ETV Bharat / science-and-technology

ಒಂದೇ ದಿನದಲ್ಲಿ ಎಲೆಕ್ಟ್ರಿಕ್​ ಕಾರು ತಯಾರಿಸಿದ ಆಟೋ ಚಾಲಕ!

ತೆಲಂಗಾಣದ ಗದ್ವಾಲ್​ ಜಿಲ್ಲೆಯ ಆಟೋ ಚಾಲಕನೊಬ್ಬ ಎಲೆಕ್ಟ್ರಿಕ್​ ಆಟೋ, ಕಾರು ರೂಪಿಸಿ ಹೆಸರಾಗಿದ್ದಾನೆ. ಕಡಿಮೆ ವೆಚ್ಚದಲ್ಲಿ ಉತ್ತಮ ಕಾರು ತಯಾರಿಸಿದ್ದು, ಯುವ ಕಾರ್ನಿವಲ್​ನಲ್ಲಿ ಪ್ರದರ್ಶಿಸಿದ್ದಾನೆ.

ಎಲೆಕ್ಟ್ರಿಕ್​ ಕಾರು ರೂಪಿಸಿದ ಆಟೋ ಚಾಲಕ
ಎಲೆಕ್ಟ್ರಿಕ್​ ಕಾರು ರೂಪಿಸಿದ ಆಟೋ ಚಾಲಕ
author img

By

Published : Mar 22, 2023, 12:57 PM IST

Updated : Mar 22, 2023, 1:33 PM IST

ಒಂದೇ ದಿನದಲ್ಲಿ ಎಲೆಕ್ಟ್ರಿಕ್​ ಕಾರು ತಯಾರಿಸಿದ ಆಟೋ ಚಾಲಕ

ಗದ್ವಾಲ್​(ತೆಲಂಗಾಣ): ಇಂಧನ ಬೆಲೆಗಳು ಗಗನಕ್ಕೇರುತ್ತಿವೆ. ಪೆಟ್ರೋಲ್, ಡೀಸೆಲ್ ವಾಹನಗಳಿಂದ ಮಾಲಿನ್ಯವೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಎಲೆಕ್ಟ್ರಿಕ್ ವಾಹನಗಳತ್ತ ವಾಲುತ್ತಿದ್ದಾರೆ. ಆದರೆ, ಇವುಗಳ ಬೆಲೆ ದುಬಾರಿಯಾಗಿದೆ. ಆಟೋ ಚಾಲಕನೊಬ್ಬ ಎಲೆಕ್ಟ್ರಿಕ್​ ಆಟೋ ಖರೀದಿಸಲು ಮುಂದಾಗಿದ್ದ. ಆದರೆ, ದುಬಾರಿಯಾದ ಕಾರಣ ಆತನೇ, ಶ್ರಮವಹಿಸಿ ಎಲೆಕ್ಟ್ರಿಕ್​ ಆಟೋವನ್ನು ತಯಾರಿಸಿದ್ದಾನೆ. ಮುಂದುವರಿದು ಆತ, ಎಲೆಕ್ಟ್ರಿಕ್ ಕಾರನ್ನೂ ರೂಪಿಸಿದ್ದಾನೆ. ಮತ್ತು ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಯುವ ಕಾರ್ನೀವಲ್‌ನಲ್ಲಿ ಪ್ರದರ್ಶಿಸಿ ಮೆಚ್ಚುಗೆಗೂ ಪಾತ್ರನಾಗಿದ್ದಾನೆ.

