ETV Bharat / science-and-technology

ಆದಿತ್ಯ - ಎಲ್1 ಉಡಾವಣೆ ಯಶಸ್ವಿ: ಗಗನನೌಕೆಗೆ ಶುಭ ಹಾರೈಸೋಣ ಎಂದ ಇಸ್ರೋ ಅಧ್ಯಕ್ಷ.. ರಾಷ್ಟ್ರಪತಿ, ಪ್ರಧಾನಿ ಅಭಿನಂದನೆ

ಆದಿತ್ಯ-ಎಲ್1 ಗಗನನೌಕೆ ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ ವಿಜ್ಞಾನಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

Aditya L1 sun mission: Spacecraft successfully separates from PSLV rocket, says ISRO
ಆದಿತ್ಯ-ಎಲ್1 ಉಡಾವಣೆ ಯಶಸ್ವಿ: ಗಗನನೌಕೆಗೆ ಶುಭ ಹಾರೈಸೋಣ ಎಂದ ಇಸ್ರೋ ಅಧ್ಯಕ್ಷ
author img

By ETV Bharat Karnataka Team

Published : Sep 2, 2023, 1:42 PM IST

ಶ್ರೀಹರಿಕೋಟಾ (ಆಂಧ್ರಪ್ರದೇಶ): ಸೂರ್ಯ ಅಧ್ಯಯನಕ್ಕಾಗಿ ಭಾರತದ ಇಸ್ರೋ ಸಂಸ್ಥೆಯು ಇಂದು ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ನಿರೀಕ್ಷೆಯಂತೆ ಪಿಎಸ್‌ಎಲ್‌ವಿ ರಾಕೆಟ್‌ನಿಂದ ಆದಿತ್ಯ-ಎಲ್1 ಗಗನನೌಕೆ ಯಶಸ್ವಿಯಾಗಿ ಬೇರ್ಪಟ್ಟಿದೆ. ಇಂದಿನಿಂದ 125 ದಿನಗಳ ಸುದೀರ್ಘ ಪ್ರಯಣ ನಡೆಸಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದರು. ಇದೇ ವೇಳೆ, ಆದಿತ್ಯ-ಎಲ್1 ಯಶಸ್ವಿ ಉಡಾವಣೆ ಮಾಡಿದ ಇಸ್ರೋ ವಿಜ್ಞಾನಿಗಳಿಗೆ ರಾಷ್ಟ್ರಪತಿ ಹಾಗೂ ಪ್ರಧಾನಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

  • PSLV-C57/Aditya-L1 Mission:

    The launch of Aditya-L1 by PSLV-C57 is accomplished successfully.

    The vehicle has placed the satellite precisely into its intended orbit.

    India’s first solar observatory has begun its journey to the destination of Sun-Earth L1 point.

    — ISRO (@isro) September 2, 2023 " class="align-text-top noRightClick twitterSection" data=" ">

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 11.52ಕ್ಕೆ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯು ನಭಕ್ಕೆ ಚಿಮ್ಮಿತು. ನೌಕೆಯು ಹಲವು ಪ್ರಕ್ರಿಯೆಗಳಿಗೆ ಒಳಗಾದ ನಂತರ ಯಶಸ್ವಿ ಉಡಾವಣೆ ಬಗ್ಗೆ ಇಸ್ರೋ ಪ್ರಕಟಿಸಿತು. ಬಳಿಕ ಮಾತನಾಡಿದ ಇಸ್ರೋ ಅಧ್ಯಕ್ಷರು, ಆದಿತ್ಯ-ಎಲ್1 ಮಿಷನ್​ನಂತರ ವಿಭಿನ್ನ ಮಿಷನ್​ಗಳನ್ನು ಯಶಸ್ವಿಯಾಗಿ ಮಾಡಿದ ನಾನು ಪಿಎಸ್‌ಎಲ್‌ವಿ ರಾಕೆಟ್​ಗೆ ಅಭಿನಂದಿಸುತ್ತೇನೆ. ಈಗಿನಿಂದಲೇ ಆದಿತ್ಯ-ಎಲ್1 ಮಿಷನ್ ತನ್ನ ಪ್ರಯಾಣವನ್ನು ಎಲ್​1 ಪಾಯಿಂಟ್‌ನಿಂದ ಪ್ರಾರಂಭಿಸುತ್ತದೆ. ಇದು ಸುಮಾರು 125 ದಿನಗಳ ಸುದೀರ್ಘ ಪ್ರಯಾಣವಾಗಿದೆ. ಆದಿತ್ಯ ಬಾಹ್ಯಾಕಾಶ ನೌಕೆಗೆ ಶುಭ ಹಾರೈಸೋಣ ಎಂದು ಹೇಳಿದರು.

