ನವದೆಹಲಿ: ಪರವಾನಗಿ ಇಲ್ಲದೇ ವಿದೇಶಗಳಿಂದ ಲ್ಯಾಪ್ಟಾಪ್, ಪರ್ಸನಲ್ ಕಂಪ್ಯೂಟರ್ ಸೇರಿದಂತೆ ಟ್ಯಾಬ್ಲೆಟ್ಗಳ ಆಮದು ಮಾಡಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ. ಕೇಂದ್ರ ಸರ್ಕಾರದ ಈ ದಿಢೀರ್ ನಿರ್ಧಾರದಿಂದ ಅನೇಕ ಕಂಪನಿಗಳು ಪೇಚಿಗೆ ಸಿಲುಕಿದವು. ಆದರೆ, ಇದೀಗ ಕೊಂಚ ವಿನಾಯಿತಿ ನೀಡಿರುವ ಸರ್ಕಾರ ಪರವಾನಗಿ ಇಲ್ಲದ ಕಂಪ್ಯೂಟರ್, ಲ್ಯಾಪ್ಟಾಪ್ ಆಮದು ಮಾಡಿಕೊಳ್ಳಲು ಅಕ್ಟೋಬರ್ 31ರವರೆಗೆ ಕಾಲಾವಕಾಶ ನೀಡಿದೆ.
-
Hari Om Rai, Chairman and Co-founder, Lava International on India putting restrictions on the import of laptops, tablets
— ANI (@ANI) August 5, 2023 " class="align-text-top noRightClick twitterSection" data="
"The restriction on import of laptops and tablets is truly a leadership move by the Government of India. It is a step forward for making India the global hub… pic.twitter.com/Cc0FW2WoOF
">Hari Om Rai, Chairman and Co-founder, Lava International on India putting restrictions on the import of laptops, tablets
— ANI (@ANI) August 5, 2023
"The restriction on import of laptops and tablets is truly a leadership move by the Government of India. It is a step forward for making India the global hub… pic.twitter.com/Cc0FW2WoOFHari Om Rai, Chairman and Co-founder, Lava International on India putting restrictions on the import of laptops, tablets
— ANI (@ANI) August 5, 2023
"The restriction on import of laptops and tablets is truly a leadership move by the Government of India. It is a step forward for making India the global hub… pic.twitter.com/Cc0FW2WoOF
ಇದೀಗ ಈ ಕಂಪನಿಗಳು ಕೇಂದ್ರ ಸರ್ಕಾರದಿಂದ ನವೆಂಬರ್ 1ರಿಂದ ಪರವಾನಗಿ ಪಡೆಯುವುದು ಅವಶ್ಯಕವಾಗಿದೆ. ಆಗಸ್ಟ್ 3ರಂದು ಸರ್ಕಾರ ತತ್ಕ್ಷಣದಿಂದ ಜಾರಿಗೆ ಬರುವಂತೆ ಕಂಪ್ಯೂಟರ್, ಲ್ಯಾಪ್ಟಾಪ್ ಆಮದಿಗೆ ಪರವಾನಗಿ ನಿರ್ಬಂಧವನ್ನು ವಿಧಿಸಿತು. ಈ ರೀತಿ ಏಕಾಏಕಿ ನಿರ್ಬಂಧ ಹೇರಿದ ಕ್ರಮದ ವಿರುದ್ದ ಆಕ್ಷೇಪ ವ್ಯಕ್ತಪಡಿಸಿದ ಉದ್ಯಮಗಳು, ಈ ಬಗ್ಗೆ ನಮಗೆ ಮುನ್ಸೂಚನೆ ನೀಡದೇ ಈ ರೀತಿ ಕ್ರಮ ನಡೆಸಿರುವುದು ಸಮಸ್ಯೆಯಾಗಿದೆ ಎಂದು ಮನವಿ ಮಾಡಿವೆ.
