ನ್ಯೂಯಾರ್ಕ್ : ಅಮೆರಿಕ ಮೂಲದ ಖಾಸಗಿ ಕಂಪನಿ ಆಸ್ಟ್ರೋಬೋಟಿಕ್ ಟೆಕ್ನಾಲಜಿ ಚಂದ್ರನ ಅಧ್ಯಯನಕ್ಕಾಗಿ ತಯಾರಿಸಿ ಉಡಾಯಿಸಲಾದ ಪೆರೆಗ್ರಿನ್ ಲೂನಾರ್ ಬಾಹ್ಯಾಕಾಶ ನೌಕೆ ಇಂಧನ ಸೋರಿಕೆಯಿಂದಾಗಿ ಲ್ಯಾಂಡ್ ಆಗುವ ಸಾಧ್ಯತೆಯೇ ಕ್ಷೀಣಿಸಿದೆ.
ಜನವರಿ 8 ರಂದು ಪೆರೆಗ್ರಿನ್ ಲೂನಾರ್ ಲ್ಯಾಂಡರ್ ಯುನೈಟೆಡ್ ಲಾಂಚ್ ಅಲೈಯನ್ಸ್ನ ಹೊಚ್ಚ ಹೊಸ ರಾಕೆಟ್ ವಲ್ಕನ್ ಸೆಂಟೌರ್ ಮೂಲಕ ನಸುಕಿನ ಜಾವ 2:18 ಕ್ಕೆ (7:18 ಜಿಎಂಟಿ) ಫ್ಲೋರಿಡಾದ ಕೇಪ್ ಕೆನವೆರಲ್ ಬಾಹ್ಯಾಕಾಶ ಪಡೆ ನಿಲ್ದಾಣದಿಂದ ಉಡಾವಣೆ ಮಾಡಲಾಗಿದೆ. ಇದಾದ ಕೆಲ ಹೊತ್ತಿನಲ್ಲಿ ನೌಕೆಯಲ್ಲಿನ ಇಂಧನ ಸೋರಿಕೆಯಾಗಿದೆ. ಇದರಿಂದ ನೌಕೆಯು ಹಿಡಿತ ಕಳೆದುಕೊಂಡಿದೆ.
-
Update #6 for Peregrine Mission One: pic.twitter.com/lXh9kcubXs
— Astrobotic (@astrobotic) January 9, 2024 " class="align-text-top noRightClick twitterSection" data="
">Update #6 for Peregrine Mission One: pic.twitter.com/lXh9kcubXs
— Astrobotic (@astrobotic) January 9, 2024Update #6 for Peregrine Mission One: pic.twitter.com/lXh9kcubXs
— Astrobotic (@astrobotic) January 9, 2024
ಇಂಧನ ಟ್ಯಾಂಕರ್ ಒಡೆದಿರುವ ಸಾಧ್ಯತೆ ಇದೆ. ನೌಕೆಯಲ್ಲಿನ ಸೌರ ಫಲಕವು ಸೂರ್ಯನಿಂದ ಸೌರ ಶಕ್ತಿಯನ್ನು ಉತ್ಪಾದಿಸಲು ಕೂಡ ಸಾಧ್ಯವಾಗುತ್ತಿಲ್ಲ. ಫ್ಲೈಟ್ ಕಂಟ್ರೋಲರ್‌ಗಳು ಸಂಪರ್ಕ ಕಳೆದುಕೊಂಡಿವೆ. ನೌಕೆ ಲ್ಯಾಂಡ್ ಆಗುವ ಅವಕಾಶವಿಲ್ಲ ಎಂದು ಆಸ್ಟ್ರೋಬಾಟಿಕ್ ತಿಳಿಸಿದೆ.
