ಕೋಲ್ಕತ್ತ: 25ವರ್ಷಗಳ ನಂತರ ಭಾರತ ಹೇಗಿರುತ್ತದೆ ಎಂಬುದರ ಚಿತ್ರವನ್ನು ರಚಿಸುವ ಮೂಲಕ "ಗೂಗಲ್‌ಗಾಗಿ ಡೂಡಲ್" ಪ್ರಶಸ್ತಿಯನ್ನು ಗೆದ್ದು ಎಲ್ಲರ ಹೃದಯದಲ್ಲಿಒ ಸ್ಥಾನ ಪಡೆದಿರುವ ಒಂಬತ್ತು ವರ್ಷದ ಶ್ಲೋಕ್ ಮುಖರ್ಜಿ ಈಗಾಗಲೇ ವಿಶ್ವದಾದ್ಯಂತ ಹೆಸರು ಮಾಡಿದ್ದಾರೆ ಮತ್ತು ಅಭಿನಂದನೆಗಳ ಮಹಾಪೂರವೆ ಹರಿದು ಬರುತ್ತಿದೆ.
-
New Google Doodle has been released: "Doodle for Google 2022 - India Winner" :)#google #doodle #designhttps://t.co/Fh4fOqQ4je pic.twitter.com/RPGalgoLRc
— Google Doodles EN (@Doodle123_EN) November 13, 2022 " class="align-text-top noRightClick twitterSection" data="
">New Google Doodle has been released: "Doodle for Google 2022 - India Winner" :)#google #doodle #designhttps://t.co/Fh4fOqQ4je pic.twitter.com/RPGalgoLRc
— Google Doodles EN (@Doodle123_EN) November 13, 2022New Google Doodle has been released: "Doodle for Google 2022 - India Winner" :)#google #doodle #designhttps://t.co/Fh4fOqQ4je pic.twitter.com/RPGalgoLRc
— Google Doodles EN (@Doodle123_EN) November 13, 2022
ಈ ಸಂದರ್ಭದಲ್ಲಿ ಈಟಿವಿ ಭಾರತ್ನೊಂದಿಗೆ ಮಾತನಾಡಿದ ಶ್ಲೋಕ್ ಅವರ ತಾಯಿ ಪರಿಮಿತ ಚಟ್ಟೋಪಾಧ್ಯಾಯ ‘‘ಶ್ಲೋಕ್ ರಚಿಸಿದ ಚಿತ್ರವು ಇಡೀ ಜಗತ್ತು ನೋಡಿದೆ, ಮನೆಯಲ್ಲಿ ಎಲ್ಲರೂ ಸಂಭ್ರಮದಿಂದ ಇದ್ದಾರೆ , ಆದರೆ ಮನೆಯಲ್ಲಿನ ಸಂಭ್ರಮವನ್ನು ಅರ್ಥಮಾಡಿಕೊಳ್ಳಲು ಶ್ಲೋಕ್ ಇನ್ನೂ ಚಿಕ್ಕವನು, ತುಂಬಾ ವಿಭಿನ್ನವಾಗಿ ಚಿಂತಿಸುತ್ತಾನೆ ಅದಕ್ಕಾಗಿಯೇ ಈ ಚಿತ್ರವನ್ನು ರಚಿಸಿದ್ದಾನೆ ಎಂದು ಹೇಳಿದರು.
ಚಿತ್ರ ಬಿಡಿಸಲು ಸ್ಫೂರ್ತಿ: "ನಾನು ನೋಟ್ಬುಕ್ನಲ್ಲಿ ಆಯುರ್ವೇದ, ಬಾಹ್ಯಾಕಾಶ ಪ್ರಯಾಣ ಮತ್ತು ಪ್ರಕೃತಿಯ ವಿಷಯಗಳ ಮೇಲೆ ಚಿತ್ರಿಸಿದ್ದೇನೆ. ಪ್ರತಿ ವಿಷಯಕ್ಕೆ, ನನ್ನ ಕಲ್ಪನೆಯಿಂದ ಚಿತ್ರವನ್ನು ಬಿಡಿಸಿದ್ದೇನೆ. ನಾನು ಭಾರತವನ್ನು ವಿಶ್ವಕ್ಕೆ ತೋರಿಸಲು ಬಯಸುತ್ತೇನೆ” ಎಂದು ಶ್ಲೋಕ್ ತಮ್ಮ ಯಶಸ್ಸಿನ ಹಿಂದಿನ ಶ್ರಮವನ್ನು ನೆನಪಿಸಿಕೊಂಡರು.
ಶ್ಲೋಕ್ ಮುಖರ್ಜಿಯ ಕನಸು ಸಾಕಷ್ಟು ದೊಡ್ಡದಾಗಿದ್ದು, ಭವಿಷ್ಯದಲ್ಲಿ ಮೂರು ರೀತಿಯ ವೃತ್ತಿಗಳಲ್ಲಿ ತನ್ನನ್ನು ತಾನು ನೋಡಲು ಬಯಸುತ್ತಾನೆ, ಮೊದಲು ಕಲಾವಿದನಾಗಿ, ಎರಡನೇಯದು ಗಿಟಾರ್ ವಾದಕನಾಗಿ ಮತ್ತು ಮೂರನೇ ವಿಜ್ಞಾನಿಯಾಗ ಬಯಸುತ್ತಾನೆ ಎಂದು ಹೇಳಿದರು. ಶ್ಲೋಕ್ ಬಿಡಿಸಿದ ಚಿತ್ರಕ್ಕೆ ದೇಶದಾದ್ಯಂತ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಟ್ರಂಪ್ ಟ್ವಿಟರ್ ಖಾತೆ ಮರು ಸ್ಥಾಪಿಸಬೇಕೇ?: ಸಮೀಕ್ಷೆ ಆರಂಭಿಸಿದ ಎಲೋನ್ ಮಸ್ಕ್