ನವದೆಹಲಿ: ಪ್ಲೇಸ್ಟೋರ್ ನೀತಿಗಳಿಗೆ ಸಂಬಂಧಿಸಿದಂತೆ ತನ್ನ ಪ್ರಾಬಲ್ಯವನ್ನು ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಟೆಕ್ ದೈತ್ಯ ಸಂಸ್ಥೆ ಗೂಗಲ್ 5 ದಿನಗಳ ಹಿಂದಷ್ಟೇ 1337 ಕೋಟಿ ರೂ. ದಂಡಕ್ಕೆ ಗುರಿಯಾಗಿತ್ತು. ಮತ್ತೆ ಅದೇ ತಪ್ಪನ್ನು ಪುನರಾವರ್ತನೆ ಮಾಡಿದ್ದಕ್ಕೆ ಸ್ಪರ್ಧಾ ಆಯೋಗ (Competition Commission) ಮಂಗಳವಾರ 936.44 ಕೋಟಿ ರೂ ದಂಡ ವಿಧಿಸಿದೆ.
ಆ್ಯಪ್ ಸ್ಟೋರ್ನಲ್ಲಿ ಬೇರೆ ಅಪ್ಲಿಕೇಷನ್ಗಳನ್ನು ಮೀರಿ ತನಗೆ ಬೇಕಾದ ಆ್ಯಪ್ಗಳಿಗೆ ಮಾತ್ರ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು, ವ್ಯಾವಹಾರಿಕ ಅನ್ಯಾಯ ಎಂದು ಸ್ಪರ್ಧಾ ಆಯೋಗ ದಂಡ ಹಾಕಿ ಎಚ್ಚರಿಕೆ ನೀಡಿತ್ತು. ವಾರದೊಳಗೆ 2ನೇ ಸಲ ಟೆಕ್ ದೈತ್ಯ ದಂಡಕ್ಕೆ ಗುರಿಯಾಗಿದೆ.
ಗೂಗಲ್ ಪ್ಲೇ ಸ್ಟೋರ್ಗೆ ಸಂಬಂಧಿಸಿದ ಮೊಬೈಲ್ ಅಪ್ಲಿಕೇಶನ್ ವಿತರಣಾ ಒಪ್ಪಂದ (MADA) ಮತ್ತು ಆಂಟಿ ಫ್ರಾಗ್ಮೆಂಟೇಶನ್ ಅಗ್ರಿಮೆಂಟ್ (AFA) ಅನ್ನು ಟೆಕ್ ಸಂಸ್ಥೆ ಮತ್ತೆ ಉಲ್ಲಂಘಿಸಿದೆ. ಇದನ್ನು ಸೀಮಿತ ಅವಧಿಯೊಳಗೆ ಬದಲಿಸಿಕೊಳ್ಳಲು ಈ ಹಿಂದೆಯೇ ಸೂಚಿಸಲಾಗಿತ್ತು. ಅನ್ಯಾಯದ ವ್ಯವಹಾರದ ಅಭ್ಯಾಸಗಳನ್ನು ನಿಲ್ಲಿಸಲು ಮತ್ತು ತ್ಯಜಿಸುವಂತೆ ಕಂಪನಿಗೆ ಸ್ಪರ್ಧಾ ಆಯೋಗ ನಿರ್ದೇಶಿಸಿತ್ತು.
ಇದನ್ನೂ ಓದಿ: ಗೂಗಲ್ಗೆ ₹1,337 ಕೋಟಿ ದಂಡ ಜಡಿದ ಭಾರತೀಯ ಸ್ಪರ್ಧಾ ಆಯೋಗ