ್ರುವದತ್ತ ಪಯಣದ ಕಾಲಾನುಕ್ರಮ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.