ಹೀಲಿಯಂನ ಹೆಚ್ಚಿನ ಒತ್ತಡದಿಂದಾಗಿ ಇಂಧನ ಟ್ಯಾಂಕ್ ಒಡೆದಿರಬಹುದು. ಇದರಿಂದಾಗಿ ಹಾರಾಟದ ಕೆಲವೇ ಗಂಟೆಗಳಲ್ಲಿ ಅದು ನಿಯಂತ್ರಣ ಕಳೆದುಕೊಂಡಿದೆ. ಇದರ ನಿಖರ ಕಾರಣವನ್ನು ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ನೌಕೆಯನ್ನು ಉಡಾವಣೆ ಮಾಡಲು ಬಳಸಲಾದ ವಲ್ಕನ್ ಸೆಂಟೌರ್ ರಾಕೆಟ್ನಲ್ಲಿ ಯಾವುದೇ ದೋಷವಿಲ್ಲ ಎಂದು ಕಂಪನಿ ಹೇಳಿದೆ. ಚಂದ್ರನ ಮೇಲೆ ತನ್ನ ಪ್ರಯೋಗಗಳನ್ನು ನಡೆಸಲು ನಾಸಾ ಜೊತೆಗೂಡಿ ತಯಾರಿಸಿದ ಈ ನೌಕೆಗೆ ಆಸ್ಟ್ರೋಬೋಟಿಕ್ 108 ಮಿಲಿಯನ್ ಡಾಲರ್ ವೆಚ್ಚ ಮಾಡಿದೆ.
-
Update #7 for Peregrine Mission One: pic.twitter.com/qAPcChVROO
— Astrobotic (@astrobotic) January 9, 2024 " class="align-text-top noRightClick twitterSection" data="
">Update #7 for Peregrine Mission One: pic.twitter.com/qAPcChVROO
— Astrobotic (@astrobotic) January 9, 2024Update #7 for Peregrine Mission One: pic.twitter.com/qAPcChVROO
— Astrobotic (@astrobotic) January 9, 2024
ವೈಫಲ್ಯದತ್ತ ಮೊದಲ ಖಾಸಗಿ ನೌಕೆ: ಚಂದ್ರನತ್ತ ಸಾಗುವ ಮಾರ್ಗಮಧ್ಯೆ ಇಂಧನ ನಷ್ಟಕ್ಕೀಡಾಗಿ, ಲ್ಯಾಂಡ್ ಆಗುವ ಅನುಮಾನದಲ್ಲಿರುವ ಪೆರೆಗ್ರಿನ್ ಲೂನಾರ್ ಲ್ಯಾಂಡರ್ ಚಂದಮಾಮನ ಅಧ್ಯಯನಕ್ಕೆ ಹಾರಿಬಿಡಲಾದ ಮೊದಲ ಖಾಸಗಿ ನೌಕೆಯಾಗಿದೆ. 1972 ರಲ್ಲಿ ಅಪೊಲೊ 17 ರ ನಂತರ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಚಂದ್ರಯಾನದ ಯಾವುದೇ ಯೋಜನೆಗಳನ್ನು ಕೈಗೊಂಡಿಲ್ಲ. 50 ವರ್ಷಗಳ ಬಳಿಕ ಮೊದಲ ಬಾರಿಗೆ ಕೈಗೊಂಡ ಯಾನವೇ ವೈಫಲ್ಯ ಕಾಣುವ ಸಾಧ್ಯತೆ ಹೆಚ್ಚಿದೆ. ಫೆಬ್ರವರಿ 23 ರಂದು ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸುವ ಯೋಜನೆ ಇತ್ತು.
ಬಾಹ್ಯಾಕಾಶದಲ್ಲಿ ಪೆರೆಗ್ರಿನ್ ಸೆರೆಹಿಡಿದ ಮೊದಲ ಚಿತ್ರದಲ್ಲಿಯೇ ನೌಕೆಯಲ್ಲಿ ಸಮಸ್ಯೆ ಇರುವುದು ಕಂಡು ಬಂದಿದೆ. ಪೇಲೋಡ್ ಡೆಕ್ ಮೇಲೆ ಅಳವಡಿಸಲಾದ ಕ್ಯಾಮೆರಾದಿಂದ ಈ ಚಿತ್ರವನ್ನು ತೆಗೆದುಕೊಳ್ಳಲಾಗಿದೆ. ಮುಂಭಾಗದಲ್ಲಿ ಮಲ್ಟಿ-ಲೇಯರ್ ಇನ್ಸುಲೇಷನ್ (ಎಂಎಲ್ಐ) ಅನ್ನು ಇದು ತೋರಿಸುತ್ತದೆ.
ಇದನ್ನೂ ಓದಿ: ಲ್ಯಾಂಡರ್ನಲ್ಲಿ ಇಂಧನ ನಷ್ಟ: ಅಮೆರಿಕದ ಚಂದ್ರಯಾನ ಯೋಜನೆಗೆ ಹಿನ್ನಡೆ