ETV Bharat / science-and-technology

ಭಾರತದಲ್ಲಿ 6G ಅಭಿವೃದ್ಧಿಗಾಗಿ ಭಾರತ್ 6G ಅಲೈಯನ್ಸ್ ಅನಾವರಣ..! ಏನಿದು ಯೋಜನೆ?

ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವಾಲಯ ಇಂದು ’ಭಾರತ್ 6G ಅಲೈಯನ್ಸ್ ‘ಅನ್ನು ಅನಾವರಣಗೊಳಿಸಿದೆ. ಇದು ದೇಶದಲ್ಲಿ 6G ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡಿರುವ ಒಂದು ಉಪಕ್ರಮವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Centre launches Bharat 6G alliance as India acquires 200 6G patents
ಭಾರತದಲ್ಲಿ 6G ಅಭಿವೃದ್ಧಿಗಾಗಿ ಭಾರತ್ 6G ಅಲೈಯನ್ಸ್ ಅನಾವರಣ..! ಏನಿದು ಯೋಜನೆ?
author img

By

Published : Jul 3, 2023, 8:56 PM IST

ನವದೆಹಲಿ: ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಸೋಮವಾರ ಭಾರತ್ 6G ಅಲೈಯನ್ಸ್ ಅನಾವರಣಗೊಳಿಸಿದರು. ಇದು 5Gಯ ಯಶಸ್ವಿ ಕಾರ್ಯಾಚರಣೆ ನಂತರ ಭಾರತದಲ್ಲಿ ಮುಂದಿನ ಪೀಳಿಗೆಯ ತಂತ್ರಜ್ಞಾನವನ್ನು ಪ್ರಾರಂಭಿಸಲು ಹೊಸ ಉಪಕ್ರಮವಾಗಿದೆ. ಭಾರತ್ 6G ಅಲಯನ್ಸ್ ಸಾರ್ವಜನಿಕ ವಲಯ, ಖಾಸಗಿ ವಲಯ ಮತ್ತು ಇತರ ಇಲಾಖೆಗಳ ಒಕ್ಕೂಟವಾಗಿದ್ದು, ದೇಶದಲ್ಲಿ ಹೊಸ ಟೆಲಿಕಾಂ ತಂತ್ರಜ್ಞಾನ ಮತ್ತು 6G ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ.

“6G ತಂತ್ರಜ್ಞಾನಕ್ಕಾಗಿ ಭಾರತವು 200 ಪೇಟೆಂಟ್‌ಗಳನ್ನು ಪಡೆದುಕೊಂಡಿದೆ. ಮುಂಬರುವ 6G ತಂತ್ರಜ್ಞಾನವು 5G ಹಾಕಿದ ಅಡಿಪಾಯದ ಮೇಲೆ ಮತ್ತಷ್ಟು ಬೆಳವಣಿಗೆ ಹೊಂದಲಿದೆ. ದೇಶದಲ್ಲಿ ಇನ್ನಷ್ಟು ಸುಧಾರಿತ ವಿಶ್ವಾಸಾರ್ಹತೆ, ಅಲ್ಟ್ರಾ-ಕಡಿಮೆ ಸುಪ್ತತೆ ಮತ್ತು ಕೈಗೆಟುಕುವ ದರದಲ್ಲಿ ವರ್ಧಿತ ಸಾಮರ್ಥ್ಯದ ಇಂಟರ್​ನೆಟ್​ ಸೇವೆಯನ್ನು ನೀಡುತ್ತದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್​​​ ಹೇಳಿದ್ದಾರೆ. ಈ ಸಂಬಂಧ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮುಂಬರುವ ಕೆಲವು ವಾರಗಳಲ್ಲಿ ಟೆಲಿಕಾಂ ಸುಧಾರಣೆಗಳ ಮುಂದಿನ ಕಾರ್ಯಯೋಜನೆಯನ್ನು ಸರ್ಕಾರ ಹೊರತರಲಿದೆ ಎಂದು ಸಚಿವರು ಇದೇ ವೇಳೆ ಘೋಷಿಸಿದರು.

6G ತಂತ್ರಜ್ಞಾನ 5G ಗಿಂತ ಸುಮಾರು 100 ಪಟ್ಟು ವೇಗದಲ್ಲಿ ಕೆಲಸ ಮಾಡುತ್ತದೆ. ಹೊಸ ಸಂವಹನ ಅಪ್ಲಿಕೇಶನ್‌ಗಳ ಅಭಿವೃದ್ಧಿಯನ್ನು ಆದಷ್ಟು ವೇಗವಾಗಿ ಸಕ್ರಿಯಗೊಳಿಸುತ್ತದೆ. ಭಾರತ್ 6G ಅಲಯನ್ಸ್ ಮುಂದಿನ ದಶಕದಲ್ಲಿ ಉದಯೋನ್ಮುಖ ಟೆಲಿಕಾಂ ತಂತ್ರಜ್ಞಾನಗಳು ಮತ್ತು ಪ್ಲಾಟ್‌ಫಾರ್ಮ್‌ಗಳ ವಿವಿಧ ಅಂಶಗಳ ಕುರಿತು ಚರ್ಚಿಸಲಿದೆ. ಈ ವರ್ಷದ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 6ಜಿ ವಿಷನ್ ಡಾಕ್ಯುಮೆಂಟ್ ಅನ್ನು ಅನಾವರಣಗೊಳಿಸಿದ್ದರು.

ಕೇಂದ್ರ ಮಾಹಿತಿ ಮತ್ತು ಸಂವಹನ ಖಾತೆಯ ರಾಜ್ಯ ಸಚಿವ ದೇವುಸಿನ್ಹ್ ಚೌಹಾನ್ ಮಾತನಾಡಿ, ಭಾರತವು 5G ನೆಟ್‌ವರ್ಕ್‌ಗಳ ತ್ವರಿತ ರೋಲ್‌ಔಟ್‌ಗಳಲ್ಲಿ ಕೆಲಸ ಮಾಡುತ್ತಿದೆ. ಮುಂದಿನ ಒಂಬತ್ತು ತಿಂಗಳೊಳಗೆ 2.70 ಲಕ್ಷ 5G ಸೈಟ್‌ಗಳನ್ನು ಅಭಿವೃದ್ಧಿ ಪಡಿಸಲಾಗುವುದು. 6ಜಿ ಉಪಕ್ರಮವು ನವೋದ್ಯಮಗಳು, ಕೈಗಾರಿಕೆಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ಮೋದಿ ಈಗಾಗಲೇ ಒತ್ತಿ ಹೇಳಿದ್ದಾರೆ ಎಂದರು. ಕೆಲವೇ ವರ್ಷಗಳಲ್ಲಿ 6G ಟೆಲಿಕಾಂ ಸೇವೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಪ್ರಾರಂಭಿಸುವ ಭಾರತದ ಯೋಜನೆಗಳನ್ನು ವಿವರಿಸುವ ವಿಷನ್ ಡಾಕ್ಯುಮೆಂಟ್ ಅನ್ನು ಪ್ರಧಾನಿ ಕಳೆದ ಮಾರ್ಚ್​ನಲ್ಲಿ ಬಿಡುಗಡೆ ಮಾಡಿದ್ದರು.

ಇದನ್ನು ಓದಿ:Twitter new rule: ಟ್ವಿಟರ್ ಡೌನ್‌ ಬೆನ್ನಲ್ಲೇ ಬಂತು ಹೊಸ ನಿಯಮ! ನಿಮಗಿದು ಗೊತ್ತೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.