ನವದೆಹಲಿ : ಭಾರತ ಸೇರಿದಂತೆ ವಿಶ್ವವೇ ತುದಿಗಾಲ ಮೇಲೆ ನಿಂತು ಕಾಯುತ್ತಿರುವ ಚಂದ್ರಯಾನ-3 ನೌಕೆಯ ಲ್ಯಾಂಡಿಂಗ್ನ ದಿನ ಮತ್ತು ಸಮಯವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧಿಕೃತವಾಗಿ ಪ್ರಕಟಿಸಿದೆ. ಇನ್ನು ಮೂರೇ ದಿನಗಳಲ್ಲಿ ಭಾರತ ಐತಿಹಾಸಿಕ ದಾಖಲೆ ನಿರ್ಮಾಣಕ್ಕೆ ಸಜ್ಜಾಗಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿಪಡಿಸಲಾದ ಜಾಗದಲ್ಲಿ ಚಂದ್ರಯಾನ-3 ನೌಕೆಯ ಲ್ಯಾಂಡರ್ ಆಗಸ್ಟ್ 23 ಸಂಜೆ 6.04 ನಿಮಿಷಕ್ಕೆ ಸರಿಯಾಗಿ ಇಳಿಯಲಿದೆ ಎಂದು ಇಸ್ರೋ ಭಾನುವಾರ ಅಧಿಕೃತವಾಗಿ ಘೋಷಿಸಿದೆ. ಕೋಟ್ಯಂತರ ಭಾರತೀಯರ ಕನಸು ನನಸಾದಲ್ಲಿ, ಈ ವಿಕ್ರಮ ಸಾಧಿಸಿದ ವಿಶ್ವದ ನಾಲ್ಕನೇ ಮತ್ತು ದಕ್ಷಿಣ ಧ್ರುವಕ್ಕೆ ಇಳಿದ ಮೊದಲ ದೇಶ ಎಂಬ ಹಿರಿಮೆಗೆ ಭಾರತ ಪಾತ್ರವಾಗಲಿದೆ.
"ಚಂದ್ರಯಾನ-3 ಆಗಸ್ಟ್ 23, 2023 ರಂದು 06:04 ನಿಮಿಷಕ್ಕೆ ಚಂದ್ರನ ಮೇಲೆ ಲ್ಯಾಂಡರ್ ಇಳಿಯಲಿದೆ. ಇಷ್ಟು ದಿನಗಳ ಪ್ರಯಾಣಕ್ಕೆ ಶುಭ ಕೋರಿದ ಮತ್ತು ಸಕಾರಾತ್ಮಕ ಮನೋಭಾವಕ್ಕೆ ಧನ್ಯವಾದಗಳು. ಮುಂದಿನ ಪ್ರಯಾಣವನ್ನು ಒಟ್ಟಿಗೆ ಮುಂದುವರಿಸೋಣ" ಎಂದು ಇಸ್ರೋ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಬರೆದುಕೊಂಡಿದೆ. ಜೊತೆಗೆ ಈ ಸಾಹಸವನ್ನು ಇಸ್ರೋದ ವೆಬ್ಸೈಟ್, ಅದರ ಯೂಟ್ಯೂಬ್ ಚಾನಲ್, ಫೇಸ್ಬುಕ್ ಮತ್ತು ಡಿಡಿ ನ್ಯಾಷನಲ್ ಚಾನಲ್ನಲ್ಲಿ 05.27 ರಿಂದ ನೇರಪ್ರಸಾರ ಲಭ್ಯವಿರಲಿದೆ ಎಂದು ತಿಳಿಸಿದೆ.
-
Chandrayaan-3 Mission:
— ISRO (@isro) August 20, 2023 " class="align-text-top noRightClick twitterSection" data="
🇮🇳Chandrayaan-3 is set to land on the moon 🌖on August 23, 2023, around 18:04 Hrs. IST.
Thanks for the wishes and positivity!
Let’s continue experiencing the journey together
as the action unfolds LIVE at:
ISRO Website https://t.co/osrHMk7MZL
YouTube… pic.twitter.com/zyu1sdVpoE
">Chandrayaan-3 Mission:
— ISRO (@isro) August 20, 2023
🇮🇳Chandrayaan-3 is set to land on the moon 🌖on August 23, 2023, around 18:04 Hrs. IST.
Thanks for the wishes and positivity!
Let’s continue experiencing the journey together
as the action unfolds LIVE at:
ISRO Website https://t.co/osrHMk7MZL
YouTube… pic.twitter.com/zyu1sdVpoEChandrayaan-3 Mission:
— ISRO (@isro) August 20, 2023
🇮🇳Chandrayaan-3 is set to land on the moon 🌖on August 23, 2023, around 18:04 Hrs. IST.
Thanks for the wishes and positivity!
