ಬೆಂಗಳೂರು: ಚಂದ್ರಯಾನ-3 ನೌಕೆಯು ಚಂದ್ರನ ಮೇಲೆ ಇಳಿಯುವುದಕ್ಕೂ ಮೊದಲು ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. 2019 ರಲ್ಲಿ ಚಂದ್ರಯಾನ-2 ಯೋಜನೆಯಲ್ಲಿ ಹಾರಿಬಿಡಲಾಗಿದ್ದ ಆರ್ಬಿಟರ್‌ನೊಂದಿಗೆ, ಲ್ಯಾಂಡರ್ ಮಾಡ್ಯೂಲ್ ಸಂವಹನ ಸಾಧಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಹೇಳಿದೆ.
ಚಂದ್ರನ ಸುತ್ತ ಗಿರಕಿ ಹೊಡೆಯುತ್ತಿರುವ ಚಂದ್ರಯಾನ-2 ಮಿಷನ್ನ ಆರ್ಬಿಟರ್ ಮತ್ತು ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ದ್ವಿಮುಖ ಸಂವಹನ ನಡೆಸಿವೆ. ಇದು ಯೋಜನೆಯ ಯಶಸ್ಸಿನ ಮೊದಲಾರ್ಧವಾಗಿದೆ. ಲ್ಯಾಂಡಿಂಗ್ಗೂ ಮುಂಚಿತವಾಗಿ ಮಹತ್ವದ ಬೆಳವಣಿಗೆ ಎಂದು ಇಸ್ರೋ ತಿಳಿಸಿದೆ.
-
Chandrayaan-3 Mission:
— ISRO (@isro) August 21, 2023 " class="align-text-top noRightClick twitterSection" data="
‘Welcome, buddy!’
Ch-2 orbiter formally welcomed Ch-3 LM.
Two-way communication between the two is established.
MOX has now more routes to reach the LM.
Update: Live telecast of Landing event begins at 17:20 Hrs. IST.#Chandrayaan_3 #Ch3
">Chandrayaan-3 Mission:
— ISRO (@isro) August 21, 2023
‘Welcome, buddy!’
Ch-2 orbiter formally welcomed Ch-3 LM.
Two-way communication between the two is established.
MOX has now more routes to reach the LM.
Update: Live telecast of Landing event begins at 17:20 Hrs. IST.#Chandrayaan_3 #Ch3Chandrayaan-3 Mission:
— ISRO (@isro) August 21, 2023
‘Welcome, buddy!’
Ch-2 orbiter formally welcomed Ch-3 LM.
Two-way communication between the two is established.
MOX has now more routes to reach the LM.
Update: Live telecast of Landing event begins at 17:20 Hrs. IST.#Chandrayaan_3 #Ch3
'ಚಂದ್ರನಲ್ಲಿರುವ ಆರ್ಬಿಟರ್ ಔಪಚಾರಿಕವಾಗಿ ಚಂದ್ರಯಾನ-3 ಉಪಗ್ರಹವನ್ನು 'ಸ್ವಾಗತ ಗೆಳೆಯ' ಎಂದಿದೆ. ಎರಡರ ನಡುವೆ ದ್ವಿಮುಖ ಸಂವಹನ ನಡೆದಿದೆ. ಆರ್ಬಿಟರ್ ಈಗ ಲ್ಯಾಂಡರ್ ಮಾಡ್ಯೂಲ್ ಜೊತೆಗೂಡಿ ಕೆಲಸ ಮಾಡಲಿದೆ. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆ ಆಗಸ್ಟ್ 23 ರಂದು 5.20 ನಿಮಿಷಕ್ಕೆ ಆರಂಭವಾಗಲಿದೆ. ಇದರ ನೇರಪ್ರಸಾರ ಇರಲಿದೆ' ಎಂದು ಇಸ್ರೋ ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಹಂಚಿಕೊಂಡಿದೆ.
