ನವದೆಹಲಿ: ಚಂದ್ರಯಾನ, ಸೂರ್ಯಯಾನ ಯೋಜನೆಗಳ ಯಶಸ್ಸಿನ ಮೂಲಕ ನಭೋಮಂಡಲದಲ್ಲಿ ಇತಿಹಾಸ ನಿರ್ಮಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈಗ ಮತ್ತೊಂದು ಮಹತ್ವದ ಯೋಜನೆಗೆ ಸಜ್ಜಾಗುತ್ತಿದೆ. ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮಾನವಸಹಿತ ಗಗನಯಾನ ಮಿಷನ್‌ನ ಮೊದಲ ಪರೀಕ್ಷಾರ್ಥ ಹಾರಾಟವನ್ನು ಅಕ್ಟೋಬರ್ 21 ರಂದು ನಡೆಸಲಿದೆ ಎಂದು ಸೋಮವಾರ ತಿಳಿಸಿತು.
-
Mission Gaganyaan:
— ISRO (@isro) October 16, 2023 " class="align-text-top noRightClick twitterSection" data="
The TV-D1 test flight is scheduled for
🗓️October 21, 2023
🕛between 7 am and 9 am
🚩from SDSC-SHAR, Sriharikota #Gaganyaan pic.twitter.com/7NbMC4YdYD
">Mission Gaganyaan:
— ISRO (@isro) October 16, 2023
The TV-D1 test flight is scheduled for
🗓️October 21, 2023
🕛between 7 am and 9 am
🚩from SDSC-SHAR, Sriharikota #Gaganyaan pic.twitter.com/7NbMC4YdYDMission Gaganyaan:
— ISRO (@isro) October 16, 2023
The TV-D1 test flight is scheduled for
🗓️October 21, 2023
🕛between 7 am and 9 am
🚩from SDSC-SHAR, Sriharikota #Gaganyaan pic.twitter.com/7NbMC4YdYD
ಟಿವಿ-ಡಿ1 ಪರೀಕ್ಷಾ ಹಾರಾಟವನ್ನು ಅಕ್ಟೋಬರ್ 21 ರಂದು ಶ್ರೀಹರಿಕೋಟಾದ ಎಸ್‌ಡಿಎಸ್‌ಸಿ-ಎಸ್ಎಚ್ಎಆರ್ನಿಂದ ಬೆಳಿಗ್ಗೆ 7 ರಿಂದ 9 ರವರೆಗೆ ನಿಗದಿಪಡಿಸಲಾಗಿದೆ. ಇದರಲ್ಲಿ ಮೂವರು ಗಗನಯಾತ್ರಿಗಳು ಹಾರಾಟ ನಡೆಸಲಿದ್ದಾರೆ ಎಂದು ಇಸ್ರೋ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ.
2024 ರ ಅಂತ್ಯದ ವೇಳೆಗೆ ಮೂವರು ಗಗನಯಾತ್ರಿಗಳನ್ನು ಕಡಿಮೆ ಭೂಮಿಯ ಕಕ್ಷೆಗೆ ಸೇರಿಸುವ ಪ್ರಯತ್ನದ ಭಾಗವಾಗಿರು ಈ ಉಡಾವಣೆ ಮಹತ್ವದ್ದಾಗಿದೆ. ಪರೀಕ್ಷಾ ಹಾರಾಟವು ಕ್ಯಾಪ್ಸುಲ್ ಮಾಡ್ಯೂಲ್ನಲ್ಲಿನ ಒತ್ತಡವನ್ನು ತಗ್ಗಿಸುವ ವ್ಯವಸ್ಥೆಯ ಪರೀಕ್ಷೆ ನಡೆಸಲಾಗುವುದು ಎಂದು ಇಸ್ರೋ ತಿಳಿಸಿದೆ.
