ETV Bharat / science-and-technology

ಐಎಎಫ್​​ ಉಪಾಧ್ಯಕ್ಷರಾಗಿ ಇಸ್ರೋ ವಿಜ್ಞಾನಿ ಅನಿಲ್ ಕುಮಾರ್ ಆಯ್ಕೆ

ಇಸ್ರೋ ಹಿರಿಯ ವಿಜ್ಞಾನಿ ಎಕೆ ಅನಿಲ್ ಕುಮಾರ್ ಅವರು ಅಂತಾರಾಷ್ಟ್ರೀಯ ಆಸ್ಟ್ರೋನಾಟಿಕಲ್ ಫೆಡರೇಶನ್ (ಐಎಎಫ್) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ISRO scientist Anil Kumar elected VP of International Astronautical Federation
ಐಎಎಫ್​​ ಉಪಾಧ್ಯಕ್ಷರಾಗಿ ಇಸ್ರೋ ವಿಜ್ಞಾನಿ ಅನಿಲ್ ಕುಮಾರ್ ಆಯ್ಕೆ
author img

By

Published : Sep 29, 2022, 3:31 PM IST

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಎಕೆ ಅನಿಲ್ ಕುಮಾರ್ ಅವರು ಅಂತಾರಾಷ್ಟ್ರೀಯ ಆಸ್ಟ್ರೋನಾಟಿಕಲ್ ಫೆಡರೇಶನ್ (ಐಎಎಫ್) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಇಸ್ರೋ ತಿಳಿಸಿದೆ. ಅನಿಲ್ ಕುಮಾರ್ ಅವರು ಪ್ರಸ್ತುತ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC) ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಆಸ್ಟ್ರೋನಾಟಿಕಲ್ ಫೆಡರೇಶನ್ 1951ರಲ್ಲಿ ಸ್ಥಾಪಿತವಾಗಿದ್ದು, 72 ರಾಷ್ಟ್ರಗಳಲ್ಲಿ 433 ಸದಸ್ಯರನ್ನು ಹೊಂದಿರುವ ವಿಶ್ವದ ಪ್ರಮುಖ ಬಾಹ್ಯಾಕಾಶ ಸಂಸ್ಥೆಯಾಗಿದೆ. ಐಎಎಫ್ ಗಗನಯಾತ್ರಿಗಳ ಅಭಿವೃದ್ಧಿಗೆ ಪ್ರೋತ್ಸಾಹಿಸುವುದಲ್ಲದೇ, ಬಾಹ್ಯಾಕಾಶ ಸಂಬಂಧಿತ ವೈಜ್ಞಾನಿಕ ಮತ್ತು ತಾಂತ್ರಿಕತೆಗೆ ಬೆಂಬಲ ನೀಡುತ್ತದೆ ಎಂದು ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಹೇಳಿದೆ.

'ಅನಿಲ್ ಕುಮಾರ್ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿರುವುದು ಅಂತಾರಾಷ್ಟ್ರೀಯ ಸಹಯೋಗವನ್ನು ಉತ್ತೇಜಿಸುವ ಹಾಗೂ ಸಹಕಾರ ನೀಡುವ ಇಸ್ರೋದ ಬಾಹ್ಯಾಕಾಶ ಪ್ರಯೋಗಗಳಿಗೆ ದೊರೆತ ಮನ್ನಣೆಯಾಗಿದೆ' ಎಂದು ಬೆಂಗಳೂರು ಪ್ರಧಾನ ಕಚೇರಿಯ ಇಸ್ರೋ ಟ್ವೀಟ್‌ ಮೂಲಕ ಸಂತಸ ವ್ಯಕ್ತಪಡಿಸಿದೆ.

ಇದನ್ನೂ ಓದಿ: ದಿವ್ಯಾಂಗರ ಆಶಾಕಿರಣವಾಗಿ ಬರಲಿವೆ ಅತ್ಯಾಧುನಿಕ ಬುದ್ಧಿವಂತ ಕಾಲು.. ಇಸ್ರೋ ಅಭಿವೃದ್ಧಿ ಪಡಿಸಿದ ಈ ಕಾಲುಗಳ ವಿಶೇಷತೆ ಏನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.