ಡಿಜಿಎಫ್ಟಿಯಿಂದ ಪರಿಷ್ಕೃತ ಅಧಿಸೂಚನೆ: ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್ಟಿ) ಶುಕ್ರವಾರ ಕೇಂದ್ರ ಸರ್ಕಾರದ ಈ ನಿರ್ಬಂಧವು ನವೆಂಬರ್ 1ರಿಂದ ಜಾರಿಗೆ ಬರಲಿದೆ ಎಂದು ಅಧಿಸೂಚನೆ ಹೊರಡಿಸಿದೆ. ಪರವಾನಗಿ ಇಲ್ಲದ ಉಪಕರಣಗಳನ್ನು ಅಕ್ಟೋಬರ್ 31ರೊಳಗೆ ಆಮದು ಮಾಡಿಕೊಳ್ಳಬಹುದಾಗಿದ್ದು, ನವೆಂಬರ್ 1ರಿಂದ ಆಮದು ಮಾಡಿಕೊಳ್ಳಬೇಕು ಎಂದರೆ ಪರವಾನಗಿ ಅತ್ಯವಶ್ಯಕವಾಗಿದೆ ಎಂದಿದೆ.
ಇದರ ಜೊತೆಗೆ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್ ಇನ್ ಒನ್ ಪರ್ಸನಲ್ ಕಂಪ್ಯೂಟರ್‌ಗಳು, ಅಲ್ಟ್ರಾ-ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್‌ಗಳು ಮತ್ತು ಸರ್ವರ್‌ಗಳ ಆಮದುಗಳಿಗೆ ಈ ಉದಾರ ನೀತಿಯನ್ನು ಅಕ್ಟೋಬರ್ 31, 2023ರವರೆಗೆ ವಿಸ್ತರಿಸಲಾಗಿದೆ ಎಂದಿದೆ.
ಕೇಂದ್ರ ಸರ್ಕಾರದ ಈ ವಿನಾಯಿತಿಯೂ ಇದೀಗ ಅನೇಕ ಕಂಪನಿಗಳಿಗೆ ಕೊಂಚ ಉಸಿರು ಬಿಡುವಂತೆ ಆಗಿದೆ.
ಭದ್ರತೆ ಕಾರಣ ಮತ್ತು ಸ್ಥಳೀಯ ಉತ್ಪಾದನೆಗೆ ಒತ್ತು ನೀಡುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರ ಈ ನಿರ್ಬಂಧ ವಿಧಿಸಿದೆ. ಕೇಂದ್ರ ಸರ್ಕಾರದ ಈ ನಡೆಯುವ ಚೀನಾ ಮತ್ತು ಕೊರಿಯಾದಲ್ಲಿನ ಸರಕುಗಳ ಒಳ ಸಾಗಣಿ ಮೊಟಕುಗೊಳಿಸಿದೆ.
-
Sunil Vachani, Founder and Chairman of Dixon Technologies on India imposing restrictions on the import of laptops, tablets
— ANI (@ANI) August 5, 2023 " class="align-text-top noRightClick twitterSection" data="
"This is a landmark decision to put the import of IT hardware in the restricted category. This will translate to India emerging as one of the largest hubs… pic.twitter.com/bilsNFTOzF
">Sunil Vachani, Founder and Chairman of Dixon Technologies on India imposing restrictions on the import of laptops, tablets
— ANI (@ANI) August 5, 2023
"This is a landmark decision to put the import of IT hardware in the restricted category. This will translate to India emerging as one of the largest hubs… pic.twitter.com/bilsNFTOzFSunil Vachani, Founder and Chairman of Dixon Technologies on India imposing restrictions on the import of laptops, tablets
— ANI (@ANI) August 5, 2023
"This is a landmark decision to put the import of IT hardware in the restricted category. This will translate to India emerging as one of the largest hubs… pic.twitter.com/bilsNFTOzF
ಉದ್ಯಮಿಗಳಲ್ಲಿ ಅಚ್ಚರಿಗೆ ಕಾರಣವಾದ ನಡೆ: ಲ್ಯಾಪ್ಟಾಪ್ಗಳಿಗೆ ಪರವಾನಗಿ ಕಡ್ಡಾಯ ಎಂಬ ಆದೇಶ ಉದ್ಯಮದಲ್ಲಿ ಅಚ್ಚರಿಗೆ ಕಾರಣವಾಯಿತು. ಜೊತೆಗೆ ಈ ನಿಯಮ ಸಡಿಲುವಂತೆ ಅಧಿಕಾರಿಗಳ ಮೇಲೆ ಉದ್ಯಮಿಗಳ ಒತ್ತಾಯವೂ ಹೆಚ್ಚಾಯಿತು. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತಿಳಿಸಿದ ಸಚಿವರಾದ ರಾಜೀವ್ ಚಂದ್ರಶೇಖರ್, ಇದು ಜಾರಿಯಾಗಲು ಕೊಂಚ ಸಮಯ ಹಿಡಿಯಲಿದ್ದು, ಈ ಸಂಬಂಧ ಶೀಘ್ರದಲ್ಲೇ ತಿಳಿಸಲಾಗುವುದು ಎಂದರು. ಪರಿಷ್ಕೃತ ಅಧಿಸೂಚನೆಯಲ್ಲಿ ಈ ಆಮದುಗಳ ಕುರಿತ ಪರವಾನಗಿ ಪಡೆಯಲು ಸಮಯ ವಿಧಿಸಲಾಗಿದೆ.
