ETV Bharat / science-and-technology

ಚಂದ್ರಯಾನ ಯೋಜನೆಯೇ ಒಂದು ದೊಡ್ಡ ಯಶಸ್ಸು: ನಾಸಾ ಮಾಜಿ ಅಧಿಕಾರಿ ಮೈಕ್​ ಗೋಲ್ಡ್​​

ಭಾರತದ ಚಂದ್ರಯಾನ-3 ಯಶಸ್ಸಿಗೆ ಇಂದು ಇಡೀ ವಿಶ್ವವೇ ಕಾದು ಕುಳಿತಿದ್ದು, ಭಾರತದ ಈ ಯೋಜನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

chandrayaan 3 mission an overall success Nasa former officer Mike Gold

author img

By ETV Bharat Karnataka Team

Published : Aug 23, 2023, 10:32 AM IST

Updated : Aug 23, 2023, 11:04 AM IST

ಟೆಕ್ಸಾಸ್( ಅಮೆರಿಕ)​: ಭಾರತದ ಚಂದ್ರಯಾನ-3 ಯೋಜನೆಯೇ ಒಂದು ದೊಡ್ಡ ಯಶಸ್ಸು ಎಂದು ನಾಸಾದ ಮಾಜಿ ಅಧಿಕಾರಿ ಮತ್ತು ರೆಡ್​ವೈರ್​ನ ಮುಖ್ಯ ಅಭಿವೃದ್ಧಿ ಅಧಿಕಾರಿ ಮೈಕ್​ ಗೋಲ್ಡ್ ಪ್ರಶಂಸಿದ್ದಾರೆ. ಇಂದು ಸಂಜೆ ಚಂದ್ರಯಾನ-3 ಯೋಜನೆ​​ ವಿಕ್ರಮ್​ ಲ್ಯಾಂಡರ್​ ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡಿಂಗ್​ ಮಾಡುವಲ್ಲಿ ಯಶಸ್ವಿಯಾಗಲಿ ಅಥವಾ ಬಿಡಲಿ, ಭಾರತದ ಈ ಯೋಜನೆಯೇ ಒಂದು ಮಹತ್ವದ್ದಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೈಕ್ ಗೋಲ್ಡ್ ಆರ್ಟೆಮಿಸ್ ರೆಕಾರ್ಡ್​​ನ ವಾಸ್ತುಶಿಲ್ಪಿ ಎಂದು ಪರಿಗಣಿಸಲಾಗಿದೆ. ಅಲ್ಲದೇ ಅವರು ನಾಸಾದಲ್ಲಿ ಬಾಹ್ಯಾಕಾಶ ನೀತಿ ಮತ್ತು ಪಾಲುದಾರಿಕೆಗಳ ಮಾಜಿ ಸಹಾಯಕ ನಿರ್ವಾಹಕರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.

ಭಾರತದ ಚಂದ್ರಯಾನ ಕುರಿತು ಮಾತನಾಡಿರುವ ಅವರು, ನಾವು ಹೊಸ ಕಾಲಕ್ಕೆ ಪ್ರವೇಶಿಸುತ್ತಿದ್ದೇವೆ. ಚಂದ್ರನ ಪರಿಶೋಧನೆಯ ಆರ್ಟೆಮಿಸ್ ಯುಗದಲ್ಲಿ ಕೇವಲ ಒಂದೆರಡು ಬಾರಿಯಲ್ಲ ಶಾಶ್ವತವಾಗಿ ಚಂದ್ರನ ಮೇಲೆ ಛಾಪು ಮೂಡಿಸಲು ಮುಂದಾಗಿದ್ದೇವೆ. ಈ ಯೋಜನೆಯು ಚಂದ್ರನ ಕುರಿತು ಅರ್ಥೈಸಿಕೊಳ್ಳಲು ಮತ್ತು ದತ್ತಾಂಶಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಸಂಪನ್ಮೂಲಗಳನ್ನು ಬಳಸಿಕೊಂಡು ನಾವು ಚಂದ್ರನ ಮೇಲೆ ನೆಲೆ ಸ್ಥಾಪಿಸಲಿದ್ದೇವೆ. ಹೀಗಾಗಿ ಈ ಪ್ರಕ್ರಿಯೆ ಭಾಗವಾಗಿ ನಾವಿದ್ದೇವೆ. ಈ ಯೋಜನೆ ಯಶಸ್ವಿಯಾಗಲಿ ಅಥವಾ ಬಿಡಲಿ, ಈ ಯೋಜನೆಯೇ ದೊಡ್ಡ ಮಟ್ಟದ ಯಶಸ್ಸು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.