  • The launch of Aditya-L1, India's first solar mission, is a landmark achievement that takes India’s indigenous space programme to a new trajectory. It will help us better understand space and celestial phenomena. I congratulate the scientists and engineers at @isro for this…

    — President of India (@rashtrapatibhvn) September 2, 2023 " class="align-text-top noRightClick twitterSection" data=" ">

ಇದನ್ನೂ ಓದಿ: Explained: ಆದಿತ್ಯ-ಎಲ್1 ನೌಕೆಯಲ್ಲಿವೆ 7 ಉಪಕರಣಗಳು; ಇವುಗಳ ಕಾರ್ಯವೇನು?

ರಾಷ್ಟ್ರಪತಿ, ಪ್ರಧಾನಿ ಅಭಿನಂದನೆ​: ಆದಿತ್ಯ-ಎಲ್1 ಯಶಸ್ವಿ ಉಡಾವಣೆ ಬೆನ್ನಲ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್1ರ ಉಡಾವಣೆಯು ಭಾರತದ ಸ್ಥಳೀಯ ಬಾಹ್ಯಾಕಾಶ ಕಾರ್ಯಕ್ರಮವನ್ನು ಹೊಸ ಪಥಕ್ಕೆ ಕೊಂಡೊಯ್ಯುವ ಒಂದು ಹೆಗ್ಗುರುತು ಸಾಧನೆಯಾಗಿದೆ ಎಂದು ರಾಷ್ಟ್ರಪತಿ ಮುರ್ಮು ಬಣ್ಣಿಸಿದ್ದಾರೆ. ಬಾಹ್ಯಾಕಾಶ ಮತ್ತು ಆಕಾಶದ ವಿದ್ಯಮಾನಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ. ಈ ಅಸಾಧಾರಣ ಸಾಧನೆಗಾಗಿ ಇಸ್ರೋ ವಿಜ್ಞಾನಿಗಳು ಹಾಗೂ ಎಂಜಿನಿಯರ್‌ಗಳನ್ನು ನಾನು ಅಭಿನಂದಿಸುತ್ತೇನೆ. ಈ ಮಿಷನ್ ಯಶಸ್ವಿಯಾಗಲು ನನ್ನ ಶುಭ ಹಾರೈಕೆಗಳು ಎಂದು ಅವರು ತಮ್ಮ ಟ್ವೀಟ್​ ತಿಳಿಸಿದ್ದಾರೆ.

  • After the success of Chandrayaan-3, India continues its space journey.

    Congratulations to our scientists and engineers at @isro for the successful launch of India’s first Solar Mission, Aditya -L1.

    Our tireless scientific efforts will continue in order to develop better…

    — Narendra Modi (@narendramodi) September 2, 2023 " class="align-text-top noRightClick twitterSection" data=" ">

ಚಂದ್ರಯಾನ-3 ರ ಯಶಸ್ಸಿನ ನಂತರ ಭಾರತವು ತನ್ನ ಬಾಹ್ಯಾಕಾಶ ಪ್ರಯಾಣವನ್ನು ಮುಂದುವರೆಸಿದೆ. ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್​1ರ ಯಶಸ್ವಿ ಉಡಾವಣೆಗಾಗಿ ನಮ್ಮ ಇಸ್ರೋ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಅಲ್ಲದೇ, ಇಡೀ ಮನುಕುಲದ ಕಲ್ಯಾಣಕ್ಕಾಗಿ ಬ್ರಹ್ಮಾಂಡದ ಬಗ್ಗೆ ಉತ್ತಮ ತಿಳಿವಳಿಕೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ನಮ್ಮ ದಣಿವರಿಯದ ವೈಜ್ಞಾನಿಕ ಪ್ರಯತ್ನಗಳು ಮುಂದುವರೆಯುತ್ತವೆ ಎಂದೂ ಪ್ರಧಾನಿ ಹೇಳಿದ್ದಾರೆ.

  • VIDEO | "I congratulate PSLV for such a very different mission approach to do the Aditya-L1 Mission. From now, the Mission will start its journey from the L1 point. It's a very long journey of almost 125 days. Let us wish all the best to Aditya spacecraft," says ISRO chairman S… pic.twitter.com/scFLcChVuK

    — Press Trust of India (@PTI_News) September 2, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಆದಿತ್ಯ ಎಲ್​1 ರಾಕೆಟ್ ಉಡ್ಡಯನ ಯಶಸ್ವಿ .. ಲಾಗ್ರೇಂಜ್​​​ನತ್ತ ಪಯಣ.. ಇಸ್ರೋದಿಂದ ಮತ್ತೊಂದು ಸಾಧನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.