ETV Bharat / science-and-technology

ಬಿಂಗ್ ಸರ್ಚ್​ ಎಂಜಿನ್​​ನಲ್ಲಿ ChatGPT: 100 ಮಿಲಿಯನ್ ದಾಟಿದ ಬಳಕೆದಾರರ ಸಂಖ್ಯೆ - Bing AI ನಲ್ಲಿ ಸಂಭಾಷಣೆ ಮಿತಿ

ಮೈಕ್ರೊಸಾಫ್ಟ್​ನ ಬಿಂಗ್ ಸರ್ಚ್ ಎಂಜಿನ್​ಗೆ ಚಾಟ್​ ಜಿಪಿಟಿ ಸಂಯೋಜನೆ ಮಾಡಿದ ನಂತರ ಅದರ ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಈಗ ಪ್ರತಿದಿನ ಬಿಂಗ್ ಸರ್ಚ್​ ಬಳಕೆದಾರರ ಸಂಖ್ಯೆ 100 ಮಿಲಿಯನ್​ ದಾಟಿದೆ.

Microsoft's AI-powered Bing search engine crosses 100 mn users

author img

By

Published : Mar 9, 2023, 7:56 PM IST

ನವದೆಹಲಿ : ಮೈಕ್ರೋಸಾಫ್ಟ್‌ನ AI ಚಾಲಿತ Bing (ಬಿಂಗ್) ಸರ್ಚ್ ಇಂಜಿನ್​ನ ಬಳಕೆದಾರರ ಸಂಖ್ಯೆಯು ಪ್ರತಿದಿನ 100 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಮೀರಿಸಿದೆ. ಬಿಂಗ್​ ಗೆ ಚಾಟ್​ ಜಿಪಿಟಿ (ChatGPT) ಯನ್ನು ಜೋಡಿಸಿರುವುದರಿಂದ ಇದರ ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಕಂಪನಿ ಒಂದು ತಿಂಗಳೊಳಗೆ ಹಿಂದೆಂದಿಗಿಂತಲೂ ಬಳಕೆದಾರರನ್ನು ವಿಸ್ತರಿಸಿಕೊಂಡಿದೆ. ಇದರ ಪ್ರತಿಸ್ಪರ್ಧಿ ಗೂಗಲ್ ಸರ್ಚ್ ಎಂಜಿನ್ 1 ಶತಕೋಟಿಗೂ ಹೆಚ್ಚು ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ.

ಹಲವು ವರ್ಷಗಳ ಸ್ಥಿರ ಬೆಳವಣಿಗೆಯ ನಂತರ ಮತ್ತು ಮಿಲಿಯನ್ ಪ್ಲಸ್ ಹೊಸ ಬಿಂಗ್ ಪ್ರಿವ್ಯೂ ಬಳಕೆದಾರರಿಂದ ಸ್ವಲ್ಪ ಉತ್ತೇಜನ ಪಡೆದಿದ್ದು, ನಾವು ಬಿಂಗ್‌ ಮೇಲೆ ದೈನಂದಿನ ಸಕ್ರಿಯ 100 ಮಿಲಿಯನ್ ಬಳಕೆದಾರರ ಮಿತಿಯನ್ನು ದಾಟಿದ್ದೇವೆ ಎಂದು ಹೇಳಲು ಸಂತೋಷಪಡುತ್ತೇವೆ ಎಂದು ಮೈಕ್ರೋಸಾಫ್ಟ್​ ಕಾರ್ಪೊರೇಟ್ ವೈಸ್ ಪ್ರೆಸಿಡೆಂಟ್ ಮತ್ತು ಗ್ರಾಹಕ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಯೂಸುಫ್ ಮೆಹದಿ ಹೇಳಿದರು.

ದೈನಂದಿನ ಬಿಂಗ್​ ಪ್ರಿವ್ಯೂ ಬಳಕೆದಾರರ ಪೈಕಿ ಸರಿಸುಮಾರು ಮೂರನೇ ಒಂದು ಭಾಗದಷ್ಟು ಜನರು ಪ್ರತಿದಿನ AI ಚಾಟ್ ಅನ್ನು ಬಳಸುತ್ತಿದ್ದಾರೆ. ಪ್ರಿವ್ಯೂ ಪ್ರಾರಂಭವಾದಾಗಿನಿಂದ ನಾವು ಸರಾಸರಿ 45 ಮಿಲಿಯನ್‌ಗಿಂತಲೂ ಹೆಚ್ಚು ಒಟ್ಟು ಚಾಟ್‌ಗಳೊಂದಿಗೆ ಪ್ರತಿ ಸೆಷನ್‌ಗೆ ಸರಿಸುಮಾರು ಮೂರು ಚಾಟ್‌ಗಳನ್ನು ನೋಡುತ್ತಿದ್ದೇವೆ ಎಂದು ಮೆಹದಿ ಹೇಳಿದರು. ಸುಮಾರು 15 ಪ್ರತಿಶತದಷ್ಟು ಚಾಟ್ ಸೆಷನ್‌ಗಳಲ್ಲಿ ಜನರು ಹೊಸ ಕಂಟೆಂಟ್​ ರಚಿಸಲು Bing ಅನ್ನು ಬಳಸುತ್ತಿದ್ದಾರೆ ಎಂದು ಅವರು ಹೇಳಿದರು.