ಚಂದ್ರನ ಸಹಯೋಗದೊಂದಿಗೆ ನಾವು ಸಾಗುತ್ತಿದ್ದೇವೆ. ಪ್ರಸ್ತುತ ನಾಸಾ ಮತ್ತು ಇಸ್ರೋ ಸಹಯೋಗವೂ ಭೂಮಿ ಮೇಲೆ ಹೆಚ್ಚು ಕೇಂದ್ರಿಕೃತವಾಗಿದೆ. ಇದು ಭಯಂಕರವಾಗಿದ್ದು ನಿಸಾರ್​​ನಂತಹ ಯೋಜನೆ ಆಗಿದೆ. ಭಾರತ ರಾಡರ್​ ವ್ಯವಸ್ಥೆ ಮೂಲಕ ಭೂಮಿಯನ್ನು ಅಧ್ಯಯನ ನಡೆಸಲು ಮುಂದಾಗಿದೆ. ಜೊತೆಗೆ ಹವಾಮಾನ ಬದಲಾವಣೆ ಮತ್ತು ಹವಾಮಾನದಲ್ಲಿನ ನಮ್ಮ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸಲು ದತ್ತಾಂಶದ ಭಾಗವನ್ನು ಸೃಷ್ಟಿಸಿದೆ. ಇದು ಭಾರತ, ಅಮೆರಿಕ ಮತ್ತು ಇಡೀ ಜಗತ್ತಿಗೆ ಪ್ರಮುಖ ವಿಷಯವಾಗಿದೆ ಎಂದರು.

ಚಂದ್ರಯಾನ ಕೂಡ ಆರ್ಟಿಮಿಸ್​ ಲಕ್ಷಣವಾಗಿದ್ದು, ನಾವು ಭೂಮಿಯ ಕಕ್ಷೆಯನ್ನು ಮೀರಿ ಚಂದ್ರನ ಮೇಲ್ಮೆಗೆ ಹೋಗುವುದನ್ನು ನೋಡುತ್ತಿದ್ದೇವೆ. ಮುಂದಿನ ಯುಗದಲ್ಲಿ ರೋಬೋಟಿಕ್​ ಮತ್ತು ಮಾನವ ಬಾಹ್ಯಕಾಶದ ಅನ್ವೇಷಣೆ ಕಾರ್ಯಗತವಾಗಲಿದೆ ಎಂದು ಅವರು ಹೇಳಿದರು.

ಚಂದ್ರಯಾನ-3 ವಿಕ್ರಮ್​ ಲ್ಯಾಂಡರ್​​ ಇಂದು ಸಂಜೆ 6.04 ಚಂದ್ರನ ಮೇಲ್ಮೈನಲ್ಲಿ ಸಾಫ್ಟ್​ ಲ್ಯಾಂಡ್​ ಆಗುವ ಮೂಲಕ ನೂತನ ಇತಿಹಾಸ ನಿರ್ಮಿಸಲು ಸಿದ್ಧವಾಗಿದೆ. ಈ ಘಟನೆಗೆ ಇಡೀ ದೇಶ ಸೇರಿದಂತೆ ಇಡೀ ಜಗತ್ತು ಕಾತುರದಿಂದ ಕಾಯುತ್ತಿದೆ. (ಎಎನ್​ಐ)

ಇದನ್ನೂ ಓದಿ: ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್: ಉಸಿರು ಬಿಗಿಹಿಡಿದುಕೊಂಡು ಕಾಯುತ್ತಿರುವ ಭಾರತ, ಇಂದು ಸಂಜೆ 5.20ಕ್ಕೆ ಇಸ್ರೋದಿಂದ ನೇರಪ್ರಸಾರ...

Last Updated : Aug 23, 2023, 11:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.