ಚಂದ್ರಯಾನ-3 ಯೋಜನೆಯ ಕಾರ್ಯಾಚರಣೆಯುದ್ದಕ್ಕೂ, ಬಾಹ್ಯಾಕಾಶ ನೌಕೆಯ ಸ್ಥಿತಿಗತಿಯನ್ನು ಇಸ್ರೋ ಬೆಂಗಳೂರಿನ ಬೈಲಾಲುನಲ್ಲಿರುವ ಇಂಡಿಯನ್ ಡೀಪ್ ಸ್ಪೇಸ್ ನೆಟ್‌ವರ್ಕ್ (ಐಡಿಎಸ್ಎನ್)ನಲ್ಲಿರುವ ಇಎಸ್ಎ ಮತ್ತು ಜೆಪಿಎಲ್ ಆಂಟೆನಾ ಮೂಲಕ ನಿಯಂತ್ರಿಸುತ್ತಾ ಬಂದಿದೆ. ಉಪಗ್ರಹ ರವಾನಿಸುವ ಎಲ್ಲ ಮಾಹಿತಿಯೂ ಇಲ್ಲಿಂದಲೇ ವಿಜ್ಞಾನಿಗಳಿಗೆ ಲಭ್ಯವಾಗುತ್ತದೆ. ಆರ್ಬಿಟರ್ ಜೊತೆಗೆ ಸಂವಹನ ನಡೆಸಿದ ಬಗ್ಗೆಯೂ ಐಡಿಎಸ್ಎನ್ನಲ್ಲಿ ದಾಖಲಾಗಿದೆ.
ಚಂದ್ರಯಾನ-3 ಉಪಗ್ರಹವನ್ನು ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC) ನಲ್ಲಿನ ಮಿಷನ್ ಆಪರೇಷನ್ ಕಾಂಪ್ಲೆಕ್ಸ್ (MOX) ನಿಂದ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಚಂದ್ರಯಾನ-2 ಆರ್ಬಿಟರ್ ಪ್ರಸ್ತುತ ಚಂದ್ರನ ಸುತ್ತ 100 ಕಿಮೀ x 100 ಕಿಮೀ ಕಕ್ಷೆಯಲ್ಲಿ ಸುತ್ತುತ್ತಿದೆ. ಏಕಾಂಗಿಯಾಗಿದ್ದ ಆರ್ಬಿಟರ್ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸಿದ್ದರಿಂದ ಅದರ ಕಾರ್ಯವೂ ಚಾಲ್ತಿಗೆ ಬರಲಿದೆ.
ಆರ್ಬಿಟರ್ ಸಂಪರ್ಕದಿಂದ ಚಂದ್ರಯಾನ-3 ಯೋಜನೆಯ ಸಫಲತೆಯ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಆಗಸ್ಟ್ 23 ರ ಸಾಫ್ಟ್ ಲ್ಯಾಂಡಿಂಗ್ಗೆ ಇದು ಬೂಸ್ಟ್ ನೀಡಿದೆ. ಈ ಪ್ರಕ್ರಿಯೆ ಸಾಧಿಸಿದರೆ ವಿಜ್ಞಾನ, ಎಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಉದ್ಯಮದಲ್ಲಿ ಭಾರತದ ಕೀರ್ತಿ ಪತಾಕೆ ಜಗದಗಲ ಹಾರಾಡಲಿದೆ. ಭವಿಷ್ಯದ ಪೀಳಿಗೆಯನ್ನು ಪ್ರೇರೇಪಿಸುವ ಸಾಮರ್ಥ್ಯವನ್ನು ಈ ಯೋಜನೆ ಹೊಂದಿದೆ. ಅಲ್ಲದೇ, ಬಾಹ್ಯಾಕಾಶ ಯಾನದಲ್ಲಿ ಭಾರತದ ಸ್ಥಾನಮಾನವ ಹೆಚ್ಚಲಿದೆ.
ಇದನ್ನೂ ಓದಿ: ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯೋದು ಪಕ್ಕಾ: ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್ ವಿಶ್ವಾಸ