ETV Bharat / science-and-technology

400 ಮಿಲಿಯನ್​ ಬಳೆಕೆದಾರರ ಡೇಟಾ ಕದ್ದು, ಎಲಾನ್​ ಮಸ್ಕ್​ಗೆ ಆಫರ್​​ ನೀಡಿದ ಹ್ಯಾಕರ್​

author img

By

Published : Dec 26, 2022, 4:19 PM IST

ಗೂಗಲ್​ ಸಿಇಒ ಸಂದರ್​ ಪಿಚೈ ಸೇರಿದಂತೆ ವಿಶ್ವದ ಅಗ್ರಗಣ್ಯ ವ್ಯಕ್ತಿಗಳ ಮಾಹಿತಿ ಸೋರಿಕೆ - ಕದ್ದ ಮಾಹಿತಿಯನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ಹ್ಯಾಕರ್​.

data-of-400-mn-twitter-users-stolen-claims-hacker
400 ಮಿಲಿಯನ್​ ಬಳೆಕೆದಾರರ ಡೇಟಾವನ್ನು ಕದ್ದ ಹ್ಯಾಕರ್​, ಎಲಾನ್​ ಮಸ್ಕ್​ಗೆ ಸಲಹೆ

ನವದೆಹಲಿ: ಸುಮಾರು 400 ಮಿಲಿಯನ್ ಟ್ವಿಟರ್ ಬಳಕೆದಾರರ ಡೇಟಾ ಕದ್ದು ಡಾರ್ಕ್ ವೆಬ್‌ನಲ್ಲಿ ಮಾರಾಟಕ್ಕೆ ಇಟ್ಟಿರುವುದಾಗಿ ಹ್ಯಾಕರ್‌ ಒಬ್ಬರು ಟ್ವಿಟರ್​ನಲ್ಲಿ ಹೇಳಿಕೊಂಡಿದ್ದಾರೆ. ಇಸ್ರೇಲಿ ಸೈಬರ್ ಗುಪ್ತಚರ ಸಂಸ್ಥೆಯ ಹಡ್ಸನ್ ರಾಕ್ ಪ್ರಕಾರ, ಡೇಟಾಬೇಸ್​ನಲ್ಲಿ ಇ - ಮೇಲ್‌ಗಳು ಮತ್ತು ಉನ್ನತ ವ್ಯಕ್ತಿಗಳ ಫೋನ್ ಸಂಖ್ಯೆಗಳು ಸೇರಿದಂತೆ ವಿನಾಶಕಾರಿ ಪ್ರಮಾಣದ ಮಾಹಿತಿ ಒಳಗೊಂಡಿದೆ ಎಂದು ತಿಳಿಸಿದ್ದಾರೆ.

ಹಡ್ಸನ್​ ರಾಕ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಹ್ಯಾಕ್​ ಮಾಡಿದ ಡೇಟಾದ ಸೋರಿಕೆ ಬಗ್ಗೆ ನೀಡಿದ್ದ ಮಾಹಿತಿ ಹಂಚಿಕೊಂಡಿದ್ದಾರೆ. ‘ಕದ್ದ ಡೇಟಾವು ಡಬ್ಲ್ಯುಎಚ್‌ಒ, ಕೇಂದ್ರ ಮತ್ತು ಪ್ರಸಾರ ಸಚಿವಾಲಯದ ಮಾಹಿತಿ, ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಅಮೆರಿಕನ್ ಗಾಯಕ ಚಾರ್ಲಿ ಪುತ್ ಸೇರಿದಂತೆ ಇತರರ ಮಾಹನ್​ ವ್ಯಕ್ತಿಗಳ ಮಾಹಿತಿಯನ್ನು ಒಳಗೊಂಡಿದ ಎಂದು ಹೇಳಿದ್ದಾರೆ.

