ETV Bharat / science-and-technology

ಖರೀದಿಗೆ, ಬಿಲ್ ಪಾವತಿಗೆ ಮೊಬೈಲ್ ನಂಬರ್ ಕೇಳುವಂತಿಲ್ಲ: ಐಟಿ ಇಲಾಖೆ ವಾರ್ನಿಂಗ್ - ಫೋನ್ ನಂಬರ್ ಪಡೆದುಕೊಳ್ಳುವುದು ನಿಯಮಗಳ ಉಲ್ಲಂಘನೆ

ನಗರದ ಕೆಲವು ಶಾಪಿಂಗ್ ಮಾಲ್‌ಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಖರೀದಿ ಮಾಡುವಾಗ ಕಡ್ಡಾಯವಾಗಿ ದೂರವಾಣಿ ಸಂಖ್ಯೆಗಳನ್ನು ಪಡೆದುಕೊಳ್ಳುತ್ತಾರೆ. ಅವನ್ನು ಅವರು ಕಾಲ್ ಸೆಂಟರ್‌ಗಳಿಗೆ ನೀಡುತ್ತಿದ್ದಾರೆ. ಈ ಮಾಹಿತಿ ಸೈಬರ್ ಕಳ್ಳರ ಪಾಲಾಗುತ್ತಿರುವುದರಿಂದ ಅನೇಕರು ಲಕ್ಷಗಟ್ಟಲೇ ಹಣ ಕಳೆದುಕೊಳ್ಳುತ್ತಿದ್ದಾರೆ.

ಖರೀದಿಗೆ, ಬಿಲ್ ಪಾವತಿಗೆ ಮೊಬೈಲ್ ನಂಬರ್ ಕೇಳುವಂತಿಲ್ಲ: ಐಟಿ ಇಲಾಖೆ ವಾರ್ನಿಂಗ್
cant-ask-mobile-number-for-purchase-bill-payment-it-department-warning
author img

By

Published : Sep 27, 2022, 4:41 PM IST

Updated : Sep 28, 2022, 12:10 PM IST

ಹೈದರಾಬಾದ್: ಬಳಕೆದಾರರ ಒಪ್ಪಿಗೆ ಇಲ್ಲದೇ ವೈಯಕ್ತಿಕ ಫೋನ್ ನಂಬರ್ ಪಡೆದುಕೊಳ್ಳುವುದು ನಿಯಮಗಳ ಉಲ್ಲಂಘನೆ ಎಂದು ಐಟಿ ಇಲಾಖೆ ಹೇಳಿದೆ. ಇಂತಹ ಘಟನೆಗಳು ಮರುಕಳಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರದ ಮಲಕಪೇಟೆಯಲ್ಲಿರುವ ಡೆಕಾಥ್ಲಾನ್ ಸಂಸ್ಥೆಗೆ ಎಚ್ಚರಿಕೆ ನೀಡಲಾಗಿದೆ.

ಕೆಲ ಕಾಲ್ ಸೆಂಟರ್​​ಗಳಿಂದ ಬರುವ ದೂರವಾಣಿ ಕರೆಗಳು ನಗರವಾಸಿಗಳಿಗೆ ಕಿರಿಕಿರಿ ಉಂಟುಮಾಡುತ್ತಿವೆ. ವೈಯಕ್ತಿಕ ಫೋನ್ ಸಂಖ್ಯೆಯನ್ನು ಅವರು ಹೇಗೆ ತಿಳಿದಿದ್ದಾರೆಂದು ಯಾರಿಗೂ ಅರ್ಥವಾಗುವುದಿಲ್ಲ. ಆದರೆ, ಬೆಳಗ್ಗೆ ಮತ್ತು ರಾತ್ರಿ ಬರುವ ಈ ಫೋನ್ ಕರೆಗಳು ಜನರಿಗೆ ಕಿರುಕುಳ ನೀಡುತ್ತಿರುವುದಂತೂ ಸತ್ಯ.

ನಗರದ ಕೆಲವು ಶಾಪಿಂಗ್ ಮಾಲ್‌ಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಖರೀದಿ ಮಾಡುವಾಗ ಕಡ್ಡಾಯವಾಗಿ ದೂರವಾಣಿ ಸಂಖ್ಯೆಗಳನ್ನು ಪಡೆದುಕೊಳ್ಳುತ್ತಾರೆ. ಅವನ್ನು ಅವರು ಕಾಲ್ ಸೆಂಟರ್‌ಗಳಿಗೆ ನೀಡುತ್ತಿದ್ದಾರೆ. ಈ ಮಾಹಿತಿ ಸೈಬರ್ ಕಳ್ಳರ ಪಾಲಾಗುತ್ತಿರುವುದರಿಂದ ಅನೇಕರು ಲಕ್ಷಗಟ್ಟಲೆ ಹಣ ಕಳೆದುಕೊಳ್ಳುತ್ತಿದ್ದಾರೆ. ವೈಯಕ್ತಿಕ ಮಾಹಿತಿಗಳು ಮಾರುಕಟ್ಟೆಯಲ್ಲಿ ಸರಕಿನಂತೆ ಮಾರಾಟವಾಗುತ್ತಿರುವುದರಿಂದ ಗ್ರಾಹಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಕೊನೆಗೂ ಈಗ ಐಟಿ ಇಲಾಖೆ ಈ ಬಗ್ಗೆ ಗಂಭೀರವಾಗಿದೆ.

ಬಿಲ್ ಪಾವತಿಸಲು ವೈಯಕ್ತಿಕ ದೂರವಾಣಿ ಸಂಖ್ಯೆ ಕಡ್ಡಾಯ ಎಂದು ಡೆಕಾಥ್ಲಾನ್ ಸಿಬ್ಬಂದಿ ಒತ್ತಾಯಿಸಿದ್ದಾರೆ ಎಂದು ಇತ್ತೀಚೆಗೆ ಮಲಕಪೇಟೆಯ ಡೆಕಾಥ್ಲಾನ್‌ನಲ್ಲಿ ಶಾಪಿಂಗ್ ಮಾಡಿದ ತಾರ್​ನಕಾ ಪ್ರದೇಶದ ವಿಜಯ್ ಗೋಪಾಲ್ ಎಂಬುವರು ದೂರು ನೀಡಿದ್ದರು. ಇದು ಸೂಕ್ಷ್ಮ ವೈಯಕ್ತಿಕ ಡೇಟಾ ಅಥವಾ ಮಾಹಿತಿ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಐಟಿ ಇಲಾಖೆ ಪ್ರತಿಕ್ರಿಯಿಸಿದೆ.

ಕಂಪನಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಆದರೆ, ಕೇವಲ ನೋಟಿಸ್ ನೀಡಿ ಬಿಟ್ಟು ಬಿಡುವ ಬದಲು ರೂ. 25 ಸಾವಿರ ದಂಡ ವಿಧಿಸಿದರೆ, ಬೇರೆ ಕಂಪನಿಗಳು ಇಂಥ ಕೆಲಸ ಮಾಡುವುದಿಲ್ಲ ಎಂದು ದೂರುದಾರ ವಿಜಯಗೋಪಾಲ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಪಬ್​ನಲ್ಲಿ ಮೊಬೈಲ್​​ ನಂಬರ್​ ಕೊಡದ ಯುವತಿಗೆ ಅತ್ಯಾಚಾರ ಬೆದರಿಕೆ

Last Updated : Sep 28, 2022, 12:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.