ನಮ್ಮ ಹೊಸ Bing ಮೊಬೈಲ್ ಅಪ್ಲಿಕೇಶನ್‌ನ ಬಿಡುಗಡೆಯೊಂದಿಗೆ ಮೊಬೈಲ್ ಫೋನ್‌ಗಳಲ್ಲಿ ಕೂಡ ಹೊಸ ಬಿಂಗ್​ ಅನ್ನು ಪರಿಚಯಿಸಲು ನಾವು ಸಂತೋಷಪಡುತ್ತೇವೆ. ಮೊಬೈಲ್​ನಲ್ಲಿ ಈಗ ಧ್ವನಿ ಇನ್‌ಪುಟ್‌ನೊಂದಿಗೆ ಉತ್ತರಗಳು ಮತ್ತು ಚಾಟ್ ಹೆಚ್ಚು ಸಹಾಯಕವಾಗಿವೆ ಮತ್ತು ಪ್ರೀ-ಲಾಂಚ್ ಹಂತಗಳಿಂದ ದೈನಂದಿನ ಸಕ್ರಿಯ ಬಳಕೆದಾರರಲ್ಲಿ 6 ಪಟ್ಟು ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಅವರು ಹೇಳಿದರು. ಮೈಕ್ರೊಸಾಫ್ಟ್​ ಪ್ರಸ್ತುತ Bing AI ನಲ್ಲಿ ಸಂಭಾಷಣೆ ಮಿತಿಗಳನ್ನು ಪ್ರತಿ ಸೆಷನ್‌ಗೆ 10 ಚಾಟ್‌ಗಳಿಗೆ ಮತ್ತು ದಿನಕ್ಕೆ 120 ಒಟ್ಟು ಚಾಟ್‌ಗಳಿಗೆ ಹೆಚ್ಚಿಸಿದೆ. ಮೊದಲು, ಈ ಸಂಭಾಷಣೆಗಳನ್ನು ಪ್ರತಿ ಸೆಷನ್‌ಗೆ 6 ಚಾಟ್ ಟರ್ನ್​ಗಳು ಮತ್ತು ದಿನಕ್ಕೆ ಒಟ್ಟು 100 ಚಾಟ್​ಗಳಿಗೆ ಸೀಮಿತಗೊಳಿಸಲಾಗಿತ್ತು.

ಇಂಟರ್ನೆಟ್​ ಸರ್ಚ್​ ಮಾಡಲು ಅಗತ್ಯ ವೆಬ್​ ಬ್ರೌಸರ್: ವೆಬ್ ಬ್ರೌಸರ್ ಎಂಬುದು ನಿಮ್ಮನ್ನು ಇಂಟರ್ನೆಟ್‌ನಲ್ಲಿ ಎಲ್ಲಿಗೆ ಬೇಕಾದರೂ ಕೊಂಡೊಯ್ಯುವ ಸಾಧನವಾಗಿದೆ. ಪ್ರಪಂಚದ ಎಲ್ಲಿಂದಲಾದರೂ ಪಠ್ಯ, ಚಿತ್ರಗಳು ಮತ್ತು ವೀಡಿಯೊವನ್ನು ನೋಡಲು ಇದು ನಿಮಗೆ ಅವಕಾಶ ಮಾಡಿಕೊಡುತ್ತದೆ. ಇಂಟರ್ನೆಟ್​ ಇದು ವಿಶಾಲವಾದ ಮತ್ತು ಶಕ್ತಿಯುತ ಸಾಧನವಾಗಿದೆ. ಕಳೆದ ಕೆಲ ದಶಕಗಳ ಅವಧಿಯಲ್ಲಿ ಇಂಟರ್ನೆಟ್ ನಾವು ಕೆಲಸ ಮಾಡುವ ವಿಧಾನ, ನಾವು ಆಡುವ ರೀತಿ ಮತ್ತು ನಾವು ಪರಸ್ಪರ ಸಂವಹನ ನಡೆಸುವ ವಿಧಾನವನ್ನು ಬದಲಾಯಿಸಿದೆ. ಇಂಟರ್ನೆಟ್​ ಅನ್ನು ಹೇಗೆ ಬಳಸುತ್ತೇವೆ ಎಂಬುದರ ಆಧಾರದ ಮೇಲೆ ಇದು ಜನರನ್ನು ಸಂಪರ್ಕಿಸುವ ಸೇತುವೆಯಾಗಿದೆ. ಇಂದು ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಇಂಟರ್ನೆಟ್​ ಬಳಸುವುದು ಮುಖ್ಯವಾಗಿದೆ. ಆದರೆ ಅದನ್ನು ಬಳಸುವ ಪರಿಕರಗಳನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳುವುದು ಸಹ ಮುಖ್ಯವಾಗಿದೆ.

ಇದನ್ನೂ ಓದಿ : ಇನ್ಮುಂದೆ ವಾಟ್ಸ್​ಆ್ಯಪ್ ಗ್ರೂಪ್​ನಲ್ಲಿ ಫಿಕ್ಸ್​ ಮಾಡಬಹುದು ಎಕ್ಸ್​ಪೈರಿ ಡೇಟ್​; ಏನಿದು ಹೊಸ ವೈಶಿಷ್ಟ್ಯ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.