400 ಮಿಲಿಯನ್ ಟ್ವಿಟರ್ ಬಳಕೆದಾರರ ಡೇಟಾ ಮಾರಾಟ ಮಾಡಲು ಸಿದ್ಧನಿದ್ದೇನೆ, ಈ ಡೇಟಾ ಸಂಪೂರ್ಣವಾಗಿ ಖಾಸಗಿಯಾಗಿದೆ ಎಂದು ಹ್ಯಾಕರ್ ತನ್ನ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಟ್ವಿಟರ್​​​ ಡೇಟಾವನ್ನು ಕದ್ದಿರುವುದಾಗಿ ಹೇಳಿಕೊಂಡಿರುವ ಹ್ಯಾಕರ್, ಮೂಲ ವರದಿಯ ಪ್ರಕಾರ ಟ್ವಿಟರ್‌ಗೆ ಒಪ್ಪಂದದ ಬೇಡಿಕೆ ಇಟ್ಟಿದ್ದಾನೆಂದು ತಿಳಿದು ಬಂದಿದೆ.

ಟ್ವಿಟರ್ ಅಥವಾ ಎಲೋನ್ ಮಸ್ಕ್, ನೀವು ಈ ಪೋಸ್ಟ್ ಅನ್ನು ಓದುತ್ತಿದ್ದರೆ, 54 ಮಿಲಿಯನ್ ಬಳಕೆದಾರರ ಡೇಟಾ ಸೋರಿಕೆ ಮಾಡಿದ್ದಕ್ಕೆ, ನೀವು ಈಗಾಗಲೇGDPR ವಿಧಿಸುವು ದಂಡದ ಭಯದಲ್ಲಿದ್ದೀರಿ, ಈಗ 400 ಮಿಲಿಯನ್ ಬಳಕೆದಾರರ ಡೇಟಾ ಸೋರಿಕೆಗೂ ಸೇರಿ ದಂಡ ವಿಧಿಸಲಾಗುತ್ತದೆ ಎಂದು ಹ್ಯಾಕರ್ ಟ್ವಿಟರ್​ನಲ್ಲಿ ಬರೆದು ಕೊಂಡಿದ್ದಾರೆ.

CDPR ವಿಧಿಸುವ $2.76 ಮಿಲಿಯನ್ ದಂಡವನ್ನು ಪಾವತಿಸುವುದನ್ನು ತಪ್ಪಿಸಲು ನಿಮಗೆ ಉತ್ತಮ ಆಯ್ಕೆಯೆಂದರೆ ಫೇಸ್‌ಬುಕ್ ಮಾಡಿದ ಹಾಗೇ ರದ್ದುಗೊಳಿಸಿದ ಡೇಟಾವನ್ನು ಪ್ರತ್ಯೇಕವಾಗಿ ಖರೀದಿಸುವುದು ಎಂದು ಹ್ಯಾಕರ್​ ಎಲೋನ್​​ ಮಸ್ಕ್​ಗೆ ಸಲಹೆ ನೀಡಿದ್ದಾನೆ. ಅದಲ್ಲದೆ, ನಾನು ಮಧ್ಯವರ್ತಿಗಳ ಮೂಲಕ ಡೇಟಾವನ್ನು ಮಾರಟ ಮಾಡಲು ಸಿದ್ಧವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ, ಇದಲ್ಲದೇ "ನಾನು ಈ ಪೊಸ್ಟ್​ ಅನ್ನು ಡಿಲೀಟ್​ ಮಾಡುತ್ತಿದ್ದು, ಮಾಹಿತಿಯನ್ನು ಮತ್ತೆ ಮಾರಾಟ ಮಾಡುವುದಿಲ್ಲ ಎಂದು ಹ್ಯಾಕರ್​ ಉಲ್ಲೇಖಿಸಿದ್ದಾರೆ.

(ಈ ಸುದ್ದಿಯನ್ನು ETV ಭಾರತ್ ಸಂಪಾದಿಸಿದ್ದಲ್ಲ. ಸಿಂಡಿಕೇಟೆಡ್ ಫೀಡ್‌ನಿಂದ ವರದಿಯನ್ನು ತೆಗೆದುಕೊಳ್ಳಲಾಗಿದೆ.)

ಇದನ್ನೂ ಓದಿ: 2023ರ ಅಂತ್ಯದ ಹೊತ್ತಿಗೆ ಭಾರತದಲ್ಲಿ ಶೇ 80 ರಷ್ಟು ಸ್ಮಾರ್ಟ್​ಫೋನ್​ಗಳಲ್ಲಿ 5 ಜಿ ಸೇವೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.