Let’s continue experiencing the journey together
as the action unfolds LIVE at:
ISRO Website https://t.co/osrHMk7MZL
YouTube… pic.twitter.com/zyu1sdVpoE
ಚಂದ್ರನ ಮೇಲೆ 'ವಿಕ್ರಮ'": ಚಂದ್ರನ ಮೇಲೆ ಇಳಿಯುವ ಲ್ಯಾಂಡರ್ಗೆ 'ವಿಕ್ರಮ್' ಎಂದು ಹೆಸರಿಸಲಾಗಿದೆ. ಅದರಲ್ಲಿರುವ ರೋವರ್ ಚಂದ್ರನ ಮೇಲ್ಮೈ ಅಧ್ಯಯನ ನಡೆಸಲಿದೆ. ಕೆಲ ದಿನಗಳ ಹಿಂದಷ್ಟೇ ಚಂದ್ರಯಾನ-3 ಗಗನನೌಕೆ ಪ್ರೊಪಲ್ಷನ್ ಮಾಡ್ಯೂಲ್ನಿಂದ ಲ್ಯಾಂಡರ್ ಮಾಡ್ಯೂಲ್ ಬೇರ್ಪಟ್ಟಿತ್ತು. ಇದಾದ ಬಳಿಕ ಸಾಫ್ಟ್ ಲ್ಯಾಂಡಿಂಗ್ಗೆ ನಿರ್ಣಾಯಕವಾದ 'ಡಿಬೂಸ್ಟಿಂಗ್' ನಡೆಸಿ ಚಂದ್ರನ ಸುಮಾರು 100 ಕಿಮೀ ಅಂತರದಲ್ಲಿ ಲ್ಯಾಂಡರ್ ಅನ್ನು ತಂದು ನಿಲ್ಲಿಸಲಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು(ಇಸ್ರೋ) ಜುಲೈ 14 ರಂದು ಚಂದ್ರಯಾನ-3 ಗಗನನೌಕೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. ನೌಕಾಯಾನ ಆರಂಭವಾಗಿ ಇಂದಿಗೆ ಒಂದು ತಿಂಗಳು ಮತ್ತು ಆರು ದಿನಗಳು ಕಳೆದಿವೆ. ಬಾಹುಬಲಿ ಎಂದೇ ಖ್ಯಾತಿಯಾದ ಜಿಎಸ್ಎಲ್ವಿ ಮಾರ್ಕ್ 3 ದೈತ್ಯ ವಾಹನದಲ್ಲಿನ ಉಪಗ್ರಹವನ್ನು ಆಗಸ್ಟ್ 5 ರಂದು ಚಂದ್ರನ ಕಕ್ಷೆಗೆ ಸೇರಿಸಲಾಗಿತ್ತು. ಅಂದಿನಿಂದ ಹಲವು ಕಕ್ಷೆ ಇಳಿಸುವ ಯತ್ನ ನಡೆಸಿ ಇದೀಗ ಚಂದ್ರನ ಚುಂಬಿಸಲು ದಿನಗಣನೆ ಆರಂಭವಾಗಿದೆ.
ಚಂದ್ರಯಾನ-3 ಯೋಜನೆಯನ್ನು 250 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದನ್ನು 2020 ರ ಜನವರಿಯಲ್ಲಿ ಪ್ರಾರಂಭಿಸಲಾಯಿತು. 2021 ರಲ್ಲಿ ಉಡಾವಣೆ ಮಾಡಲು ಯೋಜಿಸಲಾಗಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕ ಹರಡಿದ ಕಾರಣ ಮಿಷನ್ ಅನಿರೀಕ್ಷಿತವಾಗಿ ವಿಳಂಬ ಕಂಡಿತ್ತು.
2019 ರಲ್ಲಿ ನಡೆಸಲಾಗಿದ್ದ ಚಂದ್ರಯಾನ-2 ಮಿಷನ್ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಸಮಯದಲ್ಲಿ ತಾಂತ್ರಿಕ ದೋಷಕ್ಕೀಡಾಗಿ ಚಂದ್ರನ ಮೇಲೆ ಪತನವಾಗಿತ್ತು. ಅಂದಿನ ವೈಫಲ್ಯಗಳನ್ನೇ ಆಧಾರವಾಗಿಟ್ಟುಕೊಂಡು ಚಂದ್ರಯಾನ-3 ಯೋಜನೆಯನ್ನು ಇಸ್ರೋ ವಿಜ್ಞಾನಿಗಳು ರೂಪಿಸಿದ್ದಾರೆ.
ಇದನ್ನೂ ಓದಿ: ಚಂದ್ರಯಾನ 3: ಚಂದ್ರಾನ್ವೇಷಣೆಯ ಯಶಸ್ಸಿಗೆ ವೈಫಲ್ಯದಿಂದ ಕಲಿತ ಪಾಠಗಳ ಆಧಾರಿತ ವಿನ್ಯಾಸ