ಗದ್ವಾಲ ಜಿಲ್ಲೆಯ ಉಂಡವಳ್ಳಿ ಮಂಡಲದ ಬೊಂಕೂರು ಗ್ರಾಮದ ಆಟೋ ಚಾಲಕ ಬೀಚುಪಲ್ಲಿ ಈ ಆವಿಷ್ಕಾರದ ಹಿಂದಿನ ನಿರ್ಮಾತೃ. ಓದಿದ್ದು ಡಿಗ್ರಿ ಆದರೂ ಕೆಲಸ ಸಿಗದೇ ನಿರುದ್ಯೋಗಿಯಾಗಿದ್ದ. ಜೀವನ ನಿರ್ವಹಣೆಗಾಗಿ ಆತ, ಆಟೋ ಚಾಲಕ ವೃತ್ತಿ ಆಯ್ದುಕೊಂಡಿದ್ದ. ಕರ್ನೂಲ್​ನಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಇಂಧನ ಬೆಲೆ ಹೆಚ್ಚಿದ ಕಾರಣ ಎಲೆಕ್ಟ್ರಿಕ್ ಆಟೋ ಖರೀದಿಸಲು ನಿರ್ಧರಿಸಿದ್ದ. ಆದರೆ ಸಾಮಾನ್ಯ ಆಟೋಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಆಟೋಗಳ ಬೆಲೆ ತುಸು ದುಬಾರಿ. ಅದನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಭಾವಿಸಿದ ಆತ ತಾನೇ ಒಂದು ಎಲೆಕ್ಟ್ರಿಕ್​ ಆಟೋ ರೂಪಿಸಲು ಪ್ಲಾನ್​ ಮಾಡಿದ್ದಾನೆ. ಕೇವಲ 80 ಸಾವಿರ ರೂಪಾಯಿ ವೆಚ್ಚದಲ್ಲಿ ಹಳೆಯ ಎಲೆಕ್ಟ್ರಿಕ್ ವಾಹನಗಳ ಬಿಡಿ ಭಾಗಗಳೊಂದಿಗೆ ಆಟೋ ತಯಾರಿಸಿದ್ದಾನೆ. ಕಡಿಮೆ ವೆಚ್ಚದಲ್ಲಿ ಜನರಿಗೆ ಸೇವೆ ನೀಡುತ್ತಿದ್ದಾನೆ.

ಎಲೆಕ್ಟ್ರಿಕ್​ ಕಾರು ತಯಾರಿ: ಇಷ್ಟಕ್ಕೇ ಬಿಡದ ಆತ, ಕಾರೊಂದನ್ನು ತಾನೇ ರೂಪಿಸಿದ್ದಾನೆ. ತಾನು ಪಡೆದಿದ್ದ ವಾಹನ ತಯಾರಿಕಾ ಅನುಭವದಿಂದ ಮಾರುತಿ 800 ಕಾರಿನ ಹಳೆಯ ಭಾಗಗಳನ್ನು ಸಂಗ್ರಹಿಸಿ, ಎಲೆಕ್ಟ್ರಿಕ್ ಕಾರಿಗೆ ಬೇಕಾದ ಬಿಡಿಭಾಗಗಳನ್ನು ದೆಹಲಿಯಲ್ಲಿ ಖರೀದಿಸಿ ತಂದಿದ್ದಾನೆ. 4 ಬ್ಯಾಟರಿಗಳು, ಡಿಸಿ ಮೋಟಾರ್, 48 ವ್ಯಾಟ್ ಕಂಟ್ರೋಲರ್ ಮತ್ತು ಇತರ ಸಾಧನಗಳನ್ನು ಬಳಸಿ ಎಲೆಕ್ಟ್ರಿಕ್ ಕಾರನ್ನು ತಯಾರಿಸಿದ್ದಾನೆ. ಇದಕ್ಕೆ ಕೇವಲ 1.20 ಲಕ್ಷ ರೂಪಾಯಿ ವೆಚ್ಚ ತಗುಲಿದೆ. ಅಚ್ಚರಿ ಅಂದರೆ ಕೇವಲ ಒಂದೇ ದಿನದಲ್ಲಿ ಈ ಎಲೆಕ್ಟ್ರಿಕ್ ಕಾರನ್ನು ಈತ ಸಿದ್ಧಪಡಿಸಿದ್ದಾನಂತೆ.