ಗಗನಯಾನ ಯೋಜನೆಯ ನಾಲ್ಕು ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ ತಿಳಿಸಿದ್ದರು. ಅಕ್ಟೋಬರ್ 21 ರಂದು ಟಿವಿ-ಡಿ1ನ ಮೊದಲ ಹಾರಾಟ ಪ್ರಯೋಗ ನಡೆಯಲಿದೆ. ಇದಾದ ಬಳಿಕ ಟಿವಿ-ಡಿ2 , ಟಿವಿ-ಡಿ3 ಮತ್ತು ಟಿವಿ-ಡಿ4 ಇನ್ನೂ ಮೂರು ಪ್ರಯೋಗಗಳು ನಡೆಯಲಿವೆ.
ಘನ, ದ್ರವ ಮತ್ತು ಕ್ರಯೋಜೆನಿಕ್ನ ಮೂರು ಹಂತದೊಂದಿಗೆ ಮಾಡಿರುವ 143 ಅಡಿ ಎತ್ತರದ ಪರೀಕ್ಷಾ ಸಿಬ್ಬಂದಿ ಮಾಡ್ಯೂಲ್ (ಸಿಎಂ)ನಲ್ಲಿ ಮೂವರು ಗಗನಯಾನಿಗಳು ಇರುತ್ತಾರೆ. ಇದು ಒತ್ತಡ ರಹಿತ ಮಾಡ್ಯೂಲ್ ಆಗಿದ್ದು, ಬಾಹುಬಲಿ ಎಂದೇ ಖ್ಯಾತಿಯಾದ ಮಾರ್ಕ್-3 (ಎಲ್ವಿಎಂLVM3) ರಾಕೆಟ್ ಮೂಲಕ ಇದನ್ನು ಉಡಾವಣೆ ಮಾಡಲಾಗುತ್ತದೆ.
ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಬಳಿಕ, ಅಲ್ಲಿಂದ ಕ್ರ್ಯೂ ಎಸ್ಕೇಪ್ ಹಂತಗಳನ್ನು ಪರೀಕ್ಷಿಸಲಾಗುತ್ತದೆ. ಗಗನಯಾನಿಗಳು ಮರಳಿ ಭೂಮಿಗೆ ಲ್ಯಾಂಡ್ ಆಗಲು ನೌಕೆಯನ್ನು ಸ್ಥಿರಗೊಳಿಸುವ ಮತ್ತು ನಿಧಾನವಾಗಿ ಅದು ಇಳಿಯುವಂತೆ ವಿನ್ಯಾಸಗೊಳಿಸಿದ ಪ್ಯಾರಾಚೂಟ್‌ಗಳು ಮತ್ತು ರಿಕವರಿ ಏಡ್ ಆಕ್ಚುಯೇಶನ್ ಸಿಸ್ಟಮ್‌ಗಳು ಸೇರಿದಂತೆ ಮಿಷನ್‌ನ ಇತರ ಘಟಕಗಳನ್ನು ಈ ಹಾರಾಟ ಪರೀಕ್ಷೆಗೆ ಒಳಪಡಿಸಲಿದೆ.
ಕ್ರ್ಯೂ ಎಸ್ಕೇಪ್ ಸಿಸ್ಟಮ್ (ಸಿಇಎಸ್) ವಾಪಸ್ ಇಳಿಯುವಾಗ ಅಸಹಜ ಘಟನೆಗಳು ಸಂಭವಿಸಿದಲ್ಲಿ, ಭೂಮಿಯಿಂದ ಅಥವಾ ಸಮುದ್ರದಿಂದ ಸಿಬ್ಬಂದಿ ಸುರಕ್ಷಿತವಾಗಿ ಪಾರಾಗುವ ಹಾಗೆ ಮಾಡ್ಯೂಲ್ ಅನ್ನು ಸಿದ್ಧಪಡಿಸಲಾಗಿದೆ. ಈ ಪರೀಕ್ಷಾ ನೌಕೆಯು ಗಗನಯಾನ ಯೋಜನೆಯ ಆರಂಭಿಕ ಹೆಜ್ಜೆಯಾಗಿದೆ.