ಬೀಜಿಂಗ್: ಕೋವಿಡ್-19 ಸೋಂಕು ಟೆಸ್ಟ್ಗಾಗಿ ಸ್ವ್ಯಾಬ್ ಸ್ಯಾಂಪಲ್ ತೆಗೆದುಕೊಳ್ಳುವ ರೋಬೋಟ್ ಒಂದನ್ನು ಚೀನಾದಲ್ಲಿ ಆವಿಷ್ಕರಿಸಲಾಗಿದೆ. ಸ್ವ್ಯಾಬ್ ಸ್ಯಾಂಪಲ್ ತೆಗೆದುಕೊಳ್ಳುವ ಬರಿಸ್ತಾ ಎಂಬ ಹೆಸರಿನ ರೋಬೋಟ್ ಸೇರಿದಂತೆ ಡಾನ್ಸ್ ಮಾಡುವ ಸೈಬರ್ ಡಾಗ್ ರೋಬೋಟ್ಗಳನ್ನು ವಾರ್ಷಿಕ ವಿಶ್ವ ರೋಬೋಟ್ ಸಮ್ಮೇಳನದ ಉದ್ಘಾಟನೆಯಲ್ಲಿ ಪ್ರದರ್ಶಿಸಲಾಯಿತು.
ಚೀನಾದಲ್ಲಿ ಕೊರೊನಾವೈರಸ್ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಪ್ರಮಾಣದಲ್ಲಿ ಕೋವಿಡ್ ಟೆಸ್ಟ್ ನಡೆಸಲು ಚೀನಾ ಮುಂದಾಗಿದೆ. ಹೀಗಾಗಿ ಗಂಟಲು ದ್ರವದ ಮಾದರಿ ಸಂಗ್ರಹಿಸಲು ಈಗ ಚೀನಾ ರೋಬೋಟ್ಗಳನ್ನು ತಯಾರಿಸಿದೆ. ದೇಶದ ಉತ್ತರ ಭಾಗದ ನಗರ ಶೆನ್ಯಾಂಗ್ನಲ್ಲಿ ಈ ರೋಬೋಟಿಕ್ ಆರ್ಮ್ ತಯಾರಿಸಲಾಗಿದೆ.
-
VIDEO: A robotic arm built to collect human samples for #COVID19 screening, a barista robot and dozens of dancing cyber-dogs were among the highlights of the annual World Robot Conference that opened in Beijing. pic.twitter.com/ytOKvxzQ1W
— AFP News Agency (@AFP) August 19, 2022 " class="align-text-top noRightClick twitterSection" data="
">VIDEO: A robotic arm built to collect human samples for #COVID19 screening, a barista robot and dozens of dancing cyber-dogs were among the highlights of the annual World Robot Conference that opened in Beijing. pic.twitter.com/ytOKvxzQ1W
— AFP News Agency (@AFP) August 19, 2022VIDEO: A robotic arm built to collect human samples for #COVID19 screening, a barista robot and dozens of dancing cyber-dogs were among the highlights of the annual World Robot Conference that opened in Beijing. pic.twitter.com/ytOKvxzQ1W
— AFP News Agency (@AFP) August 19, 2022
ಪ್ಲಾಸ್ಟಿಕ್ ಕವರ್ನಿಂದ ಹೊದಿಸಲಾದ ರೋಬೋಟಿಕ್ ಆರ್ಮ್ ಕಿಂಡಿಯೊಂದರ ಮೂಲಕ ಹೊರ ಬಂದು ವ್ಯಕ್ತಿಯ ಗಂಟಲಿನೊಳಗೆ ಹೋಗಿ ಟಾನ್ಸಿಲ್ಸ್ ಬಳಿಯ ಗಂಟಲು ದ್ರವವನ್ನು ಸಂಗ್ರಹಿಸುತ್ತದೆ. ದೂರದಲ್ಲಿ ನಿಂತಿರುವ ಮನುಷ್ಯನೊಬ್ಬ ಇದನ್ನು ರಿಮೋಟ್ ಆಗಿ ನಿಯಂತ್ರಿಸುತ್ತಾನೆ. ರೋಬೋಟ್ಗೆ ಅಳವಡಿಸಿರುವ ಕ್ಯಾಮೆರಾದ ದೃಶ್ಯಾವಳಿಗಳನ್ನು ಆಧರಿಸಿ ರೋಬೋಟ್ ಅನ್ನು ಹೇಗೆ ಬೇಕಾದರೂ ಚಲಿಸುವಂತೆ ಮಾಡಬಹುದು.
ಒಂದು ವರ್ಷದ ಹಿಂದೆ ವುಹಾನ್‌ನಲ್ಲಿ ಮೊಟ್ಟ ಮೊದಲಿಗೆ ವೈರಸ್ ಕಾಣಿಸಿಕೊಂಡಿತ್ತು. ಸದ್ಯ ಚೀನಾ ವೈರಸ್ ಹರಡುವಿಕೆಯನ್ನು ಸಾಕಷ್ಟು ಮಟ್ಟಿಗೆ ನಿಯಂತ್ರಣಕ್ಕೆ ತಂದಿದೆ.
ಇದನ್ನು ಓದಿ:ಈ ದೇಶದಲ್ಲಿ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಶೇಕಡಾ 25 ರಷ್ಟು ಕುಸಿತ