ಹೆವಿ ಗೇಜ್​ನಿಂದ ತಯಾರಾಗಿರುವ ಈ ಎಲೆಕ್ಟ್ರಿಕ್ ಕಾರಿನ ಗುಣಮಟ್ಟ ಉತ್ತಮವಾಗಿದೆ. ಸಾಮಾನ್ಯ ಕಾರು ತಯಾರಿಕೆಗೆ ಹೋಲಿಸಿದರೆ ಉತ್ಪಾದನಾ ವೆಚ್ಚ ತೀರಾ ಕಡಿಮೆಯಾಗಿದೆ ಎಂದು ಆಟೋ ಚಾಲಕ ಬೀಚುಪಲ್ಲಿ ಹೇಳುತ್ತಾರೆ. 1000 ವ್ಯಾಟ್ ಡಿಸಿ ಮೋಟಾರ್ ಅಳವಡಿಸಿದ್ದು, 5 ಕ್ವಿಂಟಾಲ್ ತೂಕವನ್ನು ಇದು ಎಳೆಯುತ್ತದೆ. 10 ಜನರು ಕಾರಿನಲ್ಲಿ ಪ್ರಯಾಣಿಸಬಹುದು. ಒಮ್ಮೆ ಚಾರ್ಜ್ ಮಾಡಿದರೆ 70 ರಿಂದ 80 ಕಿಲೋಮೀಟರ್ ಪ್ರಯಾಣಿಸಬಹುದು. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 6 ಗಂಟೆ ತೆಗೆದುಕೊಳ್ಳುತ್ತದೆ. ಗಂಟೆಗೆ 40 ಕಿ.ಮೀ ವೇಗದಲ್ಲಿ ಹೋದರೆ ಉತ್ತಮ ಮೈಲೇಜ್ ಸಿಗುತ್ತದೆ. ವಿದ್ಯುತ್ ಚಾರ್ಜಿಂಗ್ ವೆಚ್ಚ ಕೇವಲ 20 ರಿಂದ 30 ರೂ. ಆಗಿದೆ. ಪ್ರತಿ ಬಳಕೆದಾರರಿಗೆ 50 ರೂ. ಚಾರ್ಜ್​ ಮಾಡುತ್ತಾನಂತೆ ಬೀಚುಪಲ್ಲಿ.

ಸಾಮಾನ್ಯ ಬಳಕೆಗೆ ಉಪಕಾರಿ: ಈ ಎಲೆಕ್ಟ್ರಿಕ್ ಕಾರನ್ನು ರೈತರು ಜಮೀನುಗಳಿಗೆ ಕೂಲಿ ಆಳುಗಳನ್ನು ಸಾಗಿಸಲು ಅಥವಾ ಮನೆಗೆ ಧಾನ್ಯವನ್ನು ತರಲು ಬಳಸಬಹುದು. ದಿನಸಿ ವ್ಯಾಪಾರಿಗಳು ಡೆಲಿವರಿ, ಮೊಬೈಲ್ ಟಿಫಿನ್ ಸೆಂಟರ್, ಪಾನಿಪುರಿ ಮತ್ತು ಇತರ ಅಂಗಡಿಗಳಿಗೂ ಇದು ಉಪಕಾರಿ ಎಂದು ಬೀಚುಪಲ್ಲಿ ಹೇಳುತ್ತಾನೆ.

ಎಲೆಕ್ಟ್ರಿಕ್ ಕಾರನ್ನು ತಯಾರಿಸಿದ ಬೀಚುಪಲ್ಲಿಗೆ 2022 ರಲ್ಲಿ ಗದ್ವಾಲಾ ಜಿಲ್ಲಾಧಿಕಾರಿ ಪ್ರಶಸ್ತಿಯ ಭಾಗವಾಗಿ ಇನ್ನೋವೇಟರ್‌ಗಳನ್ನು ನೀಡಿದ್ದಾರೆ. ಇದೇ ತಿಂಗಳು ಹೈದರಾಬಾದ್‌ನಲ್ಲಿ ನಡೆದ ಯುವ ಕಾರ್ನೀವಲ್‌ನಲ್ಲಿ ಕಾರನ್ನು ಪ್ರದರ್ಶಿಸಲಾಯಿತು. ಕೇವಲ 1 ಲಕ್ಷದ 20 ಸಾವಿರದಲ್ಲಿ ತಯಾರಾದ ಈ ಕಾರು ಜನರ ಗಮನ ಸೆಳೆದಿದೆ. ಅನೇಕ ವ್ಯಾಪಾರಿಗಳು ಇದನ್ನು ಖರೀದಿಸಲು ಬಯಸಿದ್ದರೂ, ಕಾರನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಕಾರಣ ಬೀಚುಪಲ್ಲಿ ಮಾರಾಟಕ್ಕೆ ನಿರಾಕರಿಸಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್​: 100 ಎಫ್​ಐಆರ್​, 6 ಜನರ ಬಂಧನ

Last Updated : Mar 22, 2023, 1:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.