ಮೂಲಗಳು ಹೇಳುವಂತೆ, ಪರವಾನಗಿಗೆ ಸರಿಯಾದ ಕ್ರಮದಲ್ಲಿ ಅಪ್ಲೈ ಮಾಡಿದಾಗ ಅದನ್ನು ನಾವು ಬೇಗವಾಗಿ ವಿಲೇವಾರಿ ಮಾಡುತ್ತೇವೆ ಎಂದು ಮೂಲಗಳು ಹೇಳಿದೆ. ಸದ್ಯ ಈ ಸಾಗಣೆಯಲ್ಲಿ ಬಂದರುಗಳಲ್ಲಿ ಯಾವುದೆ ಸಮಸ್ಯೆ ಎದುರಾಗುವುದಿಲ್ಲ. ಸರ್ಕಾರವೂ ಉದ್ಯಮಗಳಿಗೆ ಈ ಸಾಗಣೆಯ ಕ್ಲಿಯರೆನ್ಸ್ಗೆ ಎಲ್ಲಾ ಬೆಂಬಲ ನೀಡುವ ಅವಧಿ ಮೂರು ತಿಂಗಳ ಕಾಲ ವಿಸ್ತರಿಸಿದೆ. ಕೆಲವು ಕಂಪನಿಗಳು ಅನ್ಲೈನ್ನಲ್ಲಿ ಲೈಸೆನ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ.
ಆದೇಶಕ್ಕೆ ಕಾರಣ ಇದು: ಕೇಂದ್ರ ಸರ್ಕಾರ ಗುರುವಾರ ಲ್ಯಾಪ್ಟಾಪ್, ಟ್ಯಾಬ್ಲೆಟ್ ಮತ್ತು ಕೆಲವು ನಿರ್ದಿಷ್ಟ ಕಂಪ್ಯೂಟರ್ ಆಮದಿನ ಮೇಲೆ ಈ ರೀತಿ ದಿಡೀರ್ ನಿರ್ಬಂಧ ವಿಧಿಸುವುದರ ಹಿಂದೆ ಭದ್ರತಾ ಕಾರಣ ಮತ್ತು ದೇಶಿಯ ಉತ್ಪಾದನೆಗೆ ಉತ್ತೇಜನ ನೀಡುವುದು. ಚೀನಾ ಮತ್ತು ಕೊರಿಯಾದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡುವ ಹಿನ್ನಲೆ ಅದರ ಒಳಸಾಗಣೆಯನ್ನು ಮೊಟಕುಗೊಳಿಸಿದೆ.
ಇದನ್ನೂ ಓದಿ: ಇವಿ ಬ್ಯಾಟರಿ ಉತ್ಪಾದನೆ: ಐಬಿಸಿ ಜೊತೆ ಒಡಂಬಡಿಕೆ ಮಾಡಿಕೊಂಡ ರಾಜ್ಯ ಸರ್ಕಾರ